
ವಿಶ್ವದ ಅತ್ಯಂತ ಜನಪ್ರಿಯ ಯೂಟ್ಯೂಬರ್, MrBeast ಎಂದೇ ಖ್ಯಾತಿ ಪಡೆದಿರುವ ಜಿಮ್ಮಿ ಡೊನಾಲ್ಡ್ಸನ್ ಅವರು ತಮ್ಮ ದೀರ್ಘಕಾಲದ ಗೆಳತಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಥಿಯಾ ಬೂಯ್ಸೆನ್ ಜೊತೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ವಿವಾಹದ ಸುಂದರ ಮತ್ತು ಡ್ರೀಮಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಸುಂದರವಾದ ಫೋಟೋಗಳನ್ನು ಹಂಚಿಕೊಂಡ MrBeast, "ನಾನು ಮಿಸೆಸ್ ಬೀಸ್ಟ್ ಅನ್ನು ಕಂಡುಕೊಂಡೆ" (I found MrsBeast). ಇದು ನನ್ನ ಜೀವನದ ಅತ್ಯಂತ ಸುಂದರವಾದ ದಿನ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಪ್ರಪಂಚದ ಮೂಲೆ ಮೂಲೆಯಲ್ಲಿರುವ MrBeast ಅಭಿಮಾನಿಗಳು ಅವರಿಗೆ ವಿವಾಹದ ಶುಭಾಶಯಗಳನ್ನು ತಿಳಿಸಿದ್ದಾರೆ.
MrBeast ರಿಚರ್ಡ್ ಬ್ರಾನ್ಸನ್ ಅವರ ಖಾಸಗಿ ನೆಕ್ಕರ್ ಐಲ್ಯಾಂಡ್ ನಲ್ಲಿ ಅತ್ಯಂತ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಸುಮಾರು 70 ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮದುವೆ ಡ್ರೆಸ್ ಬಗ್ಗೆ ಹೇಳುವುದಾದರೆ, ಥಿಯಾ ಬೂಯ್ಸೆನ್ ಸುಂದರವಾದ ಬಿಳಿ ಬಣ್ಣದ ಫ್ಲೋರಸ್ ಡಿಸೈನ್ ಇರುವಂತಹ ನೆಟೆಡ್ ಲಾಂಗ್ ಗೌನ್ ಧರಿಸಿದ್ದರು, MrBeast ಆಫ್ ವೈಟ್ ಬಣ್ಣದ ಬ್ಲೇಜರ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಕ್ಲಾಸಿಕ್ ಲುಕ್ ನಲ್ಲಿ ಗಮನ ಸೆಳೆದರು. ವಿವಾಹ ಸಂಭ್ರಮದಲ್ಲಿ ಕೇವಲ ಮದುವೆ ಮಾತ್ರ ಅಲ್ಲ, ಅತಿಥಿಗಳಿಗಾಗಿ ಕೈಟ್‌ಸರ್ಫಿಂಗ್ ಮತ್ತು ಸ್ನಾರ್ಕ್ಲಿಂಗ್‌ನಂತಹ ಚಟುವಟಿಕೆಗಳು ಸಹ ನಡೆದಿತ್ತು ಎನ್ನಲಾಗಿದೆ.
MrBeast ಮತ್ತು ಥಿಯಾ ಬೂಯ್ಸೆನ್ ಮೊದಲ ಬಾರಿಗೆ 2022 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭೇಟಿಯಾದರು. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಅಂದೇ ಡೇಟಿಂಗ್ ಮಾಡಲು ಶುರುಮಾಡಿದ್ದರು ಈ ಜೋಡಿ. ಜಿಮ್ಮಿ 2024 ರ ಕ್ರಿಸ್‌ಮಸ್ ಸಮಯದಲ್ಲಿ ಥಿಯಾಗೆ ಪ್ರಪೋಸ್ ಮಾಡಿದರು. ದೀರ್ಘಕಾಲದಿಂದ ರಿಲೇಶನ್’ಶಿಪ್ ನಲ್ಲಿದ್ದ ಜೋಡಿ ಈಗ ಅಧಿಕೃತವಾಗಿ ಪತಿ-ಪತ್ನಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.