
ಕೆಲ ತಿಂಗಳ ಹಿಂದಷ್ಟೇ ಸತ್ಯಾ ಸೀರಿಯಲ್ ಸತ್ಯ ಎಂದಾಕ್ಷಣ ಎಲ್ಲರ ಗಮನ ಧಾರಾವಾಹಿಯ ರಗಡ್ ಪಾತ್ರಧಾರಿಯ ನೆನಪಾಗುತ್ತಿತ್ತು. ಗಂಡುಬೀರಿಯಿಂದ ಶುರುವಾದ ಸತ್ಯಳ ಪಯಣ, ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುವ ಸೊಸೆಯಾಗಿ ನಂತರ ಎಲ್ಲರಿಂದಲೂ ಇದ್ದರೆ ಇಂಥ ಸೊಸೆ ಇರಬೇಕು ಎಂದು ಹೊಗಳಿಸಿಕೊಳ್ಳುವ ಹೆಣ್ಣಾದವಳದ್ದೇ ನೆನಪಾಗುತ್ತಿತ್ತು. ಅಲ್ಲಿಯವರೆಗೆ ಕೇವಲ ಸತ್ಯ ಆಗಿದ್ದ ಗೌತಮಿ ಜಾಧವ್, ಇದೀಗ ಬಿಗ್‌ಬಾಸ್‌ನಿಂದಾಗಿ ಫೇಮಸ್ ಆಗಿದ್ದಾರೆ. ಸತ್ಯಾಳನ್ನು ಮೀರಿಸಿ ಗೌತಮಿ ಅವರು ತಮ್ಮ ರಿಯಲ್ ಹೆಸರಿನ ಮೂಲಕ ಸದ್ಯ ಬಿಗ್‌ಬಾಸ್ ಪ್ರೇಮಿಗಳ ಹೃದಯದಲ್ಲಿ ಮನೆ ಮಾಡಿದ್ದಾರೆ. ಬಿಗ್‌ಬಾಸ್‌ನಲ್ಲಿ ಟಫ್ ಕಾಂಪಿಟೀಟರ್ ಎಂದೇ ಫೇಮಸ್ ಆಗಿದ್ದ ಗೌತಮಿ ಅವರು 16 ವಾರಗಳ ದೊಡ್ಮನೆ ಪ್ರಯಾಣವನ್ನು ಮುಗಿಸಿ, ಹೊರಕ್ಕೆ ಬಂದಿದ್ದಾರೆ.
ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದ ಮೇಲೆ, ಸಹಜವಾಗಿ ಸ್ಪರ್ಧಿಗಳು ಸೆಲೆಬ್ರಿಟಿಗಳಾಗಿಬಿಡುತ್ತಾರೆ. ಮೊದಲೇ ಸೆಲೆಬ್ರಿಟಿ ಆಗಿದ್ದರೂ, ಕೆಲ ತಿಂಗಳ ಮಟ್ಟಿಗೆ ಅವರ ಹೆಸರು ಟಾಪ್‌ನಲ್ಲಿ ಇರುತ್ತದೆ. ಮುಂದಿನ ಬಿಗ್‌ಬಾಸ್ ಬರುವವರೆಗೂ ಹಿಂದಿನ ಸ್ಪರ್ಧಿಗಳ ಹೆಸರು ಕಿರುತೆರೆ ವೀಕ್ಷಕರ ಬಾಯಲ್ಲಿ ನಲಿದಾಡುತ್ತಿರುತ್ತದೆ. ಅದಕ್ಕಾಗಿಯೇ ಅವರ ಸಂದರ್ಶನ ಪಡೆಯುವವರ ಸಂಖ್ಯೆ ಹೆಚ್ಚೇ ಇರುತ್ತದೆ. ಅದೇ ರೀತಿ ಗೌತಮಿ ಜಾಧವ್ ಕೂಡ ಇದಾಗಲೇ ಹಲವು ಕಡೆ ಸಂದರ್ಶನ ನೀಡಿದ್ದು, ಬಿಗ್‌ಬಾಸ್ ಪಯಣದ ಕುರಿತು ಹೇಳುತ್ತಲೇ ಇದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡದಲ್ಲಿಯೇ ನೇರಪ್ರಸಾರದಲ್ಲಿ ಕಾಣಿಸಿಕೊಂಡಿರುವ ನಟಿ, ಕೆಲವೊಂದು ವಿಷಯಗಳ ಬಗ್ಗೆ ತಿಳಿಸಿದ್ದಾರೆ, ಹಾಗೂ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.
