
ಬಿಗ್ ಬಾಸ್ ಸೀಸನ್ 8ರ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರಿಯಾಂಕಾ ತಿಮ್ಮೇಶ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಆರಂಭದಿಂದಲೂ ಹಾವು- ಮುಂಗುಸಿ ರೀತಿ ಎಂದು ದಿನ ಎಪಿಸೋಡ್ ನೋಡುವವರಿಗೆ ಗೊತ್ತಿರುವ ವಿಚಾರ. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರ ಬರುತ್ತಾರೆ, ಈ ವೇಳೆ ಚಕ್ರವರ್ತಿ ವರ್ತಿಸಿದ ರೀತಿಗೆ ಇಡೀ ಕರ್ನಾಟಕದ ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೈಯಲ್ಲಿರುವ 5 ಬೆರಳುಗಳನ್ನು ನಾವು ಯಾವುದಕ್ಕೆ ಉಪಯೋಗಿಸುತ್ತೇನೆ. ಯಾವ ಬೆರಳು ತೋರಿಸಿದರೆ ಏನು ಅರ್ಥ ಕೊಡುತ್ತದೆ ಎಂದು ಸುದೀಪ್ ಸ್ಪರ್ಧಿಗಳಿಂದ ಉತ್ತರ ಪಡೆದರು. ಈ ವೇಳೆ ಸುದೀಪ್ ಯಾಕೆ ಸನ್ನೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆಗಲೇ ಚಕ್ರವರ್ತಿ ಅರಿವಿಗೆ ಬಂದಿತ್ತು. 'ಕರ್ನಾಟಕದಲ್ಲಿರುವ ತಾಯಂದಿರು ಈ ಕಾರ್ಯಕ್ರಮ ನೋಡುತ್ತಿದ್ದಾರೆ. ನಮಗೆ ಕರೆ ಮಾಡಿ ಇದರ ಅರ್ಥ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನೀವು ಇದರ ಅರ್ಥ ನೀಡುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ' ಎಂದು ಸುದೀಪ್ ಹೇಳುತ್ತಾರೆ.
'5 ಬೆರಳುಗಳು ಪಂಚಭೂತಗಳಿದ್ದ ಹಾಗೆ, ಮಧ್ಯದ ಬೆರಳು ಏನೇ ಎದುರಾದರೂ ಬ್ಯಾಲನ್ಸ್ ಮಾಡುವುದು ಎಂದರ್ಥ' ಎಂದು ಚಕ್ರವರ್ತಿ ಹೇಳುತ್ತಾರೆ. ಉತ್ತರ ಒಪ್ಪಿಕೊಳ್ಳದ ಸುದೀಪ್ ಮತ್ತೆ ಪ್ರಶ್ನೆ ಮಾಡುತ್ತಾರೆ ಆದ ತಮ್ಮ ತಪ್ಪು ಒಪ್ಪಿಕೊಂಡ ಚಕ್ರವರ್ತಿ 'ಕೋಪದಲ್ಲಿ ಹೀಗೆ ವರ್ತಿಸಿದೆ ಯಾಕೆ ತೋರಿಸಿದೆ ಎಂದು ಆಮೇಲೆ ಅನಿಸಿತು, ತಪ್ಪಾಯ್ತು. ನಮ್ಮ ಮನೆ ಹೆಣ್ಣು ಮಕ್ಕಳಿಗೆ ಬೇರೆ ಯಾರೇ ಈ ಸನ್ನೆ ತೋರಿಸಿದರೂ ಕೆನ್ನೆಗೆ ಹೊಡೆಯಬಹುದೆನ್ನುವಷ್ಟು ಸಿಟ್ಟು ಬರುತ್ತದೆ' ಎಂದು ಹೇಳುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.