
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ರಾತ್ರಿ ಬಾತ್‌ರೂಮ್ ಏರಿಯಾ ಮುಂದೆ ಡ್ಯಾನ್ಸ್ ಮಾಡಿದರು ಎಂದು ಜಾಹ್ನವಿ, ಅಶ್ವಿನಿ ಗೌಡ ಅವರು ನಾಗವಲ್ಲಿ, ರಾರಾ ಎಂದು ಹಾಡು ಹೇಳಿ ಕುಣಿದಳು ಎಂದು ಎಲ್ಲರ ಮುಂದೆ ಹೇಳಿದ್ದರು. ಅಷ್ಟೇ ಅಲ್ಲದೆ ಅವರೇ ಕಾಲ್ಗೆಜ್ಜೆ ಸೌಂಡ್ ಮಾಡಿ ರಕ್ಷಿತಾ ಗೆಜ್ಜೆ ಕಟ್ಟಿ ಕುಣಿದಳು ಎಂದು ಬಿಂಬಿಸಿದರು. ಇದು ರಕ್ಷಿತಾ ಮನಸ್ಸಿಗೆ ಬೇಸರ ತಂದಿತ್ತು. ಅದಾದ ನಂತರದಲ್ಲಿ ಜಾಹ್ನವಿಯನ್ನು ರಕ್ಷಿತಾ ಶೆಟ್ಟಿ ಅವರು ಎಲಿಮಿನೇಶನ್‌ಗೆ ನಾಮಿನೇಟ್ ಮಾಡಿದ್ದರು.
ಜಾಹ್ನವಿ ಅವರು ರಕ್ಷಿತಾರನ್ನು ಎಲಿಮಿನೇಟ್ ಮಾಡಲು ನಾಮಿನೇಟ್ ಮಾಡಿದ್ದರು. ಆಮೇಲೆ ರಕ್ಷಿತಾ ಅವರು ಎಲಿಮಿನೇಶನ್‌ಗೆ ನಾಮಿನೇಟ್ ಮಾಡಿದ್ದರು. ಎಲಿಮಿನೇಶನ್ ಮಾಡುವಾಗ ರಕ್ಷಿತಾ ಮಧ್ಯೆ ಮಾತನಾಡಿದ್ದು ಜಾಹ್ನವಿಯನ್ನು ಕೆರಳಿಸಿತ್ತು. ಹೀಗಾಗಿ ಬೆಡ್ ರೂಮ್ ಏರಿಯಾದಲ್ಲಿ ಅಶ್ವಿನಿ ಗೌಡ, ಜಾಹ್ನವಿ, ರಕ್ಷಿತಾ ಶೆಟ್ಟಿ ನಡುವೆ ಜಗಳ ಆಗಿದೆ.
“ಯಾರೋ ನಾಮಿನೇಟ್ ಮಾಡ್ತಾರೆ ಅಂತ ನಾನು ಮಾಡೋಕೆ ಚೈಲ್ಡ್ ಅಲ್ಲ. ನಿನಗೆ ನಾಮಿನೇಟ್ ಮಾಡಲು ಸರಿಯಾಗಿ ಮಾತನಾಡಲು ಬರಲಿಲ್ಲ. ನಿನ್ನ ಹಾಗೆ ನಾನು ಚೈಲ್ಡ್ ಅಲ್ಲ. ಭಾಷೆ ವಿಭಿನ್ನವಾಗಿದೆ, ಬರೆದುಕೊಡ್ತೀವಿ ಅಂತ ಅಂದ್ರೂ ಪ್ರೆಸ್‌ಮೀಟ್‌ನಲ್ಲಿ ಮಾತನಾಡಲಿಲ್ಲ, ನೀನು ಇಲ್ಲಿ ಪಾರ್ಟಿ ಮಾಡೋಕೆ ಬಂದಿಲ್ಲ. ಇಲ್ಲಿ ಪರ್ಫಾರ್ಮ್ ಮಾಡೋಕೆ ಬರಲಿಲ್ಲ. ಒಂದು ಪಾತ್ರೆ ತೊಳೆಯೋದಿಲ್ಲ, ಎಲ್ಲರ ಜೊತೆ ಹೋಗಿ ಮಾತನಾಡೋಕೆ ಆಗತ್ತೆ” ಎಂದು ಜಾಹ್ನವಿ ಅವರು ರಕ್ಷಿತಾ ವಿರುದ್ಧ ಆರೋಪ ಮಾಡಿದ್ದರು.
