Cadbury girl: 90ರ ದಶಕದ ವೈರಲ್ ಹುಡುಗಿ: ಯಾರೀ ಕ್ಯಾಡ್‌ಬರಿ ಗರ್ಲ್?

Published : Oct 25, 2025, 04:14 PM ISTUpdated : Oct 25, 2025, 04:24 PM IST
cadbury girl

ಸಾರಾಂಶ

1990ರ ದಶಕದಲ್ಲಿ ಪಿಯೂಷ್ ಪಾಂಡೆ ಸೃಷ್ಟಿಸಿದ ಕ್ಯಾಡ್ಬರಿ ಜಾಹೀರಾತಿನ ಮೂಲಕ ದೇಶಾದ್ಯಂತ ವೈರಲ್ ಆದವಳು ಈ  'ಕ್ಯಾಡ್ಬರಿ ಗರ್ಲ್'. (Cadbury girl) ಯಾರವಳು, ಈಗೆಲ್ಲಿದ್ದಾಳೆ? ಇಲ್ಲಿದೆ ವಿವರ. 

1990ರ ದಶಕದಲ್ಲಿ ಭಾರತದಲ್ಲಿ ಹೊಸ ಬಗೆಯ ಕ್ರಿಯೇಟಿವ್‌ ಜಾಹೀರಾತುಗಳು ಮೂಲಕ ಈ ಕ್ಷೇತ್ರದ ದಂತಕಥೆ ಎನಿಸಿದವರು ಪಿಯೂಷ್ ಪಾಂಡೆ. ಇವರು ಮುಂಬೈನಲ್ಲಿ 70ನೇ ವಯಸ್ಸಿನಲ್ಲಿ ನಿಧನರಾದರು. ಭಾರತದ ಅಡ್ವರ್‌ಟೈಸ್‌ಮೆಂಟ್‌ ಲೋಕವನ್ನೇ ಬದಲಾಯಿಸಿದ ವ್ಯಕ್ತಿ ಪಿಯೂಷ್ ಪಾಂಡೆ. ಕ್ಯಾಡ್‌ಬರಿ, ಅಮೂಲ್‌, ವೊಡಾಪೋನ್‌, ಲೂನಾ, ಏಷ್ಯನ್‌ ಪೇಂಟ್ಸ್‌ ಮೊದಲಾದ ಜಾಹಿರಾತುಗಳನ್ನು ನೀವು ನೆನಪಿಸಿಕೊಳ್ಳಬಹುದು. ಫೆವಿಕಾಲ್‌ನ "ಜೋರ್ ಲಗಾ ಕೆ ಹೈಶಾ" ಮತ್ತು ಏಷ್ಯನ್ ಪೇಂಟ್ಸ್‌ನ "ಹರ್ ಘರ್ ಕುಚ್ ಕೆಹ್ತಾ ಹೈ" ಮರೆಯಲೇ ಸಾಧ್ಯವಿಲ್ಲ. ಆದರೂ ಪಿಯೂಷ್ ಪಾಂಡೆಯನ್ನು ಅಮರಗೊಳಿಸಿದ ಜಾಹೀರಾತು ಕ್ಯಾಡ್‌ಬರಿ ಡೈರಿ ಮಿಲ್ಕ್ ಚಾಕಲೇಟಿನದು. 90ರ ದಶಕದಲ್ಲಿ ಬಬ್ಲಿ ಹುಡುಗಿಯೊಬ್ಬಳು ಈ ಜಾಹಿರಾತಿನಲ್ಲಿ ಕಾಣಿಸಿಕೊಂಡು ʼಕ್ಯಾಡ್‌ಬರಿ ಹುಡುಗಿʼ (Cadbury girl) ಎನಿಸಿಕೊಂಡಳು. ಈಕೆ ಯಾರು, ಈಗ ಎಲ್ಲಿದ್ದಾಳೆ ಗೊತ್ತೆ?

ಇವಳ ಹೆಸರು ಶಿಮೋನಾ ರಾಶಿ. ಸೋಶಿಯಲ್‌ ಮೀಡಿಯಾಗಳೆಲ್ಲ ನಮಗೆ ಪರಿಚಯವಾಗುವ ಮುನ್ನವೇ ವೈರಲ್‌ ಆಗಿದ್ದವರು ಶಿಮೋಆ ರಾಶಿ. ಟಿವಿ ಜಾಹೀರಾತುಗಳ ಸುವರ್ಣ ಯುಗದಲ್ಲಿ ಪಾಪ್ಯುಲರ್‌ ಆದಾಕೆ. ಅದು ಆದದ್ದು ಹೀಗೆ.

