ಇದು ಪ್ರತಿಭೆ ಜೊತೆಗೆ ಪೂರ್ವ ಜನ್ಮದ ಋಣಾನುಬಂಧವೇ ಇರಬೇಕು ಎನ್ನುತ್ತಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಮಂದಿ. ಅವೆಲ್ಲವೂ ಏನೇ ಆಗಿರಬಹುದು, ಆದರೆ ಮುದ್ದು ಪುಟಾಣಿ ಸಿಹಿ ಕನ್ನಡದ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾಗಿರುವುದಂತೂ ಸುಳ್ಳಲ್ಲ!..
ಜೀ ಕನ್ನಡದಲ್ಲಿ ಮುಡಿಬರುತ್ತಿರುವ 'ಸೀತಾರಾಮ; ಸೀರಿಯಲ್ ಸಾಕಷ್ಟು ಫೇಮಸ್ ಆಗಿದೆ. ಸೀತಾ ಆಗಿ ವೈಷ್ಣವಿ ಗೌಡ ಹಾಗೂ ರಾಮನಾಗಿ ಗಗನ್ ಚಿನ್ನಪ್ಪ ನಟಿಸುತ್ತಿದ್ದರೆ, ಸಿಹಿ ಎಂಬ ಪುಟ್ಟ ಹುಡುಗಿ ಪಾತ್ರ ಆ ಸೀರಿಯಲ್‌ನಲ್ಲಿ ಬಹಳಷ್ಟು ಗಮನ ಸೆಳೆಯುತ್ತಿದೆ. ಹಾಗಿದ್ದರೆ ಆ ಸಿಹಿ ಯಾರು? ಮೂಲತಃ ಆ ಮಗು ಎಲ್ಲಿಯದು? ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ..
ಸೀತಾರಾಮ ಸೀರಿಯಲ್ ಕಥೆ ನಿಂತಿರೋದೆ ಸಿಹಿ ಎಂಬ ಪುಟ್ಟ ಹುಡುಗಿ ಪಾತ್ರದ ಮೇಲೆ. ಆ ಪಾತ್ರ ಸೀರಿಯಲ್ ಶುರುವಾದಾಗಿಂದ ವೀಕ್ಷಕರು ಮನಸ್ಸಲ್ಲಿ ಕೂತುಬಿಟ್ಟಿದೆ. ಮಾತ್ರ ಅಲ್ಲ,ಇಡೀ ಸೀರಿಯಲ್‌ಗೆ ಟಿಆರ್‌ಪಿ ಬರ್ತಿರೋದೆ ಈ ಪಾತ್ರದಿಂದ ಅನ್ನೋ ಹಾಗಾಗಿದೆ. ಸಿಹಿ ಸ್ಕೂಲಿಗೆ ಹೋಗುತ್ತ ಇಷ್ಟು ಚಿಕ್ಕ ವಯಸ್ಸಿನಲ್ಲಿ ಧಾರಾವಾಹಿಗಳಲ್ಲಿ ನಟಿಸಿ ತನ್ನ ಮನೆಗೆ ಆಧಾರಸ್ತಂಭ ಆಗಿದ್ದಾಳೆ. ಮೂಲತಃ ನೇಪಾಳದ ಹುಡುಗಿ ಆಗಿರುವ ಸಿಹಿ, ತನ್ನ ಅಮ್ಮನ ಜೊತೆ ಕರ್ನಾಟಕಕ್ಕೆ ಬಂದು ಈಗ ಕನ್ನಡ ಕಲಿತು ಕನ್ನಡಿಗರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾಳೆ.
undefined
ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ, ಅಷ್ಟು ಆತುರ ಅವರಲ್ಲಿತ್ತು: ಅಮಲಾ ಪೌಲ್!
ಇದು ಪ್ರತಿಭೆ ಜೊತೆಗೆ ಪೂರ್ವ ಜನ್ಮದ ಋಣಾನುಬಂಧವೇ ಇರಬೇಕು ಎನ್ನುತ್ತಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಮಂದಿ. ಅವೆಲ್ಲವೂ ಏನೇ ಆಗಿರಬಹುದು, ಆದರೆ ಮುದ್ದು ಪುಟಾಣಿ ಸಿಹಿ ಕನ್ನಡದ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾಗಿರುವುದಂತೂ ಸುಳ್ಳಲ್ಲ! ಈ ಪುಟ್ಟ ಹುಡುಗಿ ಹೆಸರು ಬೇಬಿ ರಿತೂ ಸಿಂಗ್. ಆದರೆ ಸಡನ್ನಾಗಿ ಆ ಪಾತ್ರವನ್ನು ಕೊನೆಗಾಣಿಸೋಕೆ ಸೀರಿಯಲ್ ಟೀಮ್ ಹೊರಟಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಇನ್ನೂ ರಿವೀಲ್ ಮಾಡಿಲ್ಲ.
