
ಸೂರಜ್, ಗಿಲ್ಲಿ ನಟ, ಮ್ಯೂಟೆಂಟ್ ರಘು ಅವರು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂವರು ವೈಲ್ಡ್‌ಕಾರ್ಡ್ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಹೇಳಿದ್ದರು. ಆಗ ಜಾಹ್ನವಿ ಹೇಳಿದ ಮಾತು ರಿಷಾ ಪಿತ್ತವನ್ನು ನೆತ್ತಿಗೇರಿಸಿದೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್ ಮಾಡಿದ್ದು, ವೀಕ್ಷಕರು ಕೊನೆಯಲ್ಲಿ ಏನಾಗಬಹುದು ಎಂದು ಕುತೂಹಲದಿಂದ ಕಾದು ನೋಡುತ್ತಿದ್ದಾರೆ.
ಜಾಹ್ನವಿ ಅವರು “ರಿಷಾ ಅವರು ಗಿಲ್ಲಿ ನಟ, ಚಂದ್ರಪ್ರಭ ಜೊತೆಗೆ ಫನ್ ಆಗಿ ನಡೆದುಕೊಳ್ಳಬಹುದು, ಅದು ನಮಗೆ ಮುಜುಗರ ಆಗತ್ತೆ” ಎಂದು ಹೇಳಿದ್ದಾರೆ. ಅಶ್ವಿನಿ ಗೌಡ ಅವರು, “ನನಗೆ ಅವರು ಅಷ್ಟಾಗಿ ಪಾಸಿಟಿವ್ ಆಗಿ ಕಾಣಿಸಲಿಲ್ಲ” ಎಂದು ಹೇಳಿದ್ದಾರೆ.
ಆಗ ರಿಷಾ ಅವರು, “ನೀವು ಮಾಡಿದ್ರೆ ಚೆನ್ನಾಗಿ ಕಾಣಿಸತ್ತೆ, ನಾವು ಮಾಡಿದ್ರೆ ಅಸಹ್ಯ ಎನಿಸುತ್ತದೆ. ನಮಗೆ ಅಸಹ್ಯ ಎನಿಸುತ್ತದೆ, ಥೂ. ನನ್ ತಾಕತ್ತು ಏನು ಎನ್ನೋದು ತೋರಸ್ತೀನಿ” ಎಂದು ಕೂಗಾಡಿದ್ದಾರೆ. ರಘು ಅವರು ಈ ಜಗಳ ನಿಲ್ಲಿಸಲು ಪ್ರಯತ್ನಪಟ್ಟಿದ್ದಾರೆ. ಅಂದಹಾಗೆ ಈ ಜಗಳವನ್ನು ಕಿಚ್ಚ ಸುದೀಪ್ ಮುಂದೆ ಆಡಿದ್ದಾರೆ. ಕಿಚ್ಚ ಸುದೀಪ್ ಅವರು ಸುಮ್ಮನೆ ಜಗಳವನ್ನು ವೀಕ್ಷಿಸಿದ್ದು, ಆ ಬಳಿಕ ಏನು ಮಾತನಾಡಲಿದ್ದಾರೆ ಎನ್ನುವ ಕುತೂಹಲ ಶುರುವಾಗಿದೆ.
ಬಿಗ್ ಬಾಸ್ ಮನೆಗೆ ಬಂದಿದ್ದ ರಿಷಾ ಅವರು ಗಿಲ್ಲಿ ನಟ, ಚಂದ್ರಪ್ರಭ ಜೊತೆ ಆತ್ಮೀಯತೆಯಿಂದ ಇದ್ದರು. ಒಮ್ಮೆಯಂತೂ ಗಿಲ್ಲಿ, ಚಂದ್ರಪ್ರಭ ಅವರು ರಿಷಾ ತೊಡೆ ಮೇಲೆ ಮಲಗಿದ್ದರು. ಅದಾದ ಬಳಿಕ ತಮಾಷೆಗೆಂದು ಗಿಲ್ಲಿ ಅವರ ಸುತ್ತಿದ್ದೂ ಹೌದು. ಇದೇ ವಿಚಾರದ ಬಗ್ಗೆ ಜಾಹ್ನವಿ ಮಾತನಾಡಿದ್ದರು.
