ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್‌ಗೆ ಅನ್ಯಾಯ? ₹10 ಲಕ್ಷ ಕೊಡ್ತೀನೆಂದರೂ ಒಂದೇ ಒಂದು ಆಸೆ ಈಡೇರಿಸಲಿಲ್ಲ!

Published : Jan 17, 2026, 09:17 AM IST
Bigg Boss Varthur Santhosh

ಸಾರಾಂಶ

ಬಿಗ್ ಬಾಸ್ ಮನೆಯಿಂದ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್‌ಗೆ ಭಾರೀ ಮೋಸವಾಗಿದೆ. ಇದಕ್ಕೆ ಕಾರಣ ಅವರಿಟ್ಟ ಒಂದೇ ಒಂದು ಬೇಡಿಕೆಯನ್ನೂ ಈಡೇರಿಸಿಲ್ಲ.  ಈ ಒಂದು ಆಸೆಯನ್ನು ಈಡೇರಿಸಲು ₹10 ಲಕ್ಷ ರೂ, ಹಣ ಕೊಡುವುದಾಗಿ ಘೋಷಣೆ ಮಾಡಿದರೂ, ಅವರ ಬೇಡಿಕೆಯನ್ನು ಈಡೇರಿಸದಿರುವುದು ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ಸೀಸನ್ 12ರ ಎಲ್ಲ ಟಾಪ್-6 ಸ್ಪರ್ಧಿಗಳ ಬೇಡಿಕೆ ಹಾಗೂ ಆಸೆಗಳನ್ನು ಈಡೇರಿಸಿದ ಬಿಗ್ ಬಾಸ್, ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರ ಒಂದೇ ಒಂದು ಆಸೆಯನ್ನು ಈವರೆಗೂ ಈಡೇರಿಕೆ ಮಾಡಿಲ್ಲ. ಹಾಲಿ ನಡೆಯುತ್ತಿರುವ ಸೀಸನ್ 12ರ ಮುಂದೆಯೂ ಒಂದು ಬೇಡಿಕೆಯನ್ನು ಇಟ್ಟಿದ್ದರೂ, ಅದಕ್ಕಾಗಿ 10 ಲಕ್ಷ ರೂ. ಹಣವನ್ನು ಕೊಡಲು ಸಿದ್ಧರಿದ್ದರೂ ಆಸೆಯನ್ನು ಈಡೇರಿಸುವುದಕ್ಕೆ ಬಿಗ್ ಬಾಸ್ ಮನಸ್ಸು ಮಾಡಿಲ್ಲ.

ಹೌದು, ಬಿಗ್ ಬಾಸ್ ಕೆಲವೊಬ್ಬರ ವಿಚಾರದಲ್ಲಿ ಭೇದ-ಭಾವ ಮಾಡುತ್ತಾರೆಯೇ ಎಂಬ ಅನುಮಾನಗಳೂ ಕೂಡ ವ್ಯಕ್ತವಾಗುತ್ತವೆ. ಕಾರಣ ಹಾಲಿ ಸೀಸನ್‌ನಲ್ಲಿ ಎಲ್ಲ ಟಾಪ್ 6 ಸ್ಪರ್ಧಿಗಳ ಬೇಡಿಕೆಗಳನ್ನು ಚಾಚೂ ತಪ್ಪದೇ ಈಡೇರಿಕೆ ಮಾಡಿದ್ದಾರೆ. ಬಿಗ್ಬಾಸ್ ಸ್ಪರ್ಧಗಳಿಗೆ ಬೇಕಾದ, ಆಪ್ತರನ್ನು ಮನೆಯೊಳಗೆ ಕರೆಸಿಕೊಳ್ಳುವುದು, ಇಷ್ಟದ ಊಟ ಕೊಡುವುದು ಸೇರಿದಂತೆ ಕರಾವಳಿ ಕರ್ನಾಟಕದ ಪ್ರಸಿದ್ಧ ಜಾನಪದ ನೃತ್ಯ ಪ್ರಕಾರವಾದ ಹುಲಿವೇಷ ಕುಣಿತದ ತಂಡವನ್ನೂ ಬಿಗ್ ಬಾಸ್ ಮನೆಯೊಳಗೆ ಕರೆಸಿ, ನೃತ್ಯ ಪ್ರದರ್ಶನ ಮಾಡಿಸಲಾಗಿದೆ. ಆದರೆ, ವರ್ತೂರು ಸಂತೋಷ್ ಅವರ ಬೇಡಿಕೆ ಈಡೇರಿಕೆಯಲ್ಲಿ ಹಿಂದೇಟು ಹಾಕಿದ್ದೇಕೆ ಎಂಬ ಪ್ರಶ್ನೆಗಳು ಬಿಗ್ ಬಾಸ್ ವೀಕ್ಷಕರನ್ನು ಕಾಡುತ್ತಿವೆ.

