
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ( Bigg Boss Kannada Season 12) ರಾಶಿಕಾ ಶೆಟ್ಟಿ ಅವರು ಈ ವಾರ ಚೆನ್ನಾಗಿ ಟಾಸ್ಕ್ ಆಡಿದ್ದರು. ಹೀಗಾಗಿ ಅವರ ಟೀಂನವರು ಸ್ಟುಡೆಂಟ್ ಆಫ್ ದಿ ವೀಕ್ ಪಟ್ಟ ಕೊಡಲು ನಿರ್ಧಾರ ಮಾಡಿದ್ದರು. ಆದರೆ ಅದಕ್ಕೆ ಗಿಲ್ಲಿ ನಟ ಬ್ರೇಕ್ ಹಾಕಿದ್ದರು. ಈ ಬಗ್ಗೆ ಚರ್ಚೆ ನಡೆದಿದೆ.
ಕಬಡ್ಡಿ ಕಬಡ್ಡಿ ಟಾಸ್ಕ್‌ನಲ್ಲಿ Blue Team ಟೀಂ ಗೆದ್ದಿತ್ತು. ಆ ಗುಂಪಿನಲ್ಲಿ ಸ್ಪಂದನಾ ಸೋಮಣ್ಣ, ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ರಿಷಾ ಗೌಡ, ಮಾಳು ನಿಪನಾಳ, ದನುಷ್ ಗೌಡ, ಕಾಕ್ರೋಚ್ ಸುಧಿ ಇದ್ದರು. ಅಲ್ಲಿ ಸ್ಟುಡೆಂಟ್ ಆಫ್ ದಿ ವೀಕ್ ಯಾರು ಎಂದು ಚರ್ಚೆ ಮಾಡಿ ಹೇಳಬೇಕಿತ್ತು.
ಇವರಲ್ಲಿ ಎಲ್ಲರೂ ರಾಶಿಕಾ ಶೆಟ್ಟಿಗೆ ಮತ ಹಾಕಿದ್ದರು. ಉಳಿದಂತೆ ಸ್ಪಂದನಾ, ಗಿಲ್ಲಿ ನಟ ಅವರು ತಮಗೆ ತಾವೇ ಮತ ಹಾಕಿಕೊಂಡಿದ್ದಾರೆ. ಗಿಲ್ಲಿ ನಟ ಅವರ ಮನವೊಲಿಸಲು ಧನುಷ್ ಗೌಡ, ಅಶ್ವಿನಿ ಗೌಡ ಪ್ರಯತ್ನಪಟ್ಟರೂ ಕೂಡ ಕೊನೆಗೂ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಒಟ್ಟಿನಲ್ಲಿ ರಾಶಿಕಾ ಶೆಟ್ಟಿ ಹಾಗೂ ಗಿಲ್ಲಿ ನಟ ನಡುವೆ ಯಾರು ಎಂಬ ಚರ್ಚೆ ನಡೆದಿದೆ. ಸಹಮತದಲ್ಲಿ ಸ್ಟುಡೆಂಟ್ ಆಫ್ ದಿ ವೀಕ್ ಯಾರು ಎಂದು ಹೇಳಬೇಕಿತ್ತು.
“ನಾನು ಇಲ್ಲಿ ಬಂದಾಗಿನಿಂದ ಎಲ್ಲಿಯೂ ಸ್ಟಕ್ ಆಗಿಲ್ಲ, ನನ್ನನ್ನು ನಾನು ಇಂಪ್ರೂವ್ ಮಾಡಿಕೊಳ್ತಿದೀನಿ” ಎಂದು ರಾಶಿಕಾ ಸಮರ್ಥನೆ ನೀಡಿದ್ದಾರೆ. ಅತ್ತ ಗಿಲ್ಲಿ ನಟ ಕೂಡ, “ನಾನು ನಿನ್ನೆ, ಇವತ್ತು ಕೂಡ ಆಟ ಆಡಿದ್ದೀನಿ. ನನಗೂ ಆಸೆ ಇರುತ್ತದೆ, ನಾನು ಕ್ಯಾಪ್ಟನ್ ಆಗಬೇಕು” ಎಂದು ಹೇಳಿದ್ದಾರೆ.
