ಹನುಮಂತು ಬಾಲಕ್ಕೆ ಬೆಂಕಿ ಹಚ್ಚಿದ್ರಾ ಬಿಗ್ ಬಾಸ್; ಏನಿದು ಈ ಹುಚ್ಚಾಟ!

By Sathish Kumar KH  |  First Published Nov 7, 2024, 3:56 PM IST

ಬಿಗ್ ಬಾಸ್ ಮನೆಯಲ್ಲಿ ಹನುಮಂತ ಕ್ಯಾಪ್ಟನ್ ಆಗಿ ಎರಡು ವಾರ ಪೂರೈಸಿದ್ದು, ಹೊಸ ಟಾಸ್ಕ್‌ನಲ್ಲಿ ತನ್ನ ವಿಶಿಷ್ಟ ಆಟದಿಂದ ಎಲ್ಲರನ್ನೂ ರೋಸಿ ಹೋಗುವಂತೆ ಮಾಡಿದ್ದಾನೆ. ನೀರು ತುಂಬಿದ ಡಬ್ಬಿಗಳನ್ನು ಬೀಳಿಸುವ ಮೂಲಕ ಹನುಮಂತ 'ಬಾಲ ಚಿವುಟಿದ ಗೂಳಿ'ಯಂತೆ ವರ್ತಿಸಿದ್ದಾನೆ.


ಬೆಂಗಳೂರು (ನ.07): ಕನ್ನಡ ಬಿಗ್ ಬಾಸ್ ಮನೆಯಲ್ಲಿ ಎರಡು ವಾರ ಕ್ಯಾಪ್ಟನ್ ಆಗಿರುವ ಹನುಮಂತು ಇದೀಗ ಟಾಸ್ಕ್‌ ಒಂದರಲ್ಲಿ ಆಟವಾಡಲು ಮುಂದಾಗಿದ್ದು, ಇದರಲ್ಲಿ ಮನೆ ಮಂದಿಗೆಲ್ಲಾ ಕ್ವಾಟ್ಲೆ ಕೊಟ್ಟಿದ್ದಾನೆ. ನೀರನ್ನು ತುಂಬಿಕೊಂಡು ಸುತ್ತುವ ಟಾಸ್ಕ್‌ನಲ್ಲಿ ಬಾಲ ಚಿವುಟಿದ ಗೂಳಿಯಂತೆ ಎಲ್ಲರನ್ನೂ ಗುಮ್ಮುತ್ತಾ ಬೀಳಿಸುತ್ತಿದ್ದಾನೆ. ಇದರಿಂದ ಮನೆ ಮಂದಿಯೆಲ್ಲಾ ರೋಸಿ ಹೋಗಿದ್ದಾರೆ. ಆದರೆ, ಕೆಲವರು ಮಾತ್ರ ಬಿಗ್ ಬಾಸ್ ಹೇಳಿದ ರೂಲ್ಸ್ ಅನ್ವಯ ಹನುಮಂತ ಆಡುತ್ತಿರುವ ಆಟವೇ ಸರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಕೊಡಲಾದ ಟಾಸ್ಕ್‌ನಲ್ಲಿ ನೀರನ್ನು ತುಂಬಿಕೊಂಡು ನವಗ್ರಹಗಳನ್ನು ಸೃಷ್ಟಿಸಿರುವ ವೇದಿಕೆಯ ಸುತ್ತಲೂ ಗ್ರಹಗಳಂತೆ ಸುತ್ತಬೇಕು. ಈ ಟಾಸ್ಕ್‌ನಲ್ಲಿ ಹೆಚ್ಚು ನೀರನ್ನು ಉಳಿಸಿಕೊಂಡ ಸ್ಪರ್ಧಿ ಗೆಲ್ಲುತ್ತಾರೆ. ಆದರೆ, ಹನುಮಂತ ತನ್ನ ಬಾಟಲಿಯನ್ನು ನೀರನ್ನು ಹಿಡಿದುಕೊಂಡು ಎಲ್ಲರ ನೀರಿನ ಡಬ್ಬಿಗಳನ್ನು ಬೀಳಿಸುತ್ತಾ ಹುಚ್ಚಾಟ ಮೆರೆದಿದ್ದಾನೆ. ಇನ್ನು ರಾಮಾಯಣದ ಹನುಂತನ ಬಾಲಕ್ಕೆ ಬೆಂಚಿ ಹಚ್ಚಿದಾಗ ಕೌರವರ ಇಡೀ ಲಂಕೆಗೆ ಬೆಂಕಿ ಹಚ್ಚಿ ಸುಟ್ಟಂತೆ, ಇಲ್ಲಿ ಬಿಗ್ ಬಾಸ್ ಮನೆಯಲ್ಲಿಯೂ ಹನುಮಂತನ ಆಟದಿಂದ ಮನೆಮಂದಿ ದಂಗಾಗಿದ್ದಾರೆ. ಹನುಮಂತನನ್ನು ಹತ್ತಿಕ್ಕಲೂ ಆಗುತ್ತಿಲ್ಲ, ಬೈಯಲೂ ಆಗುತ್ತಿಲ್ಲ. ಯಾವಾಗಲೂ ನ್ಯಾಯದ ಪರವಾಗಿರುವ ಹನುಮಂತನನ್ನು ಹತ್ತಿಡಲಾಗದೇ ಇತರೆ ಸ್ಪರ್ಧಿಗಳು  ಕೈ-ಕೈ ಹಿಚುಕಿಕೊಳ್ಳುತ್ತಿದ್ದಾರೆ. ಇದರಲ್ಲಿ ಉಗ್ರಂ ಮಂಜು, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

