
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಗೌತಮ್ ದಿವಾನ್ ಕಾರ್‌ನಲ್ಲಿ ಭೂಮಿಕಾ ಹಾಗೂ ಇಬ್ಬರು ಮಕ್ಕಳು ಶಾಲೆಗೆ ಬಂದರು, ಆ ವೇಳೆ ಸ್ಕೂಲ್‌ನ ಸಿಬ್ಬಂದಿ, “ಕೇವಲ ಮೇಡಂ ಕಾರ್‌ನಲ್ಲಿ ಬರಬೇಕು, ಮಕ್ಕಳು ಬರುವಂತಿಲ್ಲ” ಎಂದಿದ್ದಾರೆ. ಗೌತಮ್‌ನನ್ನು ಕೆಲಸದವರ ಥರ ನೋಡಿದ್ದಕ್ಕೆ ಭೂಮಿಕಾಗೆ ಸಿಟ್ಟು ಬಂದಿದೆ.
ಭೂಮಿಕಾ ಹಾಗೂ ಇಬ್ಬರು ಮಕ್ಕಳು ಶಾಲೆಯಲ್ಲಿ ಕಾರ್‌ನಿಂದ ಇಳಿದಿದ್ದಾರೆ, ಗೌತಮ್ ಮಗಳು ಕೂಡ ಕಾರ್‌ನಲ್ಲಿ ಬಂದಿರೋದನ್ನು ಸಿಬ್ಬಂದಿ ನೋಡಿದ್ದಾರೆ. ಆಗ ಸಿಬ್ಬಂದಿಯೋರ್ವರು, “ಈ ಕಾರ್ ಇರೋದು ಮೇಡಂ ಪಿಕ್ ಮಾಡೋಕೆ, ಯಾರು ಯಾರಿಗೋ ಕಾರ್ ಯೂಸ್ ಮಾಡೋಕೆ ಕೊಟ್ಟಿಲ್ಲ” ಎಂದಿದ್ದಾರೆ. ಆಗ ಭೂಮಿಕಾ, “ನಾನು ಆ ಮಗು ಬರಲಿ ಎಂದೆ” ಎಂದಿದ್ದರು. ಅದಾದ ಬಳಿಕ ಮೇಡಂ ಬ್ಯಾಗ್ ಎಲ್ಲವನ್ನು ಒಳಗಡೆ ತಂದಿಡಿ ಎಂದು ಗೌತಮ್‌ಗೆ ಹೇಳಿದ್ದಾರೆ. ಆಗ ಭೂಮಿಕಾ, “ಯಾರ ಹತ್ರ ಏನು ಮಾತಾಡಬೇಕು ಅಂತ ಗೊತ್ತಿಲ್ವಾ? ಇಲ್ಲಿ ಯಾರೂ ಯಾರಿಗೂ ಕಮ್ಮಿ ಇಲ್ಲ, ಈ ರೀತಿ ಬಿಹೇವ್ ಮಾಡಬೇಡಿ” ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಭೂಮಿಕಾ, ಸಿಬ್ಬಂದಿ ಬಳಿ ಮಾತನಾಡಿರೋದನ್ನು ಭೂಮಿ ಫ್ರೆಂಡ್ ಆಗಿರುವ ಟೀಚರ ಕಾವೇರಿ ಕೂಡ ನೋಡಿದ್ದಾರೆ, ಆಗ ಅವರು, “ನೀವು ಕಾರ್‌ನಲ್ಲಿ ಬಂದಿದ್ದು ನೋಡೋಕೆ ಚೆನ್ನಾಗಿತ್ತು. ಗೌತಮ್ ಅವರಿಗೆ ಯಾರೂ ಏನೂ ಹೇಳೋ ಹಾಗಿಲ್ಲ. ಅವರಿಗೆ ಏನಾದರೂ ಹೇಳೋ ಹಕ್ಕನ್ನು ನೀವು ಇಟ್ಟುಕೊಂಡಿದ್ದೀರಾ” ಎಂದಿದ್ದಾರೆ.