1994ರಲ್ಲಿ ಟಿವಿ ಪರದೆಗಳಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಜಾಹಿರಾತು ಬಿಡುಗಡೆಯಾಯಿತು. ಯುವತಿಯೊಬ್ಬಳು ಹೂವಿನ ನೀಲಿ ಉಡುಪನ್ನು ಧರಿಸಿ ಅದರಲ್ಲಿ ಕಾಣಿಸಿಕೊಂಡಳು. ದೇಶಾದ್ಯಂತ ಲಕ್ಷಾಂತರ ಜನರ ಹೃದಯಗಳಲ್ಲಿ ಈಕೆ ಡ್ಯಾನ್ಸ್‌ ಮಾಡಿದಳು. ಆ ಜಾಹೀರಾತಿನಲ್ಲಿ ಕ್ರಿಕೆಟ್‌ ಕೂಡ ಇತ್ತು. ಇದರಲ್ಲಿ ಈಕೆಯನೆಚ್ಚಿನ ಬ್ಯಾಟ್ಸ್‌ಮ್ಯಾನ್‌ ಸೆಂಚುರಿ ಬಾರಿಸುವ ಹಂತದಲ್ಲಿ ಹೊಡೆಯುವ ಶಾಟ್‌, ಕ್ಯಾಚ್‌ ಆಗುತ್ತದೋ ಅಥವಾ ಬೌಂಡರಿ ಲೈನ್‌ ದಾಟುತ್ತದೋ ಎಂಬ ಟೆನ್ಷನ್‌ನಲ್ಲಿ ಈಕೆ ಕ್ಯಾಡ್‌ಬರಿ ಪೀಸ್‌ ಕಚ್ಚುತ್ತಾಳೆ. ನಂತರ ಆತ ಸೆಂಚುರಿ ಬಾರಿಸಿದಾಗ ಈಕೆ ಕ್ರಿಕೆಟ್ ಮೈದಾನಕ್ಕೇ ಜಿಗಿದು ಡ್ಯಾನ್ಸ್‌ ಮಾಡುತ್ತಾ ಓಡುತ್ತಾಳೆ. ಕೈಯಲ್ಲಿ ಚಾಕೊಲೇಟ್ ಬಾರ್. ಸ್ಕ್ರೀನ್‌ ಮೇಲೆ ದೊಡ್ಡ ಚಾಕಲೇಟ್‌ ಬಾರ್‌ ಮತ್ತು ಐಕಾನಿಕ್ ಸಾಲು ಕಾಣಿಸಿಕೊಳ್ಳುತ್ತದೆ: "ಅಸ್ಲಿ ಸ್ವಾದ್ ಜಿಂದಗಿ ಕಾ."  

ಶಿಮೋನಾ ರಾಶಿ ಜನರ ಹೃದಯ ಕದ್ದಳು

ಈ ಜಾಹೀರಾತು ಸಿಕ್ಕಾಪಟ್ಟೆ ಜನಪ್ರಿಯವಾಯಿತು. ಕ್ಯಾಡ್ಬರಿ ಹುಡುಗಿ ಶಿಮೋನಾ ರಾಶಿ ಲಕ್ಷಾಂತರ ಜನರ ಹೃದಯ ಬಡಿತವಾದಳು, ನ್ಯಾಷನಲ್‌ ಕ್ರಶ್‌ ಆದಳು. ಆ ಹುಡುಗಿ ಪಾಂಡೆಗೆ ಸಿಕ್ಕಿದ್ದು ಹೇಗೆ?

1994ರಲ್ಲಿ ಕ್ಯಾಡ್ಬರಿ ಮಕ್ಕಳಿಗಾಗಿ ಮಾತ್ರವಲ್ಲದೆ, ಯುವಕರಿಗೂ ಬ್ರ್ಯಾಂಡ್ ಇಮೇಜ್ ಆಗಿ ತನ್ನ ಚಾಕಲೇಟು ಮೇಕ್ ಓವರ್ ಮಾಡುವ ಉದ್ದೇಶದಲ್ಲಿತ್ತು. ಆಗ ಪಿಯೂಷ್ ಪಾಂಡೆ ದೀಪಾವಳಿಯಂದು ಅಮೆರಿಕದಲ್ಲಿ ರಜೆಯಲ್ಲಿದ್ದರು. ಅವರ ಬಾಸ್ ಓಗಿಲ್ವಿಯಿಂದ ಕರೆ ಬಂತು. "ಚಾಕಲೇಟ್‌ ಯುವಕರಿಗೆ ಕೂಲ್‌ ಅನಿಸುವ" ಒಂದು ಜಾಹೀರಾತು ಜಾಹೀರಾತು ಮಾಡಬೇಕಿತ್ತು. ಪಾಂಡೆ ತಕ್ಷಣ ಮುಂಬೈಗೆ ಹೋಗಲು ವಿಮಾನ ಟಿಕೆಟ್ ಬುಕ್ ಮಾಡಿದರು. ಪ್ರಯಾಣದ ಸಮಯದಲ್ಲಿ, ತಮ್ಮ ಬೋರ್ಡಿಂಗ್ ಪಾಸ್‌ನ ಹಿಂಭಾಗದಲ್ಲಿ ಈ ಜಾಹಿರಾತಿನ ಟೆಕ್ಸ್ಟ್‌ ಬರೆದರು.

