
ವಾರ ಪೂರ್ತಿ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ವೀಕೆಂಡ್‌ನಲ್ಲಿ ನಿರೂಪಕ ಕಿಚ್ಚ ಸುದೀಪ್ ಸದಸ್ಯರ ಜೊತೆ ಚರ್ಚಿಸುತ್ತಾರೆ. ಎರಡು ಮೂರು ವಾರಗಳಿಂದ ಚಕ್ರವರ್ತಿ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ. ಸರಿ ಇದ್ದರೆ ಸರಿ, ಇಲ್ಲದಿದ್ದರೆ ತಪ್ಪು ನೇರವಾಗಿ ಹೇಳಿ ಸುದೀಪ್ ಕಿವಿ ಹಿಂಡುತ್ತಾರೆ. ಸುದೀಪ್ ತನ್ನ ತಪ್ಪುಗಳನ್ನು ಮಾತ್ರ ಗುರುತಿಸುತ್ತಿದ್ದಾರೆ ಎಂದು ಬೇಸರಗೊಂಡ ಚಕ್ರವರ್ತಿ ಸುದೀಪ್ ಅವರ ಮಾತನ್ನು ಅರ್ಧಕ್ಕೇ ನಿಲ್ಲಿಸಿ ವಿರೋಧ ವ್ಯಕ್ತಪಡಿಸುತ್ತಾರೆ.
'ಪ್ರತಿ ಸಲ ನನ್ನ ತಪ್ಪಿನ ಬಗ್ಗೆಯೇ ಚರ್ಚೆ ಮಾಡಲಾಗುತ್ತಿದೆ ನನ್ನ ಬಿಟ್ಟು ಇಲ್ಲಿ ಯಾರೂ ತಪ್ಪೇ ಮಾಡಲ್ವ? ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನೇ ತಪ್ಪಿತಸ್ಥ. ಸನ್ನೆ ತೋರಿಸಿದ್ದು ತಪ್ಪು, ಹೌದು ಆದರೆ ಸುದೀಪ್ ಸರ್ ಬಗ್ಗೆ ಮಾತನಾಡಿಲ್ಲ. ನಾನು ಮಾತನಾಡಿದರೆ ಇಷ್ಟೊಂದು ದೊಡ್ಡ ಅಪರಾಧ ಆಗುತ್ತಾ? ವಾರದ ಕೊನೆ ಚರ್ಚೆಯಲ್ಲಿ ನಾನು ಸ್ತ್ರೀನಿಂದಕ, ಪರಮಪಾಪಿ ಆಗುತ್ತಿದ್ದೇನೆ. ಪ್ರತಿವಾರವೂ ಶಿಲುಬೆಗೆ ಏರಿಸ್ತಾರೆ, ನಾನು ಏರೋಕೆ ರೆಡಿಯಾಗಿದ್ದೇನೆ' ಎಂದು ಚಕ್ರವರ್ತಿ ಹೇಳಿದ್ದಾರೆ.
'ಸುದೀಪ್ ಸರ್ ನಿಮ್ಮ ಮೇಲೆ ನನಗೆ ಬೇಸರವಿದೆ. ನಾನು ಆಡುವ ಆಟ, ಬರೆದ ಕವನಗಳನ್ನು ನೀವು ಹೊಗಳುವುದೇ ಇಲ್ಲ. ಅಪರೂಪಕ್ಕೆ ನನ್ನನ್ನು ಹೊಗಳುತ್ತೀರಿ' ಎಂದಿದ್ದಾರೆ. ಕೆಲವು ನಿಮಿಷಗಳ ನಂತರ ಸುದೀಪ್ ಉತ್ತರಿಸುತ್ತಾರೆ. 'ನಿಮ್ಮ ಜ್ಞಾನ, ತಿಳುವಳಿಕೆ ಬಗ್ಗೆ ನನಗೆ ಗೌರವವಿದೆ. ಆ ವಿಚಾರದಲ್ಲಿ ನಾನು ನಿಮ್ಮ ಅಭಿಮಾನಿ. ಇಷ್ಟು ಸೀಸನ್‌ಗಳಲ್ಲಿ ನಾನು ಯಾರಿಗೂ ಈ ರೀತಿ ಹೇಳಿಲ್ಲ. ಹೊಗಳಿದ್ದೀನಿ ಅದನ್ನು ಸಾಬೀತು ಮಾಡಲು ಕ್ಲಿಪ್ಪಿಂಗ್ ತೋರಿಸಬೇಕಾ?' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.