ಬಿಗ್ ಬಾಸ್ ಅವರನ್ನೇ ನೋಡಬೇಕು

ಬಿಗ್ ಬಾಸ್ ಕನ್ನಡ ಸೀಸನ್ 10ರ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಹಳ್ಳಿಕಾರ್ ಎತ್ತುಗಳ ಪ್ರಚಾರಕ್ಕೆಂದೇ ಬಿಗ್ ಬಾಸ್ ಸ್ಪರ್ಧೆಗೆ ಬಂದಿದ್ದ ಬೆಂಗಳೂರಿನವರೇ ಆಗಿರುವ ವರ್ತೂರು ಸಂತೋಷ್ ಅವರ ಒಂದೇ ಒಂದು ಆಸೆಯೂ ಕೂಡ ಈಡೇರಿಲ್ಲ. ಸೀಸನ್ 10ರಲ್ಲಿ 111 ದಿನಗಳನ್ನು ಪೂರೈಸಿ ಫಿನಾಲೆಗೆ ಬಂದಿದ್ದ ವರ್ತೂರು ಸಂತೋಷ್ ಸೇರಿದಂತೆ ಎಲ್ಲರಿಗೂ ತಮ್ಮ ಆಸೆಗಳೇನಿದ್ದರೂ ಕೇಳಿದಲ್ಲಿ ಅದನ್ನು ಈಡೇರಿಸುವುದಾಗಿ ತಿಳಿಸಿದ್ದರು. ಆಗ ಸಂತೋಷ್ ತನಗೆ ಬಿಗ್ ಬಾಸ್ ಅಶರೀರವಾಣಿ ಯಾರದ್ದು, ಬಿಗ್ ಬಾಸ್ ಯಾರು ಎಂಬುದನ್ನು ನಾನು ನೋಡಬೇಕು. ಅವರೊಂದಿಗೆ ನಾನು ಮಾತನಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಆದರೆ, ಬಿಗ್ ಬಾಸ್ ಯಾರೆಂಬುದನ್ನು ಜಗತ್ತಿನ ಮುಂದೆ ಅನಾವರಣ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ಬಿಗ್ ಬಾಸ್ ವರ್ತೂರು ಸಂತೋಷ್ ಬೇಡಿಕೆಯನ್ನು ನಿರಾಕರಿಸಿ, ಬೇರೆ ಏನಾದರೂ ಬೇಡಿಕೆ ಇದ್ದರೆ ಹೇಳುವಂತೆ ತಿಳಿಸಿದ್ದರು.