ಇದಕ್ಕೆ ಸಂಗೀತವನ್ನು ಜಾಝ್ ದಂತಕಥೆ ಲೂಯಿಸ್ ಬ್ಯಾಂಕ್ಸ್ ಸಂಯೋಜಿಸಿದರು, ಶಂಕರ್ ಮಹಾದೇವನ್ ಹಾಡಿದರು. ನಂತರ ಪಿಯೂಷ್ ಪಾಂಡೆ ಜಾಹೀರಾತಿಗೆ ಒಂದು ಮುಖವನ್ನು ಹುಡುಕುವತ್ತ ಗಮನಹರಿಸಿದರು. ಅವರಿಗೆ ಗ್ಲಾಮರಸ್ ಮಾಡೆಲ್ ಬೇಕಿರಲಿಲ್ಲ. "ಪಕ್ಕದ ಮನೆಯ ಹುಡುಗಿ"ಯಂತೆ ಇರಬೇಕಿತ್ತು. ಅಂತಿಮವಾಗಿ ಶಿಮೋನಾ ರಾಶಿಯನ್ನು ಕ್ಯಾಡ್ಬರಿ ಆಡ್‌ಗೆ ಆಯ್ಕೆ ಮಾಡಿದರು.

ರಾಶಿ ತರಬೇತಿ ಪಡೆದ ಡ್ಯಾನ್ಸರ್‌ ಆಗಿರಲಿಲ್ಲ. ಅವಳನ್ನು ನೃತ್ಯ ಶೈಲಿಯನ್ನು ಕಚ್ಚಾ ಆಗಿಸಿದರು. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಜಾಹೀರಾತು ಚಿತ್ರೀಕರಿಸಲಾಯಿತು. ಶಿಮೋನಾ ರಾಶಿ ನಟಿಸಿದ ಈ ಐಕಾನಿಕ್ ಜಾಹೀರಾತನ್ನು ಯಾವುದೇ ರೀಟೇಕ್ ಅಥವಾ ರಿಹರ್ಸಲ್ ಇಲ್ಲದೆ ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಲಾಯಿತು!

 

 

ಆ ಇಡೀ ಜಾಹೀರಾತು ಮುಂದೆ ಕ್ಯಾಡ್‌ಬರಿಯನ್ನು ಭಾರತದ ಜನ ಸೇವಿಸುವ ರೀತಿಯನ್ನೇ ಬದಲಾಯಿಸಿತು. ಅಲ್ಲಿಂದಾಚೆಗೆ ಕ್ಯಾಡ್‌ಬರಿ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು, ದೊಡ್ಡವರೆನ್ನದೆ ಎಲ್ಲರಿಗೆ ಪ್ರಿಯವಾಯಿತು. ಅದರಲ್ಲಿ ಈ ವೈರಲ್‌ ಜಾಹೀರಾತು, ಅದರಲ್ಲಿ ಕಾಣಿಸಿಕೊಂಡ ಕ್ಯಾಡ್‌ಬರಿ ಗರ್ಲ್‌ ಪಾತ್ರವೂ ದೊಡ್ಡದಿತ್ತು. ಮುಂದೆ ಆಕೆ ಕೆಲವು ಜಾಹಿರಾತಿನಲ್ಲಿ ಕಾಣಿಸಿಕೊಂಡರೂ ಯಾವುದೂ ಕ್ಯಾಡ್‌ಬರಿಯಷ್ಟು ಹಿಟ್‌ ಆಗಲಿಲ್ಲ. ಮುಂದೆ ಆಕೆ ಮಾಡೆಲಿಂಗ್‌ನಿಂದ ಹಿಂದೆ ಸರಿದಳು. ಮೊನ್ನೆ ಪಿಯೂಷ್‌ ಪಾಂಡೆ ತೀರಿಕೊಂಡಾಗ ಈಕೆ ಭಾರವಾದ ಹೃದಯದ ಪ್ರತಿಕ್ರಿಯೆಯನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಹಾಕಿದ್ದರು.



 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?