ಬಹುಶಃ ಈ ಸೀರಿಯಲ್‌ನಲ್ಲಿ ಪ್ರಧಾನ ಪಾತ್ರವಾಗಿರೋ ಸಿಹಿ ಪಾತ್ರವನ್ನು ನಿಭಾಯಿಸ್ತಾ ಇರೋ ಪುಟಾಣಿ ಬೇಬಿ ರಿತೂ ಸಿಂಗ್‌ಗೆ ಶಿಕ್ಷಣಕ್ಕೆ ಫೋಕಸ್ ನೀಡಬೇಕಾಗಿರಬಹುದು. ಈ ವಯಸ್ಸಲ್ಲಿ ಸ್ಕೂಲ್ ಬಹಳ ಮುಖ್ಯ ಆಗಿರುವ ಕಾರಣ ಆಕೆಯ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಆಕೆಯ ಪಾತ್ರಕ್ಕೆ ಕೊನೆ ಹಾಡ್ತಾ ಇರಬಹುದು. ಆದರೆ ಆಕೆ ಇಲ್ಲದೆ ಈ ಸೀರಿಯಲ್ ನಿಲ್ಲೋದಿಲ್ಲ ಅನ್ನೋದನ್ನು ಅರಿಯದಷ್ಟು ದಡ್ಡರಲ್ಲಿ ಈ ಸೀರಿಯಲ್ ಮಂದಿ. ಇಲ್ಲೀವರೆಗೆ ಆಕೆ ಮನೆ ಮಗುವಷ್ಟೆ ಆಗಿದ್ದಳು. ಇನ್ನು ಮುಂದೆ ಆಕೆಯನ್ನು ಬೇರೆ ರೀತಿ ಅಂದರೆ ಈ ಹಿಂದೆ 'ಅಂಜಲಿ' ಅನ್ನೋ ಸೀರಿಯಲ್ ನಲ್ಲಿ ಬರ್ತಿದ್ದ ಹಾಗೆ ಪುಟ್ಟ ಗುಮ್ಮನಾಗಿ ತೋರಿಸೋ ಪ್ಲಾನ್ ಇರಬಹುದು.
ಅಭಿಮಾನಿಗಳಿಂದ ಏನನ್ನೂ ಮುಚ್ಚಿಡಲ್ಲ, ಹೌದು ಆಗಿದೆ, ನಾನೂ ಮನುಷ್ಯ: ಶಿವರಾಜ್‌ಕುಮಾರ್
ಅಥವಾ ಈಕೆ ಮುಂದೆ ಸೀತಾ ರಾಮರ ಮಗಳಾಗಿಯೇ ಹುಟ್ಟಿ ಬರ್ತಾಳೆ ಅಂತ ತೋರಿಸೋ ಪ್ಲಾನ್ ಇರಬಹುದು. ಹೀಗಾದಾಗ ಲೀಗಲ್ ಇಶ್ಯೂಗಳಿಲ್ಲದೆ ಅವಳೇ ರಾಮ ಸೀತೆಯ ಅಧಿಕೃತ ಮಗಳಾಗ್ತಾಳೆ ಅಂತ ತೋರಿಸಬಹುದು. ಇದ್ಯಾವುದೂ ಅಲ್ಲ ಅಂತಾದ್ರೆ ಇದನ್ನು ಸಿಹಿಯ ಕನಸಾಗಿಯೋ, ಸೀತಾ ಅಥವಾ ರಾಮರ ಕನಸಾಗಿಯೋ ತೋರಿಸಬಹುದು. ಅಥವಾ ಸಿಹಿ ಅಣ್ಣ ಭಾರ್ಗವಿ ಮಗನ ಕನಸಲ್ಲೂ ಈ ರೀತಿ ಬಂದಿರಬಹುದು. ಏಕೆಂದರೆ ಈ ಪ್ರೋಮೋದಲ್ಲಿ ಸಿಹಿ ಸಾವನ್ನು ಫೇರಿಟೇಲ್ ನಂತೆ ಆನಿಮೇಶನ್ ಟಚ್ ಕೊಟ್ಟು ತೋರಿಸಲಾಗಿದೆ. ಹೀಗಾಗಿ ಇದು ಕಾರ್ಟೂನ್ ನೋಡೋ ಮಕ್ಕಳ ಕನಸಾಗಿ ಕಾಣಬಹುದು.
ಏನೇ ಆದರೂ ಸಿಹಿ ಪಾತ್ರ ಇಲ್ಲಾಂದ್ರೆ ನಾವು ಈ ಸೀರಿಯಲ್ ನೋಡಲ್ಲ ಅಂತಿದ್ದಾರೆ ಈ ಸೀರಿಯಲ್ ಫ್ಯಾನ್ಸ್. 'ಸಿಹಿ' ಪಾತ್ರವನ್ನ ದಯವಿಟ್ಟು ಎಂಡ್ ಮಾಡಬೇಡಿ ಅನ್ನೋ ರಿಕ್ವೆಸ್ಟ್ ಮೇಲಿಂದ ಮೇಲೆ ಪ್ರತೀ ಪ್ರೋಮೋದಲ್ಲೂ ಹರಿದು ಬರ್ತಾನೇ ಇದೆ. ಸೋ ಇದು ಸೀರಿಯಲ್ ಟೀಮ್ ಮನಸು ಕರಗಿಸುತ್ತಾ ಇಲ್ಲಾ ಅವರು ಬೇರೆಯ ಏನಕ್ಕೋ ಸ್ಕೆಚ್ ಹಾಕ್ತಿದ್ದಾರಾ? ಅಥವಾ ವೀಕ್ಷಕರ ಈ ರಿಕ್ವೆಸ್ಟ್ ನಿಂದ ಸೀರಿಯಲ್ ಟೀಮ್ ಮನಸ್ಸು ಬದಲಾಯಿಸಲು ಹೊರಟಿದ್ಯಾ? ಈ ಬಗ್ಗೆ ಏನು ಅನ್ನೋದನ್ನು ಮುಂದಿನ ದಿನಗಳಲ್ಲಿ ನೋಡಬಹುದು.
ಉಪೇಂದ್ರ ಈ ಡೈಲಾಗ್‌ಗೆ 'ಬುದ್ಧಿವಂತ' ಅಂತೀರಾ ಅಥವಾ ಇನ್ನೇನೋ ಹೆಸರಿಡ್ತೀರಾ?