"ಬಿಗ್‌ಬಾಸ್‌ಗೆ ಕರೆ ಬಂದಾಗ ತುಂಬಾ ಗೊಂದಲ ಇತ್ತು. ಫ್ಯಾಮಿಲಿಯನ್ನು ಹೇಗೆ ಬಿಟ್ಟು ಹೋಗುವುದು, ಯಾವುದೇ ಸಂಪರ್ಕ ಇಲ್ಲದೇ ಹೇಗೆ ಇರುವುದು, ಒಂದು ಮನೆಯ ಒಳಗೆ, ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೇ ಒಂದಿಷ್ಟು ಮಂದಿಯ ಜೊತೆಗೆ ಇರುವುದು ಹೇಗೆ ಸಾಧ್ಯ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ ಮನೆಯೊಳಕ್ಕೆ ಹೋದ ಮೇಲೆ ಹೊರಗಿನ ಪ್ರಪಂಚವನ್ನು ಸುಲಭದಲ್ಲಿ ಡಿಸ್‌ಕನೆಕ್ಟ್ ಮಾಡುವಂಥ ವಾತಾವರಣ ಸೃಷ್ಟಿಯಾಯಿತು. ತುಂಬಾ ಈಸಿಯಾಗಿ ಈ ಹೊಸ ಪ್ರಪಂಚಕ್ಕೆ ಹೊಂದಿಕೊಂಡೆ' ಎಂದು ಗೌತಮಿ ಹೇಳಿದ್ದಾರೆ. ಇದೇ ವೇಳೆ, ಜನರು ತಮಗೆ ತೋರಿರುವ ಪ್ರೀತಿಗೆ ತುಂಬು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಗೌತಮಿ ಜಾಧವ್ ಮದ್ವೆಯಾಗಿ ಐದು ವರ್ಷ: ಸಿನೆಮಾ ಸೆಟ್ನಲ್ಲಿ ಶುರುವಾದ ಲವ್ ಸ್ಟೋರಿ ಕೇಳಿ...
ಜಯ ಸಾಧಿಸಬೇಕು ಎಂದೇ ಹೋಗಿದ್ದು ನಿಜ. ಆದರೆ ಹದಿನಾರು ವಾರಗಳ ಜಯ ನನ್ನ ಪಾಲಿಗೆ ಸಿಕ್ಕಿದೆ. ವ್ಯಕ್ತಿಯಾಗಿ ನಾನು ಗೆದ್ದಿರುವ ಖುಷಿ ಇದೆ. ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದ ಮೇಲೆ ಜನರು ನನ್ನನ್ನು ಪ್ರೀತಿಯಿಂದ ಸ್ವೀಕರಿಸುವ ರೀತಿಗೆ ಆಭಾರಿಯಾಗಿದ್ದೆನೆ. ಒಬ್ಬ ವ್ಯಕ್ತಿಯಾಗಿ ನನ್ನನ್ನು ಅಭಿಮಾನಿಗಳು ನೋಡುವ ಪರಿಗೆ ನಾನು ಋಣಿಯಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ, ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿರುವ ನಟಿ, ಶೀಘ್ರದಲ್ಲಿಯೇ ಹೊಸ ಪ್ರಾಜೆಕ್ಟ್ ಮೂಲಕ ನಿಮ್ಮ ಎದುರಿಗೆ ಮತ್ತೊಮ್ಮೆ ಬರುತ್ತೇನೆ ಎಂದಿದ್ದಾರೆ. ಈ ಮೂಲಕ ಸೀರಿಯಲ್‌ನಲ್ಲಿ ನಟಿ ಶೀಘ್ರ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ.
ಅಂದಹಾಗೆ, ನಟಿ ಗೌತಮಿ ಅವರ ಕುರಿತು ಹೇಳುವುದಾದರೆ, ಇವರು ಬೆಂಗಳೂರಿನಲ್ಲಿ 1993 ಆಗಸ್ಟ್ 22 ರಂದು ಜನಿಸಿದರು. ಅವರಿಗೆ ಈಗ 31 ವರ್ಷ ವಯಸ್ಸು. ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಸತ್ಯ ಧಾರಾವಾಹಿಯ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮನೆಮಾತಾಗಿದ್ದಾರೆ. ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ. ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ. ನಂತರ ಆದ್ಯ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆಪರೇಶನ್ ಅಲಮೇಲಮ್ಮ', 'ಮಾಯಾಬಜಾರ್', 'ಅನಂತು v/s ನುಸ್ರತ್' ಮುಂತಾದ ಸಿನಿಮಾಗಳಲ್ಲಿ ಅಭಿಷೇಕ್ ಕೆಲಸ ಕೂಡ ಮಾಡಿದ್ದಾರೆ. 2012ರ ಪ್ರಖ್ಯಾತ ಧಾರಾವಾಹಿ 'ನಾಗಪಂಚಮಿ'ಯಲ್ಲಿ ಗೌತಮಿ ನಟಿಸಿದ್ದರು. 'ಲೂಟಿ', 'ಆದ್ಯಾ', 'ಕಿನಾರೆ' ಹಾಗೂ ತಮಿಳಿನ ಸಿನಿಮಾವೊಂದರಲ್ಲಿ ಅವರು ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳಲು ಗೌತಮಿ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದರು. ಸತ್ಯ ಪಾತ್ರಕ್ಕಾಗಿ ಗೌತಮಿ ಗಾಡಿ ಓಡಿಸುವುದನ್ನು ಕೂಡ ಕಲಿತಿದ್ದಾರೆ. ಮಾತ್ರವಲ್ಲದೇ ಪೊಲೀಸ್ ಪಾತ್ರಕ್ಕಾಗಿ ಟಫ್ ಎನ್ನುವ ಪೊಲೀಸ್ ಟ್ರೇನಿಂಗ್ ಕೂಡ ಪಡೆದಿದ್ದಾರೆ. ಸದ್ಯ ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ್ದಾರೆ. ಇವರ ಬಗ್ಗೆ ಪರ-ವಿರೋಧ ನಿಲುವುಗಳೂ ವ್ಯಕ್ತವಾಗುತ್ತಿವೆ.
ಕೂದಲ ಅಂದಕ್ಕಾಗಿ ಬಿಗ್‌ಬಾಸ್ 'ಸತ್ಯ' ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.