
ಬೆಂಗಳೂರು: ಸೀಸನ್ 13ರ ಕನ್ನಡ ಬಿಗ್‌ಬಾಸ್ ನೋಡುಗರನ್ನು ಹಂತ ಹಂತವಾಗಿ ಆಕರ್ಷಿಸುತ್ತಿದ್ದಾರೆ. ಈ ವಾರ ಹೈಜಾಕರ್ಸ್ ಆಗಿ ಸೋನಿಕಾ ಗೌಡ, ಪ್ರಶಾಂತ್ ಮತ್ತು ಸೋನಿಕಾ ಗೌಡ ಆಗಮಿಸಿದ್ದು, ಆಟದ ತೀವ್ರತೆ ಹೆಚ್ಚಾಗಿದೆ. ಗಾನವಿ ಗೌಡ ಮನೆಯೊಳಗೆ ಬರುತ್ತಿದ್ದಂತೆ ಎಲ್ಲರೊಂದಿಗೆ ಸಮಯ ಕಳೆಯುವ ಮೂಲಕ ಸಹಸ್ಪರ್ಧಿಗಳಿಗೆ ಹತ್ತಿರವಾಗುತ್ತಿದ್ದಾರೆ. ಈ ಒಂದು ಕಾರಣದಿಂದಲೇ ಮೊದಲ ವಾರದಲ್ಲಿ ತಂಡವೊಂದಕ್ಕೆ ನಾಯಕಿಯಾಗಿದ್ದಾರೆ. ಸದ್ಯ ಯಶಸ್ ಕೃಷ್ಣ ಮತ್ತು ಗಾನವಿ ಗೌಡ ಜೊತೆಗಿನ 18 ಪ್ಲಸ್ ಮಾತುಕತೆಯ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗಾನವಿ ಗೌಡ ವಿರುದ್ಧ ಇಡೀ ತಂಡವೇ ತಿರುಗಿಬಿದ್ದರೂ ಯಶಸ್ ಕೃಷ್ಣ ಮಾತ್ರ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ತಟಸ್ಥ ನಿಲುವು ಹೊಂದಿದ್ದಾರೆ. ಹಾಗಾಗಿ ಯಶಸ್‌ಗೆ ಗಾನವಿ ಹತ್ತಿರವಾಗಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಬಂದ ಮೊದಲ ದಿನದಿಂದಲೂ ಯಶಸ್ ಕೃಷ್ಣ, ಚಾಕ್ಲೇಟ್ ಬಾಯ್ ಇಮೇಜ್‌ನಲ್ಲಿ ಗಮನ ಸಳೆದಿದ್ದಾರೆ. ಇಷ್ಟು ದಿನ ಸೌಂದರ್ಯಾ ಶೆಟ್ಟಿ ಜೊತೆ ಕಾಣಿಸಿಕೊಳ್ಳುತ್ತಿದ್ದ ಯಶಸ್, ಇದೀಗ ಗಾನವಿ ಸುತ್ತವೇ ಸುತ್ತಿದ್ದಾರೆ.
ಬಾತ್‌ರೂಮ್ ಏರಿಯಾದಲ್ಲಿ ಯಶಸ್ ಜೊತೆ ಮಾತನಾಡುವಾಗ ಗಾನವಿ ಗೌಡ, ತಾವು ಆಟದಲ್ಲಿ ಎಷ್ಟು ಫಿಟ್ ಎಂಬುದರ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಯಶಸ್, ಈ ಎಲ್ಲಾ ಮಾತುಗಳಿಗೆ ಮತ್ತೊಂದು ಅರ್ಥ ಕಲ್ಪಿಸಿದರು. ಈ ವಿಷಯ ತಿಳಿಯುತ್ತಲೇ ಗಾನವಿ ಗೌಡ, ಅಲ್ಲಿಂದ ನಗುತ್ತಾ ತೆರಳುತ್ತಾರೆ. ಹಾಗಾದ್ರೆ ಇಬ್ಬರ ನಡುವಿನ ಸಂಭಾಷಣೆ ಏನು ಎಂಬುದನ್ನು ನೋಡೋಣ ಬನ್ನಿ.
