
ಮುಂಬೈ (ಸೆ.30) ಬಾಲಿವುಡ್ ನಿರ್ದೇಶಕ ಹಾಗಾ ನಿರ್ಮಾಪಕ ಕರಣ್ ಜೋಹರ್ ಕಳೆದ ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ. ಹೀಗಾಗಿ ಹಲವು ಕಾರ್ಯಮಗಳಿಂದ ದೂರ ಉಳಿದಿದ್ದರು. ಇದೀಗ ಕರಣ್ ಜೋಹರ್ ಭಾವುಕರಾಗಿದ್ದಾರೆ. ಕಳೆದ 2 ದಶಗಳಿಂದ ನಡೆಸಿಕೊಂಡು ಬರುತ್ತಿದ್ದ ಅತೀ ಸುದೀರ್ಘ ಟಿವಿ ಶೋ ಕಾಫಿ ವಿಥ್ ಕರಣ್ ಇದೀಗ ಅಂತ್ಯಕೊಳ್ಳುತ್ತಿದೆ. ಕಾಫಿ ವಿಥ್ ಕರಣ್ ಕೊನೆಯ ಸೀಸನ್ ನಡೆಸಿಕೊಟ್ಟು ಕಾರ್ಯಕ್ರಮಕ್ಕೆ ಅಂತ್ಯಹಾಡಲು ಕರಣ್ ಜೋಹರ್ ನಿರ್ಧರಿಸಿದ್ದಾರೆ. 9ನೇ ಸೀಸನ್ ಅಂತಿಮ ಶೋ ಎಂದು ಕರಣ್ ಜೋಹರ್ ಘೋಷಿಸಿದ್ದಾರೆ.
ಕಾಫಿ ವಿಥ್ ಕರಣ್ ಸೀಸನ್ 9 ಪ್ರೋಮೋ ರೀಲಿಸ್ ಮಾಡಲಾಗಿದೆ. ತಮ್ಮ ಶೋ ಕೊನೆಗೊಳ್ಳುತ್ತಿರುವ ಕುರಿತು ಕಳೆದರೆಡು ದಶಕಗಳ ಜರ್ನಿ ನೆನೆದು ಕರಣ್ ಜೋಹರ್ ಭಾವುಕರಾಗಿದ್ದಾರೆ. 2004ರಲ್ಲಿ ತಂದೆ ಮಾತುಕತೆ ವೇಳೆ ಟಾಕ್ ಶೋ ಆರಂಭಿಸಲು ಹೇಳಿದ್ದರು. ಬಳಿಕ ತಂದೆ ನಿಧನರಾದರು. ತಂದೆ ಜೂನ್‌ನಲ್ಲಿ ನಿಧನರಾದರೆ, ಆಗಸ್ಟ್‌ನಲ್ಲಿ ತಂದೆ ಮಾತಿನಂತೆ ಕಾಫಿ ವಿಥ್ ಕರಣ್ ಟಾಕ್ ಶೋ ಆರಂಭಗೊಂಡಿತು. 8 ಆವೃತ್ತಿಗಳು ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದೀಗ 9ನೇ ಆವೃತ್ತಿ. ಇದು ಕೊನೆಯ ಆವೃತ್ತಿಯಾಗಿದೆ ಎಂದು ಕರಣ್ ಭಾವುಕರಾಗಿದ್ದಾರೆ.
ಸೆಲೆಬ್ರೆಟಿಗಳ ಗಾಸಿಫ್, ರಿಲೇಶನ್‍ಶಿಪ್ , ವಿವಾದಗಳ ಕುರಿತು ಶೋ ಜನರ ಮನೆ ಮಾತಾಯಿತು. ಹಲವು ಟೀಕೆಗಳು ಎದುರಿಸಬೇಕಾಯಿತು. ಕಳೆದ 8 ಆವೃತ್ತಿಗಳಲ್ಲಿ 161 ಶೋ ಮೂಲಕ ಕಾಫಿ ವಿಥ್ ಕರಣ್ ದೇಶಾದ್ಯಂತ ಉತ್ತಮ ಟಾಕ್ ಶೋ ಆಗಿ ಮಾರ್ಪಟ್ಟಿದೆ. ಇದೀಗ ಸಮಯ ಬಂದಿದೆ. ಕಾಫಿ ವಿಥ್ ಕರಣ ಶೋ ಅಂತ್ಯಗೊಳಿಸುತ್ತಿದ್ದೇನೆ. 9ನೇ ಆವೃತ್ತಿ ಶೀಘ್ರದಲ್ಲೇ ಆರಂಭಗೊಳ್ಳುತ್ತಿದೆ. ಈ ಆವೃತ್ತಿಯೊಂದಿಗೆ ಕಾಫಿ ವಿಥ್ ಕರಣ ಅಂತ್ಯಗೊಳ್ಳುತ್ತಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಕಾಫಿ ವಿಥ್ ಕರಣ್ ನನ್ನ ಜೀವನದ ಪ್ರಮುಖ ಭಾಗ. ಪ್ರತಿ ಎಪಿಸೋಡ್‌ಗಳನ್ನು ಇಷ್ಟಪಟ್ಟು ಪ್ರೀತಿಯಿಂದ ಮಾಡಿದ್ದೇನೆ. ಕೆಲ ಪಯಣವನ್ನು ನಿಲ್ಲಿಸಲು ಬಯಸುವುದಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಪಯಣ ಕೊನೆಗಳ್ಳುತ್ತದೆ. ಕಾಫಿ ವಿಥ್ ಕರಣ ಇದೀಗ ಕೊನೆಗೊಳ್ಳುತ್ತಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ.
9ನೇ ಆವೃತ್ತಿ ಕಾಫಿ ವಿಥ್ ಕರಣ್ ಶೋ ಅಕ್ಟೋಬರ್ 14 ರಿಂದ ಸ್ಟ್ರೀಮ್ ಆರಂಭಗೊಳ್ಳಲಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ನಡೆಯಲಿದೆ. 2004ರಿಂದ ಇಲ್ಲೀವರೆಗೆ ಬರೋಬ್ಬರಿ 20 ವರ್ಷಗಳ ಈ ಸುದೀರ್ಘ ಪಯಣದಲ್ಲಿ ಹಲವು ಸುಂದರ ನೆನಪುಗಳಿವೆ ಎಂದು ಕರಣ್ ಜೋಹರ್ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.