Tap to resize

Latest Videos

undefined

ಇದನ್ನೂ ಓದಿ: ಸಂತುಗೆ ಮುಖಕೊಟ್ಟು ನೋಡೋಕೆ ನಾಚಿಕೆ ಆಗ್ತಿದೆ ಎಂದ ಮಾನಸ

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಹಳ್ಳಿ ಹೈದ ಹನುಮಂತು ಸತತ ಎರಡು ವಾರಗಳ ಕಾಲ ಕ್ಯಾಪ್ಟನ್ ಆಗುವ ಮೂಲಕ ಕ್ಯಾಪ್ಟನ್ ಕಿಂಗ್ ಆಗಿದ್ದಾನೆ. ಆದರೆ, ಆತನ ಸರಳತೆ ಮತ್ತು ನ್ಯಾಯಪರ ಆಟಕ್ಕೆ ತಲೆದೂಗದವರೇ ಇಲ್ಲ. ಯಾರಿಗೂ ಮೋಸ ಮಾಡುವುದಿಲ್ಲ, ತಾನಿದ್ದ ಕಡೆಯಲ್ಲಿ ಯಾರಿಗೂ ಮೋಸ ಆಗುವುದಕ್ಕೂ ಬಿಡುವುದಿಲ್ಲ. ಇನ್ನು ಯಾರೇ ಕಾಲು ಕೆರೆದು ಮಾತಿಗೆ ಮಾತು ಬೆಳೆಸುತ್ತಾ ಬಂದರೂ ಅದನ್ನು ಮುಂದುವರೆಸದೇ ತಾನು ಹೇಳಿದ್ದೇ ಸರಿ, ನಿನಗೆ ಅವಕಾಶ ಸಿಕ್ಕಾಗಿ ನೀನೂ ನನಗೆ ಇದನ್ನೇ ಮಾಡು ಎಂದು ಹೇಳುವ ಮೂಲಕ ಜಗಳದ ಸನ್ನಿವೇಶವನ್ನೇ ಹತ್ತಿಟ್ಟುಬಿಡುತ್ತಾನೆ. ಇದರಿಂದ ಹನುಮಂತನನಿಗೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಒಬ್ಬ ಹಳ್ಳಿ ಹೈದ, ಕುರಿ ಕಾಯುವ ವ್ಯಕ್ತಿ ಲುಂಗಿ ಧರಿಸಿದ ಹನುಮಂತ ಸೆಲೆಬ್ರಿಟಿಗಳೇ ತುಂಬಿದ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದ್ದಾನೆ ಎಂಬುದು ಗ್ರಾಮೀಣ ಜನರಿಗೆ ಸಂತಸದ ವಿಚಾರವಾಗಿದೆ. ಈತ ಎಲ್ಲ ಗ್ರಾಮೀಣ ಪ್ರತಿಭೆಗಳ ಪ್ರತಿನಿಧಿ ಎಂದು ಗ್ರಾಮೀಣ ಯುವಕರು ಹೆಮ್ಮೆ ಪಡುತ್ತಿದ್ದಾರೆ.