“ನೀವೆಲ್ಲರೂ ನನಗೆ ನಾಳೆ ಮತ ಹಾಕ್ತೀರಿ ಎಂಬ ನಂಬಿಕೆ ಇಲ್ಲ. ಎಲ್ಲರೂ ಸಮಾನರು ಅಂತ ಅಶ್ವಿನಿ ಅವರೇ ನೀವೆ ಹೇಳಿದ್ದೀರಾ. ಈಗ ರಾಶಿಕಾಗೆ ಹಾಕಿದ ಮತವನ್ನು ನೀವು ನನಗೆ ಹಾಕ್ತೀರಾ? ಹಾಕಲ್ಲ. ನನ್ನ ವಿರುದ್ಧ ರಾಶಿಕಾ ಅಂತ ಅಲ್ಲ, ಸ್ಪಂದನಾ ಇದ್ದರೂ ಕೂಡ ನನ್ನ ಸ್ಟ್ಯಾಂಡ್ ನಾನೇ ತಗೋತಿದ್ದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಇಲ್ಲಿ ಬಹುಮತಕ್ಕೆ ಬೆಲೆ ಇರಲಿಲ್ಲ, ಸಹಮತ ಇರಬೇಕಿತ್ತು. ಆದರೆ ಈ ತಂಡದಲ್ಲಿ ಸಹಮತ ಇಲ್ಲ ಎಂದು ಬಿಗ್ ಬಾಸ್ ಈ ಪಟ್ಟವನ್ನು ಕ್ಯಾನ್ಸಲ್ ಮಾಡಿದರು. ಆಮೇಲೆ ರಕ್ಷಿತಾ ಅವರು “ಥ್ಯಾಂಕ್ಯು ಬಿಗ್ ಬಾಸ್” ಎಂದಿದ್ದಾರೆ. ಉಳಿದವರು ರಕ್ಷಿತಾ ಎಂದು ಕೂಗಿದ್ದಾರೆ. “ನಾನು ಬಿಗ್ ಬಾಸ್ ಜೊತೆ ಮಾತನಾಡ್ತಿರೋದು, ನೀವು ನನ್ನ, ಬಿಗ್ ಬಾಸ್ ಮಧ್ಯೆ ಬರಬೇಡಿ” ಎಂದು ಹೇಳಿದ್ದಾರೆ. ಆಮೇಲೆ ರಾಶಿಕಾ ಶೆಟ್ಟಿ ಅವರಂತೂ ಕಣ್ಣೀರು ಹಾಕಿದ್ದಾರೆ. ಸೂರಜ್ ಅವರು ರಾಶಿಕಾ ಬಳಿ, “ನೀನು ಮಾತನಾಡಬೇಕಿತ್ತು, ಯಾಕೆ ಮಾತನಾಡಲಿಲ್ಲ? ಇದು ಸರಿ ಅಲ್ಲ” ಎಂದು ಹೇಳಿದ್ದಾರೆ.
ರಾಶಿಕಾ ಶೆಟ್ಟಿ ಅವರು ಸೂರಜ್ ಜೊತೆ ಚೆನ್ನಾಗಿರೋದು, ಆಟ ಆಡೋದಕ್ಕಿಂತ ಜಾಸ್ತಿ ರಕ್ಷಿತಾ ಶೆಟ್ಟಿ ಜೊತೆ ಜಗಳ ಆಡೋದು, ಅಡುಗೆ ಮಾಡೋದಿಲ್ಲ ಅಂತ ಮೊದಲು ಹೇಳೋದು, ಅದನ್ನೇ ರಕ್ಷಿತಾ ಅವರು ರಘು ಬಳಿ ಹೇಳಿದಾಗ, ನಾನು ಹೇಳಿದ್ದೊಂದ್ದು ನೀನು ಹೇಳ್ತಿರೋದು ಇನ್ನೊಂದು ಎಂದು ಹೇಳಿದ್ದಾರೆ. ಇದರಿಂದಲೇ ಜಗಳ ನಡೆದಿದೆ. ರಾಶಿಕಾಗೆ ಸರಿಯಾಗಿ ಆಯ್ತು ಎಂದು ವೀಕ್ಷಕರು ಖುಷಿ ಪಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.