ಚೈತ್ರಾ ಕುಂದಾಪುರ ಜೊತೆ ಮದುವೆ ಎಂದು ಟ್ರೋಲ್‌ ಮಾಡಿದವರಿಗೆ ಬೀಪ್‌ ಪದಗಳಿಂದ ಕ್ಲಾಸ್‌ ತೆಗೆದುಕೊಂಡ ಕಿರಿಕ್ ಕೀರ್ತಿ!

Published : Jan 22, 2025, 03:34 PM IST
ಚೈತ್ರಾ ಕುಂದಾಪುರ ಜೊತೆ ಮದುವೆ ಎಂದು ಟ್ರೋಲ್‌ ಮಾಡಿದವರಿಗೆ ಬೀಪ್‌ ಪದಗಳಿಂದ ಕ್ಲಾಸ್‌ ತೆಗೆದುಕೊಂಡ ಕಿರಿಕ್ ಕೀರ್ತಿ!

ಸಾರಾಂಶ

ಬಿಗ್‌ಬಾಸ್ ಚೈತ್ರಾ ಕುಂದಾಪುರ ಅವರನ್ನು ಕಿರಿಕ್ ಕೀರ್ತಿ ಸಂದರ್ಶಿಸಿ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡರು. ಕೆಲವರು ಈ ಫೋಟೋವನ್ನು ದುರುಪಯೋಗಪಡಿಸಿಕೊಂಡು ಮದುವೆ ವದಂತಿ ಹಬ್ಬಿಸಿದರು. ಕೀರ್ತಿ, ಚೈತ್ರಾಳನ್ನು ಸಹೋದರಿ ಎಂದೇ ಉಲ್ಲೇಖಿಸಿದ್ದರೂ ಟ್ರೋಲ್‌ಗಳು ಮುಂದುವರೆದವು. ಇದರಿಂದ ಕೋಪಗೊಂಡ ಕೀರ್ತಿ, ಟ್ರೋಲ್‌ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ಕಿರಿಕ್‌ ಕೀರ್ತಿ ಮತ್ತು ನಿರಂಜನ್ ದೇಶಪಾಂಡೆ ತಮ್ಮ ಮಿಸ್ಟರ್ ನಿರಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವಿಡಿಯೋಗಳು ಸಖತ್ ವೈರಲ್ ಆಗುತ್ತದೆ ಏಕೆಂದರೆ ಯಾರಿಗೂ ಅವಮಾನ ಮಾಡದೆ ಯಾರ ಬಗ್ಗೆನೂ ಕೆಟ್ಟದಾಗಿ ಕಾಮೆಂಟ್ ಮಾಡದೆ ಅಲ್ಲಿ ಏನಾಗಿದೆ ಅದನ್ನು ಸ್ಪಷ್ಟವಾಗಿ ಮಾತನಾಡುವ ಕಾರಣ ಇವರಿಬ್ಬ ಸಂದರ್ಶನ ನೋಡಲು ಜನರು ಇಷ್ಟ ಪಡುತ್ತಾರೆ. ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಆಡಿದ ಆಟವನ್ನು ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದರು. ಹೀಗಾಗಿ ಎಲಿಮಿನೇಟ್ ಆದ ಕೂಡ ಸಂದರ್ಶನಕ್ಕೆ ಆಹ್ವಾನಿಸಿದ್ದರು. 

ಸಂದರ್ಶನ ನಂತರ ಕಿರಿಕ್ ಕೀರ್ತಿ ಮತ್ತು ಚೈತ್ರಾ ಕುಂದಾಪುರ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಕಿರಿಕ್ ಕೀರ್ತಿ ಅಪ್ಲೋಡ್ ಮಾಡುತ್ತಾರೆ. ತಾವಿಬ್ಬರೂ ಹಲವು ವರ್ಷಗಳಿಂದ ಮಾತನಾಡುತ್ತಿರಲಿಲ್ಲ ಆದರೆ ಈಗ ಎಲ್ಲವೂ ಸರಿ ಹೋಗಿದೆ ಎಂದು ಸ್ಪಷ್ಟನೆ ನೀಡುತ್ತಾರೆ. ಆದರೆ ಈ ಫೋಟೋವನ್ನು ಕೆಲವು ಕಿಡಿಗೇಡಿಗಳು ಮತ್ತೊಂದು ರೂಪ ನೀಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಕಿರಿಕ್ ಕೀರ್ತಿ ಮದುವೆ ಆಗುತ್ತಿದ್ದಾರೆ ಎಂದು ವೈರಲ್ ಮಾಡುತ್ತಿದ್ದಾರೆ. ಸಹೋದರಿ ಸಹೋದರಿ ಎಂದು ಚೈತ್ರಾಳನ್ನು ಸ್ಪಷ್ಟವಾಗಿ ಉದ್ದೇಶಿಸಿ ಕೀರ್ತಿ ಮಾತನಾಡಿದ್ದರೂ ಈ ರೀತಿ ಟ್ರೋಲ್ ಮಾಡುತ್ತಿರುವುದುಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ತಮ್ಮದೇ ಸ್ಪೀಡ್‌ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೋಲಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಾತ್‌ರೂಮ್‌ನಲ್ಲಿ ಅಪ್ಪ ಬಿದ್ದು ಧ್ವನಿ ಕಳೆದುಕೊಂಡರು, ಆಪರೇಷನ್‌ ಮಾಡಿಸಲು ಹಣ ಇಲ್ಲ: ಭವ್ಯಾ ಗೌಡ ಕಣ್ಣೀರು

'ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಇರುವ ನಾಯಿ ನರಿಗಳ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ತುಂಬಾ ಹಿಂದೆನೇ ಬಿಟ್ಟುಬಿಟ್ಟೆ. ಎದುರಿಗೆ ಬಂದು ಹೋರಾಡುಲು ಧೈರ್ಯ ಇಲ್ಲದ ____ ಅಂತ ಗೊತ್ತಾಗಿದೆ ಪ್ರೋಫೈಲ್‌ನಲ್ಲಿ ಫೋಟೋ ಹಾಕಲು ಧೈರ್ಯ ಇಲ್ಲ.  ಗಂಡಸೇ ಆಗಿದ್ದವನು ಅವನದ್ದೇ ಫೋಟೋ ಹಾಕಿ ತಾಕತ್ತು ಇರುವವನ್ನು ಮಾತನಾಡಬಹುದು. ಕಳೆದ ಎರಡು ಮೂರು ದಿನಗಳಿಂದ ಬಿಗ್ ಬಾಸ್ ಕೀರ್ತಿ ಮತ್ತು ಚೈತ್ರಾ ಕುಂದಾಪುರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತ ವೈರಲ್ ಮಾಡುತ್ತಿದ್ದಾರೆ. ಯಾವತ್ತಾದರೂ ಇಲ್ಲಿಯವರೆಗೂ ವೈಯಕ್ತಿಕ ತೇಜೋವದೆ ಮಾಡಿದ್ದೀವಾ? ಚೈತ್ರಾ ಕುಂದಾಪುರ ಸಹೋದರಿಗೂ ನನಗೂ ಸಣ್ಣ ವೈಮನಸ್ಸು ಆಗಿದ್ದು 7 ವರ್ಷಗಳ ಹಿಂದೆ ಆಮೇಲೆ ಕಾಂಪ್ರಮೈಸ್ ಆಗದೇ ಇದ್ದರೂ ಸರಿ ಹೋಗಿದೆ ಎಂದು ಬರೆದುಕೊಂಡಿರುವ ಫೋಟೋಗೆ ಮದುವೆ ಅಂತ ಪೋಸ್ಟ್ ಹಾಕಿದ್ದಾರೆ. ನಿನ್ನ ತಂಗಿ ಅಥವಾ ತಾಯಿ ಫೋಟೋವನ್ನು ಹಾಕಿ ಈ ರೀತಿ ಟ್ರೋಲ್ ಮಾಡಿ. ಈ ವಿಚಾರವಾಗಿ ನಾನು ಚೈತ್ರಾಗೆ ಕರೆ ಮಾಡಿದ್ದರೂ ಸರ್ ಇವರಿಗೆ ಮಾಡಲು ಕೆಲಸ ಇಲ್ಲ ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದರೂ ಉಪಯೋಗವಿಲ್ಲ ಎಂದು ಹೇಳುತ್ತಾರೆ' ಎಂದು ಕೀರ್ತಿ ಬೀಪ್‌ ಪದಗಳಿಂದ ಬೈದಿದ್ದಾರೆ.

10 ಜನರ ಎನರ್ಜಿ ನರೇಶ್‌ಗೆ ಇದೆ, ನಾವೆಲ್ಲರೂ ಸುಸ್ತಾಗಿ ಬಿಡುತ್ತೀವಿ: ಪವಿತ್ರಾ ಲೋಕೇಶ್ ಹೇಳಿಕೆ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?