ಅತ್ತ ಜಯದೇವ್, ಮಲ್ಲಿಯನ್ನು ಹುಡುಕುತ್ತಿದ್ದಾನೆ. ಅದೇ ವೇಳೆ ಲಕ್ಷ್ಮೀಕಾಂತ್ ಕಣ್ಣಿಗೆ ಮಲ್ಲಿ ಕಂಡಳು, ಆಗ ಅವನು ಮಲ್ಲಿ, ನಾನು ಹಳೇ ಲಕ್ಷ್ಮೀಕಾಂತ್ ಅಲ್ಲ ಎಂದು ಹೇಳಿದರೂ ಕೂಡ ಕೇಳಿಸಿಕೊಳ್ಳದೆ ಓಡಿ ಹೋದಳು. ಅದೇ ಟೈಮ್‌ಗೆ ಮಲ್ಲಿಗೂ ಜಯದೇವ್ ಕಾಣಿಸಿದ್ದಾನೆ. ಈಗ ಅವಳು ಇಬ್ಬರಿಂದಲೂ ಎಸ್ಕೇಪ್ ಆಗಬೇಕು. ಮಲ್ಲಿ ಯಾವ ರಸ್ತೆಯಲ್ಲಿ ಓಡಾಡುತ್ತಾಳೆ ಎನ್ನೋದು ಜಯದೇವ್‌ಗೆ ಗೊತ್ತಾಗಿದೆ. ಹೀಗಾಗಿ ಅವಳು ಒಂದಲ್ಲ ಒಂದು ದಿನ ಜಯದೇವ್ ಕೈಗೆ ಸಿಗಬಹುದು.
ಗೌತಮ್‌ಗೆ ಎಲ್ಲ ವಿಷಯ ಗೊತ್ತಾಗಿದೆ, ಹೀಗಾಗಿ ಅವನು ಮನೆ ಬಿಟ್ಟು ಬಂದು ವಠಾರದಲ್ಲಿದ್ದಾನೆ ಎನ್ನೋದು ಭೂಮಿಗೆ ಗೊತ್ತೇ ಇಲ್ಲ. ಒಂದು ಕಡೆ ಇವರಿಬ್ಬರು ಎಲ್ಲ ವಿಷಯವನ್ನು ಮುಕ್ತವಾಗಿ ಮಾತನಾಡಬೇಕಿದೆ. ಇನ್ನೊಂದು ಕಡೆ ಭೂಮಿಕಾ ಸಹಿ ಸಿಕ್ಕರೆ, ಕಂಪ್ಲೀಠ್ ಆಗಿ ಗೌತಮ್‌ನ್ ಎಲ್ಲ ಆಸ್ತಿಯನ್ನು ಅನುಭವಿಸಬಹುದು, ಈಗ ಇರುವ 600 ಕೋಟಿ ರೂಪಾಯಿ ಸಾಲವನ್ನು ತೀರಿಸಬಹುದು ಎಂದು ಜಯದೇವ್ ಅಂದುಕೊಂಡಿದ್ದಾನೆ. ನಾನು, ಭೂಮಿಕಾ ಬೇರೆ ಆಗೋಕೆ ಶಕುಂತಲಾ ಕಾರಣ, ಮಗಳನ್ನು ಕಳೆದುಕೊಳ್ಳಲು ಇವರೇ ಕಾರಣ ಎಂದು ಗೊತ್ತಾದರೆ ಮಾತ್ರ ಗೌತಮ್ ಮತ್ತೆ ಆ ಮನೆಗೆ ಬಂದು ಅವರೆಲ್ಲರಿಗೂ ಠಕ್ಕರ್ ಕೊಡಬಹುದು. ಈ ದಿನಕ್ಕೋಸ್ಕರ ಎಲ್ಲ ವೀಕ್ಷಕರು ಕಾಯುತ್ತಿದ್ದಾರೆ.
ಗೌತಮ್ ಮಲತಾಯಿ ಶಕುಂತಲಾ, ಮಲ ಸಹೋದರ ಜಯದೇವ್ ಅವನ ಆಸ್ತಿಯನ್ನು ಹೊಡೆಯಲು ಏನೇನೋ ಪ್ಲ್ಯಾನ್ ಮಾಡಿದರು. ಇಂದು ಗೌತಮ್ ತನ್ನ ಮಗಳನ್ನು ಕಳೆದುಕೊಳ್ಳಲು ಇವರೇ ಕಾರಣ ಎಂದು ಅವನಿಗೆ ಗೊತ್ತಿಲ್ಲ. ಒಟ್ಟಿನಲ್ಲಿ ಗೌತಮ್ ಹಾಗೂ ಶಕುಂತಲಾ ನೆಮ್ಮದಿಯನ್ನು ಹಾಳು ಮಾಡಿದ ಇವರಿಗೆ ಏನು ಶಿಕ್ಷೆ ಸಿಗಲಿದೆಯೋ ಏನೋ!
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್, ಜಯದೇವ್ ಪಾತ್ರದಲ್ಲಿ ರಾಣವ್ ಗೌಡ, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.