ಇದನ್ನೂ ಓದಿ: ಡಾ. ರಾಜ್ ಕುಮಾರ್ ನಟಿಸಿದ 200 ಚಿತ್ರಗಳಲ್ಲಿ 1 ಸಿನಿಮಾಗೆ ಮಾತ್ರ ಪ್ರಮೋಷನ್ ಮಾಡಿದ್ರು!

ಬಿಗ್ ಬಾಸ್ ಮನೆಗೆ ಬಂದ ಹಳ್ಳಿ ಹೈದ ಹನುಮಂತು ಆಟಕ್ಕೆ ಇಡೀ 13 ಸ್ಪರ್ಧಿಗಳೇ ಬೆಚ್ಚಿ ಬಿದ್ದಿದ್ದಾರೆ. ನ್ಯಾಯ ಅಂದ್ರೆ ನ್ಯಾಯ ಹಳ್ಳಿ ಹೈದನ ನ್ಯಾಯ ಎಂಬಂತೆ ಆಟವಾಡುತ್ತಿರುವ ಮುಗ್ದ ಹನುಮಂತ ಕೇವಲ ಮುಗ್ಧ ಅಷ್ಟೇ ದಡ್ಡನಂತೂ ಅಲ್ಲವೇ ಅಲ್ಲ. ಹೀಗಾಗಿ, ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿಯೇ ಎಂಟ್ರಿ ಕೊಟ್ಟ ಹನುಮಂತ ನಂತರ ಬಿಗ್ ಬಾಸ್ ನಡೆಸಿದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿಯೂ ತನ್ನ ಸ್ವಂತ ಶ್ರಮದಿಂದ ಗೆದ್ದು ಕ್ಯಾಪ್ಟನ್ ಕಿಂಗ್ ಆಗಿದ್ದಾನೆ. ಇನ್ನು ಮೊನ್ನೆ ಚೆಂಡನ್ನು ತಳ್ಳುವ ಟಾಸ್ಕ್‌ನಿಂದ ಕುತಂತ್ರ ಬುದ್ಧಿ ಉಪಯೋಗಿಸಿ ಬಲಿಷ್ಠ ತ್ರಿವಿಕ್ರಮ್ ತಂಡವನ್ನು ಹೊರಗಿಟ್ಟಿದ್ದ ಮಂಜು ನಿರ್ಧಾರವನ್ನು ಹನುಮಂತ ಒಪ್ಪಿಕೊಳ್ಳದೇ ಗಾಯಾಳು ಚೈತ್ರಾ ಕುಂದಾಪುರ ಅವರ ತಂಡವನ್ನು ಹೊರಗಿಟ್ಟಿದ್ದನು. ಇದಾದ ಬಳಿಕ ಹನುಮಂತನ ನಿರ್ಧಾರಕ್ಕೆ ಎಲ್ಲರೂ ಚಪ್ಪಾಳೆ ತಟ್ಟಿ ನ್ಯಾಯಯುತ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹನುಮಂತು ಆಟಕ್ಕೆ ದಂಗಾದ್ರಾ ಮನೆಮಂದಿ?

ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/6z9s7T9C8X

— Colors Kannada (@ColorsKannada)
click me!