
ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆಗೆ ಒಂದೇ ದಿನ ಬಾಕಿ ಉಳಿದಿದೆ. ಹೀಗಿರುವಾಗ ಸ್ಪರ್ಧಿಗಳ ಬಗ್ಗೆ ಅವರ ಮನೆಯವರು, ಸ್ನೇಹಿತರು, ಕುಟುಂಬಸ್ಥರು ಪ್ರಚಾರ ಮಾಡುತ್ತಿದ್ದಾರೆ. ಹೀಗಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ರಾ?
ಕೆಲವು ದಿನಗಳ ಹಿಂದೆ ರಜನಿಕಾಂತ್ ಅವರು ಯುಟ್ಯೂಬರ್ ಜೊತೆಗಿನ ಮಾತುಕತೆ ವೇಳೆ, “ನಾನು ಟಿವಿ ನೋಡಲ್ಲ, ನನ್ನ ಪತ್ನಿ ಬಿಗ್ ಬಾಸ್ ಕನ್ನಡ ಸೀಸನ್ 12 ನೋಡ್ತಾರೆ, ಅವರಿಗೆ ಗಿಲ್ಲಿ ನಟ ಅಂದರೆ ತುಂಬ ಇಷ್ಟ” ಎಂದು ಹೇಳಿದ್ದಾರೆ ಎನ್ನುವ ಪೋಸ್ಟ್‌ವೊಂದು ವೈರಲ್ ಆಗಿತ್ತು. ಇದು ಕೂಡ ಶುದ್ಧ ಸುಳ್ಳು. ಯಾವುದೋ ಟ್ರೋಲ್ ಪೇಜ್ ಇದನ್ನು ಸೃಷ್ಟಿ ಮಾಡಿತ್ತು.
ಹೀಗೆ ಗಿಲ್ಲಿ ನಟನ ಬಗ್ಗೆ ಅವರು ಹೇಳಿದರು, ಇವರು ಹೇಳಿದರು ಎನ್ನುವ ಪೋಸ್ಟ್ ಕೂಡ ವೈರಲ್ ಆಗುತ್ತಿರತ್ತದೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಮಾತನಾಡಿದ್ದಾರೆ ಎಂಬ ಪೋಸ್ಟ್‌ವೊಂದು ವೈರಲ್ ಆಗ್ತಿದೆ. ಇದು ಕೂಡ ಸುಳ್ಳು.
ಗಿಲ್ಲಿ ನಟ ಅವರು ಅಭಿಮಾನಿಗಳನ್ನು ಸೃಷ್ಟಿ ಮಾಡಿಕೊಂಡಿರೋದಂತೂ ಸತ್ಯ. ಗಿಲ್ಲಿ ನಟ ಅವರು ಅಭಿಮಾನಿಯೋರ್ವ ಕೈಗೆ ಗಿಲ್ಲಿ ನಟನ ಮುಖವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇದನ್ನು ನೋಡಿ ಗಿಲ್ಲಿ ತುಂಬ ಖುಷಿಪಟ್ಟಿದ್ದರು. ಹೊರಗಡೆ ಬಂದ್ಮೇಲೆ ನಾನು ಅವರನ್ನು ಭೇಟಿ ಮಾಡ್ತೀನಿ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.
ಗಿಲ್ಲಿ ನಟ ಅವರು ದೊಡ್ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಿದ್ದಂತೂ ಸತ್ಯ. ಈ ಬಾರಿ ನೀವು ಬಿಗ್ ಬಾಸ್ ಮನೆಯಲ್ಲಿ ಇಲ್ಲ ಅಂದಿದ್ರೆ ನಿಜಕ್ಕೂ, ಈ ಮನೆ ಒಂದೇ ಶೋ ಕೂಡ ನೀರಸ ಆಗುತ್ತಿತ್ತು. ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ರಿಷಾ ಗೌಡ, ರಾಶಿಕಾ ಶೆಟ್ಟಿ ಜೊತೆ ಗಿಲ್ಲಿ ನಟ ಅವರು ದೊಡ್ಡ ಮಟ್ಟದಲ್ಲಿ ಜಗಳ ಆಡಿದ್ದರು. ಗಿಲ್ಲಿ ನಟನ ಕಾಮಿಡಿ ಬೇರೆಯವರ ಮನಸ್ಸಿಗೆ ನೋವುಂಟು ಮಾಡುತ್ತದೆ ಎಂದು ಸ್ಪರ್ಧಿಗಳೇ ಆರೋಪ ಮಾಡಿದ್ದುಂಟು.
ಗಿಲ್ಲಿ ನಟ ಯಾವಾಗಲೂ ಮಾತನಾಡುತ್ತಿರುತ್ತಾರೆ, 24/7 ಅವರ ಜೊತೆ ಇರೋದು ಕಷ್ಟ ಎಂದು ಸೂರಜ್ ಸಿಂಗ್, ರಜತ್ ಕೂಡ ಹೇಳಿದ್ದುಂಟು. ಒಟ್ಟಿನಲ್ಲಿ ಗಿಲ್ಲಿ ನಟ ಅವರು ಈ ಬಾರಿಯ ಬಿಗ್ ಬಾಸ್ ಶೋ ನೋಡುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.