ರಿಷಾ ಅವರು ಜಾಹ್ನವಿ ಬಳಿ, ಹೊರಗಡೆ ಅಶ್ವಿನಿ, ಜಾಹ್ನವಿ ಬಗ್ಗೆ ವೀಕ್ಷಕರಿಗೆ ಯಾವ ರೀತಿಯ ಅಭಿಪ್ರಾಯ ಇದೆ? ಜನರು ಹೇಗೆ ನೋಡುತ್ತಿದ್ದಾರೆ ಎಂದೆಲ್ಲ ಮಾತನಾಡಿದ್ದರು. ಆಗ ಜಾಹ್ನವಿ ಅವರು, ನನ್ನ ಅಣ್ಣ, ಅಮ್ಮ ನೋಡಿದ್ರೆ ಬೈತಾರೆ, ಮಗನನ್ನು ನೋಡಿಕೊಳ್ಳಿ ಎಂದು ಹೇಳಿ ಬಿಟ್ಟು ಬಂದಿದ್ದೀನಿ, ನೆಗೆಟಿವ್ ಪ್ರತಿಕ್ರಿಯೆ ಪಡೆಯಲು ನಾನು ಇಲ್ಲಿಗೆ ಬರಬೇಕಿತ್ತಾ? ನನ್ನ ಗುಂಡಿ ನಾವೇ ತೋಡಿಕೊಂಡೆವು ಎಂದೆಲ್ಲ ಹೇಳಿಕೊಂಡು ಅತ್ತಿದ್ದರು. ಜಾಹ್ನವಿಯನ್ನು ಅಶ್ವಿನಿ ಗೌಡ ಆಮೇಲೆ ಸಮಾಧಾನ ಮಾಡಿದ್ದುಂಟು.
ಅಶ್ವಿನಿ ಗೌಡ ನನ್ನ ಫ್ರೆಂಡ್ ಎಂದು ಜಾಹ್ನವಿ ಹೇಳುತ್ತಾರೆ. ಅಶ್ವಿನಿ ಹೇಳಿದಂತೆ ಜಾಹ್ನವಿ ಕೇಳುತ್ತಾರೆ, ಬುದ್ಧಿ ಉಪಯೋಗಿಸುತ್ತಿಲ್ಲ ಎಂದು ಗಿಲ್ಲಿ ನಟ ಎಲ್ಲರ ಮುಂದೆ ಹೇಳಿದ್ದುಂಟು. ಇನ್ನುಳಿದಂತೆ ಇತರ ಸ್ಪರ್ಧಿಗಳು ಕೂಡ ಜಾಹ್ನವಿ ಆಟದ ಬಗ್ಗೆ ಬೇಸರ ಹೊರಹಾಕಿದ್ದರು.
ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಕಾಕ್ರೋಚ್ ಸುಧಿ, ಮ್ಯೂಟೆಂಟ್ ರಘು, ಸೂರಜ್, ಅಭಿಷೇಕ್ ಶ್ರೀಕಾಂತ್, ಧನುಷ್ ಗೌಡ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯ ಶೈವ, ಧ್ರುವಂತ್, ಮಲ್ಲಮ್ಮ, ಚಂದ್ರಪ್ರಭಾ, ಸ್ಪಂದನಾ ಸೋಮಣ್ಣ, ಮಾಳು ನಿಪನಾಳ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಆರ್‌ಜೆ ಅಮಿತ್, ಕರಿಬಸಪ್ಪ, ಮಂಜುಭಾಷಿಣಿ, ಅಶ್ವಿನಿ ಎಸ್ ಎನ್, ಸತೀಶ್ ಕ್ಯಾಡಬಮ್ಸ್ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.