ಮದುವೆಯಾದ ಒಂದೇ ತಿಂಗಳಿಗೆ ಗುಡ್‌ನ್ಯೂಸ್‌ ಕೊಟ್ರಾ ಯಜಮಾನ ಸೀರಿಯಲ್‌ ನಟಿ ಸ್ಫೂರ್ತಿ ರಮಿತಾ, ತಮ್ಮ ವಿಡಿಯೋಗೆ ತಾವೇ ಕೊಟ್ಟ ಸ್ಪಷ್ಟನೆ ಏನು?

Published : Sep 29, 2026, 08:41 PM IST
Spoorthi Ramitha Pregnancy Truth

ಸಾರಾಂಶ

'ಯಜಮಾನ' ಧಾರಾವಾಹಿ ಖ್ಯಾತಿಯ ನಟಿ ಸ್ಪೂರ್ತಿ ರಮಿತಾ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ತಾವು ಗರ್ಭಿಣಿ ಎಂದು ಹೇಳಿಕೊಂಡು ವೈರಲ್ ಆಗಿದ್ದ ಸುದ್ದಿಯ ಹಿಂದಿನ ಅಸಲಿ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು (ಸೆ.29): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ 'ಯಜಮಾನ' ಧಾರಾವಾಹಿಯಲ್ಲಿ 'ಪಲ್ಲವಿ' ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ನಟಿ ಸ್ಪೂರ್ತಿ ರಮಿತಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ನಟಿ, ತಾವು ತಾಯಿಯಾಗುತ್ತಿರುವುದಾಗಿ ಹಂಚಿಕೊಂಡಿದ್ದ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಆದರೆ, ಈ ವಿಚಾರವಾಗಿ ನಟಿ ಸ್ಪೂರ್ತಿ ರಮಿತಾ ಅವರೇ ಸ್ವತಃ ಮುಖಾಮುಖಿಯಾಗಿ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ನಿಶ್ಚಿತಾರ್ಥದಿಂದ ಅದ್ದೂರಿ ಮದುವೆಯವರೆಗೆ:ಕಿರುತೆರೆಯಲ್ಲಿ ನಟಿಸುವ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸ್ಪೂರ್ತಿ, ಆರಂಭದಲ್ಲಿ ತಮ್ಮ ಭಾವಿ ಪತಿಯ ಮುಖವನ್ನು ಪೂರ್ತಿಯಾಗಿ ತೋರಿಸದೆ 'ಸಾಫ್ಟ್ ಲಾಂಚ್' ಮಾಡಿದ್ದರು. ತದನಂತರ ತಮ್ಮ ಅದ್ದೂರಿ ನಿಶ್ಚಿತಾರ್ಥದ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ಕಳೆದ ಆಗಸ್ಟ್ ತಿಂಗಳಿನಲ್ಲಿ ವಿಷ್ಣು ಎಂಬುವವರ ಜೊತೆ ಸಪ್ತಪದಿ ತುಳಿದಿದ್ದ ಸ್ಪೂರ್ತಿ, ಮದುವೆಯ ಸುಂದರ ಕ್ಷಣಗಳನ್ನು "ನನ್ನ ನೆಚ್ಚಿನ ವಾಸ್ತವ" (My Favorite Reality) ಎಂದು ಬರೆದುಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ನವಜೋಡಿಗೆ ಕಿರುತೆರೆಯ ಸಹನಟಿ ಅಂಕಿತಾ ಜಯರಾಮ್ ಸೇರಿದಂತೆ ಸಾಲು ಸಾಲು ತಾರೆಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದರು.

ತಾಯಿಯಾಗುತ್ತಿರುವುದು ನಿಜವಲ್ಲ, ಅದೊಂದು 'ಪ್ರ್ಯಾಂಕ್'!

ಮದುವೆಯಾದ ಕೆಲವೇ ದಿನಗಳಲ್ಲಿ ನಟಿ ಸ್ಪೂರ್ತಿ ರಮಿತಾ ತಾವು ಪ್ರೆಗ್ನೆಂಟ್ ಆಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಗಳು ಹಾಗೂ ಮಾಧ್ಯಮಗಳು ನಟಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದರು. ಆದರೆ, ಈ ಸುದ್ದಿಯ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ನಟಿ ಸ್ಪೂರ್ತಿ, "ಇದು ಕೇವಲ ತಮಾಷೆಗಾಗಿ ಮಾಡಿದ ಪ್ರ್ಯಾಂಕ್ ವಿಡಿಯೋ (Prank Video)" ಎಂದು ಸತ್ಯ ಹೇಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದ ಕೊನೆಯಲ್ಲಿ ಇದು ಪ್ರ್ಯಾಂಕ್ ಎಂದು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ. "ನಾನು ಮಾಡಿದ ವಿಡಿಯೋ ಹೀಗೆ ಸುದ್ದಿಯಾಗುತ್ತದೆ ಎಂದುಕೊಂಡಿರಲಿಲ್ಲ. ನನಗೆ ಮದುವೆಯಾಗಿ ಇನ್ನೂ ಎರಡು ತಿಂಗಳು ಕೂಡ ಆಗಿಲ್ಲ, ಇಷ್ಟು ಬೇಗ ನಾನು ಪ್ರೆಗ್ನೆಂಟ್ ಆಗಲು ಹೇಗೆ ಸಾಧ್ಯ? ನೀವಿನ್ನೂ ಆ ವಿಡಿಯೋ ನೋಡಿಲ್ಲವೆಂದರೆ ಈಗಲೇ ಯೂಟ್ಯೂಬ್‌ನಲ್ಲಿ ನೋಡಿ," ಎಂದು ನಟಿ ಸ್ಪೂರ್ತಿ ರಮಿತಾ ತಮಾಷೆಯಾಗಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ತಮ್ಮ ವಿಡಿಯೋ ಪ್ರ್ಯಾಂಕ್ ಎಂದು ತಿಳಿದ ಮೇಲೆಯೂ ತಮಗೆ ಶುಭಾಶಯ ಕೋರಿದ ಪ್ರತಿಯೊಬ್ಬ ಅಭಿಮಾನಿಗೂ ನಟಿ ಧನ್ಯವಾದ ಅರ್ಪಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare ಊಹಿಸದ ಟ್ವಿಸ್ಟ್​: ದೀಪಿಕಾ ಎದುರಿಗೆ ಬಂದ ಭೂಮಿಕಾ- ಮುಂದಾದದ್ದು ಮಾತ್ರ ಘೋರ ದುರಂತ
ನಾನೇನೂ ಮೂರು ಬಿಟ್ಟೋಳಲ್ಲ, ಮರ್ಯಾದೆ ಇರೋಳು; ನನ್ನ ದೇಹ- ನನ್ನ ಬಟ್ಟೇರಿ: Bigg Boss ವೈಷ್ಣವಿ ಗರಂ