“ನೀವು ನಿಜವಾದ ನಾಗವಲ್ಲಿ, ಬೆನ್ನಿಗೆ ಚೂರಿ ಹಾಕ್ತೀರಾ. ನೀವು ಚೈಲ್ಡ್. ಕಾಲ್ಗೆಜ್ಜೆ ಸೌಂಡ್ ಮಾಡಿ ನನಗೆ ನಾಗವಲ್ಲಿ ಅಂತ ಹೇಳಿದ್ರಿ. ಫೇರ್ ಆಟ ಆಡಿ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ಅಶ್ವಿನಿ ಗೌಡ ಅವರು ಮಧ್ಯೆ ಜಗಳಕ್ಕೆ ಬಂದು, “ಮುಚ್ಕೊಂಡು ಮಲಗು, ನಿನ್ನ ಡ್ರಾಮಾವನ್ನು ಬಾತ್‌ರೂಮ್‌ನಲ್ಲಿ ಮಾಡು, ಎಷ್ಟು ಮಾತಾಡ್ತೀಯಾ. ನಿನ್ನ ನೋಡಿದ್ರೆ ಎಲ್ಲಿಂದ ಬಂದಿದ್ದೀಯಾ ಅಂತ ಗೊತ್ತಾಗತ್ತೆ. ನಿನ್ನ ಬ್ಯಾಗ್ ಇಟ್ಟುಕೋ, ಹನ್ನೆರಡು ಗಂಟೆ ರಾತ್ರಿ ಬಾತ್‌ರೂಮ್‌ನಲ್ಲಿ ತಕಧಿಮಿತ ಮಾಡ್ತೀಯಾ, ಎಷ್ಟು ಸಲ ಟಾಯ್ಲೆಟ್ ಹೋಗ್ತೀಯಾ?” ಎಂದು ಸಿಟ್ಟಾಗಿದ್ದಾರೆ.
ರಕ್ಷಿತಾ ಶೆಟ್ಟಿ ಅವರು, “ನೀವು ಜೀವನಪೂರ್ತಿ ನಾಟಕ ಮಾಡಿಕೊಂಡು ಬಂದಿದ್ದೀರಿ. ನಾನು ಎಷ್ಟು ಸಲ ಬೇಕಿದ್ರೂ ಟಾಯ್ಲೆಟ್‌ಗೆ ಹೋಗ್ತೀನಿ, ಅದು ನನ್ನ ಇಷ್ಟ. ನನ್ನ ಬಟ್ಟೆ ಹೀಗೆ ಇರುತ್ತದೆ. ನೀವು ಕಾಲ್ಗೆಜ್ಜೆ ಸೌಂಡ್ ಮಾಡಿದ್ರೆ ಯಾರಿಗೂ ತೊಂದರೆ ಆಗಿಲ್ವಾ? ನಾಟಕ, ಕಪಟ ಎಲ್ಲವನ್ನು ನಿಮ್ಮಿಂದಲೇ ಕಲಿಯಬೇಕು. ನೀವು ದೊಡ್ಡವರು ಅಂತ ನಾನು ಏನು ಮಾಡಬೇಕು ಎಂದು ನನಗೆ ಹೇಳಬೇಡಿ. ನೀವು ರಾತ್ರಿ ಮೂರು ಗಂಟೆಗೆ ಮಾತಾಡಿದ್ರೆ ಬೇರೆಯವರಿಗೆ ಸಮಸ್ಯೆ ಆಗಲ್ವಾ? ನಿಮ್ಮನ್ನು ನೋಡೋಕೆ ನಾಚಿಕೆ ಆಗುತ್ತದೆ” ಎಂದು ತಿರುಗಿ ಉತ್ತರ ಕೊಟ್ಟಿದ್ದಾರೆ.
ಈ ಜಗಳ ನಿಂತಿಲ್ಲ. ಹಾಗೆಯೇ ಮುಂದುವರೆದಿದೆ. ಆಮೇಲೆ ಹೊರಗಡೆ ಹೋಗಿ ಮಲಗು ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ಆಗ ರಕ್ಷಿತಾ ಶೆಟ್ಟಿ ಅವರು ಲಿವಿಂಗ್ ಏರಿಯಾಗೆ ಬಂದು ಮಲಗಿದ್ದಾರೆ. ರಕ್ಷಿತಾ ಶೆಟ್ಟಿ ಏಕಾಂಗಿಯಾಗಿ ಮಲಗಿದ್ದು ನೋಡಿ ಗಿಲ್ಲಿ ನಟ, ಚಂದ್ರಪ್ರಭ, ಮಲ್ಲಮ್ಮ ಅವರು “ಒಬ್ಬಳೇ ಮಲಗಬಾರದು, ನಮ್ಮ ಜೊತೆ ಬಾ” ಎಂದು ಹೇಳಿದ್ದಾರೆ. “ನನಗೆ ಪ್ರೈವೆಸಿ ಬೇಕು, ನನಗೆ ಒಬ್ಬಳೇ ಮಲಗಿ ರೂಢಿ ಇದೆ” ಎಂದಿದ್ದಾರೆ.
ರಕ್ಷಿತಾ ಅವರು ಬೆಳಗ್ಗಿನ ಜಾವ ಪಾತ್ರೆ ತೊಳೆದಿದ್ದಾರೆ. “ನಮಗೋಸ್ಕರ ನಾವು ಮಾತನಾಡಬೇಕು, ನಮಗಾಗಿ ಯಾರೂ ಮಾತನಾಡಲ್ಲ, ಬೇರೆಯವರು ನಮಗಾಗಿ ಮಾತನಾಡಬೇಕು ಎಂದು ನಿರೀಕ್ಷೆ ಮಾಡಬಾರದು. ಯಾರೂ ಇಲ್ಲ ಅಂದ್ರೂ ನಾವು ನಮ್ಮ ಜೊತೆ ಇರಬೇಕು. ನನ್ನನ್ನು ನಾನು ಬಿಟ್ಟುಕೊಡೋದಿಲ್ಲ” ಎಂದು ರಕ್ಷಿತಾ ಅವರು ಕ್ಯಾಮರಾ ಮುಂದೆ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.