ಗಾನವಿ ಗೌಡ: ನನ್ನ ಸ್ಟ್ರೆಂಥ್ ಸಿಕ್ಕಾಪಟ್ಟೆ, ಎಕ್ಸ್‌ಟ್ರೀಂ ಲೆವೆಲ್‌ನಲ್ಲಿದೆ.
ಯಶಸ್: ಗುಡ್, ದೇವರು ನಿನ್ನ ಗಂಡನಿಗೆ ಒಳ್ಳೇದು ಮಾಡ್ಲಿ ಅಂತ ಕೇಳ್ಕೊತ್ತಿನಿ.
ಗಾನವಿ ಗೌಡ: ನನ್ನ ಗಂಡ ಫುಲ್ ಅದೃಷ್ಟ ಮಾಡಿರ್ತಾನಂತೆ. ನಿಜ. ನನ್ನನ್ನು ಮದುವೆಯಾದ್ಮೇಲೆ ಗಂಡ ಫುಲ್ ಶ್ರೀಮಂತ ಆಗ್ತಾನಂತೆ.
ಯಶಸ್: ನಿನಗೊಂದು ಇಷ್ಟೊಂದು ಸ್ಟ್ರೆಂಥ್ ಇರಬೇಕಾದ್ರೆ, ಬೇಗ ಸುಸ್ತಾಗ್ತನಂತೆ ಅನ್ನಿಸುತ್ತೆ. ಕೆಲಸ ಮಾಡಿ ಮಾಡಿ ಸುಸ್ತಾಗ್ತನಂತೆ ಎಂದು ಹೇಳಿ ನಗುತ್ತಾನೆ.
ಗಾನವಿ ಗೌಡ: ಯಶಿ... ಯಶಿ.. ನೀವು ಹೀಗೆ ಅಂತ ನನಗೆ ನಿಜವಾಗ್ಲೂ ಗೊತ್ತಿರಲಿಲ್ಲ. ನೋ ಕಮೆಂಟ್ (ಈ ಮಾತುಗಳನ್ನು ಹೇಳಿ ಗಾನವಿ ಮತ್ತೆ ನಗುತ್ತಾರೆ)
ಯಶಸ್: ನಿನ್ನ ಸ್ಟ್ರೆಂಥ್ ತುಂಬಾ ಅಲ್ಲವಾ ಎಂದು ಹೇಳ್ತಾರೆ. (ನಂತರ ಇಬ್ಬರು ಜೊತೆಯಾಗಿ ನಗುತ್ತಾರೆ)
ಇತ್ತ ಯಶಸ್ ಜೊತೆ ಮಾತನಾಡುವ ಸಂದರ್ಭದಲ್ಲಿ ನನಗೆ ಮದುವೆ ಆಗುವಂತೆ ಯಾರೂ ಸಹ ಫೋರ್ಸ್ ಮಾಡಲ್ಲ. ನಾನು ಮದುವೆ ಬಗ್ಗೆ ಒಮ್ಮೆಯೂ ಚಿಂತೆ ಮಾಡಿಲ್ಲ. ಅಕ್ಕಾ ಮಾತ್ರ ಮದುವೆ ಬಗ್ಗೆ ಹೇಳ್ತಾಳೆ ಎಂದು ಸೌಂದರ್ಯಾ ಶೆಟ್ಟಿ ಹೇಳುತ್ತಾರೆ. ನಂತರ ಯಶಸ್ ತಮ್ಮನ್ನು ಮದುವೆಯಾಗುವಂತೆ ಪರೋಕ್ಷವಾಗಿ ಹೇಳುತ್ತಾರೆ. ಆದ್ರೆ ಮಂಡ್ಯಕ್ಕೆ ಬರಬೇಕು ಎಂಬ ಷರತ್ತು ಹಾಕ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.