ಹಳ್ಳಿಕಾರ್ ಎತ್ತುಗಳಿಗೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ

ಇದಾದ ನಂತರ ಪುನಃ ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಒಂದು ತಿಂಗಳು ಕಳೆದ ನಂತರ ಪುನಃ ಈ ಕುರಿತು ಮಾತನಾಡಿದ್ದ ವರ್ತೂರು ಸಂತೋಷ್ ಅವರು, ಬಿಗ್ ಬಾಸ್ ವಿಜೇತರು ₹50 ಲಕ್ಷ ಬಹುಮಾನ ಗೆಲ್ಲುತ್ತಾರೆ. ಆದರೆ, ರನ್ನರ್ ಅಪ್ ಕೂಡ ಅಷ್ಟೇ ಪ್ರಮುಖ ವ್ಯಕ್ತಿಯಾಗಿದ್ದು, ಅವರ ಶ್ರಮವೂ ಹೆಚ್ಚಾಗಿರುತ್ತದೆ. ಹೀಗಾಗಿ, ಬಿಗ್ ಬಾಸ್ ರನ್ನರ್ ಅಪ್‌ಗೆ ನನ್ನ ವೈಯಕ್ತಿಕವಾಗಿ 10 ಲಕ್ಷ ರೂ. ಹಣವನ್ನು ಕೊಡುವುದಾಗಿ ಘೋಷಣೆ ಮಾಡಿರುತ್ತಾರೆ. ಆದರೆ, ಇದಕ್ಕೊಂದು ಸಣ್ಣ ಷರತತು ಹಾಕಿರುತ್ತಾರೆ. ಅದೇನೆಂದರೆ ತಾನು ಬಿಗ್ ಬಾಸ್ ಮನೆಗೆ ಬರಲು ಕಾರಣವಾಗಿದ್ದ ಹಳ್ಳಿಕಾರ್ ಎತ್ತುಗಳನ್ನು ಬಿಗ್ ಬಾಸ್ ಮನೆಯೊಳಗಿನ ಆವರಣದಲ್ಲಿ ಕನ್ನಡ ನಾಡಿನ ವೀಕ್ಷಕರಿಗೆ ಪ್ರದರ್ಶನ ಮಾಡಲು ಅವಕಾಶ ನೀಡಬೇಕು ಎಂಬ ಷರತ್ತು ಅಥವಾ ಬೇಡಿಕೆಯೊಂದನ್ನು ಮುಂದಿಟ್ಟಿರುತ್ತಾರೆ. ಆದರೆ, ಈ ಬಾರಿಯೂ ಬಿಗ್ ಬಾಸ್ ಮಾತ್ರ ವರ್ತೂರು ಸಂತೋಷ್ ಅವರ ಬೇಡಿಕೆಯನ್ನು ಈಡೇರಿಸಿಲ್ಲ.

ಇದೀಗ ಬಿಗ್ ಬಾಸ್ ಮೊದಲ ರನ್ನರ್ ಅಪ್‌ಗೆ ವರ್ತೂರು ಸಂತೋಷ್ ಅವರು 10 ಲಕ್ಷ ರೂ. ಹಣ ಕೊಡುವುದಾಗಿ ಹೇಳಿದ್ದ ಮಾತು ಈಡೇರಿಸುತ್ತಾರೋ ಅಥವಾ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಇಲ್ಲಿ ಷರತ್ತು ಹಾಕಿದಂತೆ ಬಿಗ್ ಬಾಸ್ ಮನೆಯೊಳಗೆ ಹಳ್ಳಿಕಾರ್ ಹೋರಿಗಳನ್ನು ಕರೆತರಲು ಅವಕಾಶ ಸಿಗದಿದ್ದಕ್ಕಾಗಿ ರನ್ನರ್ ಅಪ್‌ಗ ಹಣ ಕೊಡುವುದನ್ನೂ ವರ್ತೂರು ಸಂತೋಷ್ ನಿರಾಕರಿಸುತ್ತಾರೆ ಎಂಬುದು ಕಂಡುಬರುತ್ತದೆ. ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ಇನ್ನೂ ಎರಡು ದಿನಗಳು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಂದು ಶಿರಸಿಯಲ್ಲಿಯೇ ಘೋಷಿಸಿದ್ದ Shiva Rajkumar: ನಾನು ಅವ್ರ ಕಾಲು ಧೂಳಿಗೂ ಸಮ ಇಲ್ಲ: ಗಿಲ್ಲಿ ನಟ
ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್