
ಯುಟ್ಯೂಬರ್ ವೀಕ್ಷಿತಾ ದೀಪಕ್ ಗೌಡ ಅವರು ಮದುವೆಯಾಗಿ ಐದು ವರ್ಷದ ಬಳಿಕ ಬೆಂಗಳೂರಿನಲ್ಲಿ 5BHK ಮನೆ ಖರೀದಿ ಮಾಡಿದ್ದಾರೆ. ಈಗಾಗಲೇ ಮನೆಗೆ ಸಂಬಂಧಪಟ್ಟ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 1 ಬೆಡ್ ರೂಮ್ ಇದ್ದರೆ ಸಾಕು ಅಂತ ಅಂದುಕೊಳ್ಳುತ್ತಿದ್ದ ವೀಕ್ಷಿತಾ ದೀಪಕ್ ಗೌಡ ಅವರು 5 ಬೆಡ್ ರೂಮ್ ಇರುವ ಪ್ಲಾಟ್‌ನ್ನು ಖರೀದಿ ಮಾಡಿದ್ದಾರೆ. ಮದುವೆಗೂ ಮುನ್ನ ತವರು ಮನೆಯಲ್ಲಿ ವಾಸ ಮಾಡುತ್ತಿದ್ದ ವೀಕ್ಷಿತಾ ದೀಪಕ್ ಗೌಡ ಅವರು ಮದುವೆಯಾದಮೇಲೆ ಬೆಂಗಳೂರಿನಲ್ಲಿ ತಿಂಗಳಿಗೆ 40000 ರೂಪಾಯಿ ಬಾಡಿಗೆ ಕೊಟ್ಟು ಇದ್ದರು. ತಂದೆ-ತಾಯಿ ಸ್ವಂತ ಮನೆ ಮಾಡಿಕೊಳ್ಳುವ ಟೈಮ್‌ನಲ್ಲಿ ವೀಕ್ಷಿತಾಗೆ ಮದುವೆಯಾಗಿತ್ತು.
ಡಾಕ್ಟರ್ ಆದಬಳಿಕವೂ ದೀಪಕ್ ಗೌಡ ಅವರು ಮನೆ ತಗೊಂಡಿಲ್ವಾ ಎಂಬ ಪ್ರಶ್ನೆಗಳು ಕೇಳಿಬರುತ್ತಿತ್ತು. ಆದರೂ ಕೂಡ ವೀಕ್ಷಿತಾ ಮಾತ್ರ ತುಂಬ ಟೈಮ್ ತಗೊಂಡು ಮನೆ ಮಾಡಿದ್ದಾರೆ. “ನಿನ್ನ ಗಂಡ ಡಾಕ್ಟರ್ ಆದರೂ ಮನೆ ಇಲ್ವಾ? ನೀನು ಯುಟ್ಯೂಬ್‌ನಿಂದ ದುಡಿಯುತ್ತಿದ್ದೀಯಾ? ನೀವು ದುಡಿದ ಹಣವನ್ನು ಏನು ಮಾಡುತ್ತೀರಿ? ಇಬ್ಬರು ಯಾಕೆ ದುಡ್ಡು ಅಷ್ಟು ಖರ್ಚು ಮಾಡ್ತೀರಿ? ಹೀಗೆಲ್ಲ ಕಾಮೆಂಟ್ ಮಾಡುತ್ತಿದ್ದರು. ಆಗೆಲ್ಲ ಬೇಸರ ಆಗಿದ್ದುಂಟು. ಆದರೆ ಯಾವ ಸಮಯಕ್ಕೆ ಏನು ಆಗಬೇಕೋ ಅದು ಆಗಬೇಕು ಅಂತ ನಾವು ಸುಮ್ಮನಿದ್ದೆವು. ನಾವು ಬೇರೆಯವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮನೆ ಆಗಿಲ್ವಾ ಅಂತ ನಮ್ಮ ಜೊತೆ ಇರುವವರು ಪ್ರಶ್ನೆ ಮಾಡಿದಾಗ ಅವಮಾನ, ಮುಜುಗರ ಆಗಿದ್ದೂ ಇದೆ, ದಯವಿಟ್ಟು ಈ ಥರ ಪ್ರಶ್ನೆ ಕೇಳಬೇಡಿ” ಎಂದು ವೀಕ್ಷಿತಾ ದೀಪಕ್ ಗೌಡ ಹೇಳಿದ್ದಾರೆ.
“ಈಗಾಗಲೇ ಕಟ್ಟಿದ ಎರಡು ಪ್ಲಾಟ್‌ನ್ನು ನಾವು ತಗೊಂಡಿದ್ದೇವೆ. ಹೀಗಾಗಿ ಮನೆಯ ಗೋಡೆಯನ್ನು ಒಡೆದು ದೊಡ್ಡ ಮಾಡಿದ್ದೇವೆ. ಇನ್ನೊಂದಿಷ್ಟು ಇಂಟಿರಿಯರ್ ಡಿಸೈನ್ ಮಾಡಿಸಬೇಕಿದೆ. ಬಜೆಟ್‌ಗೆ ತಕ್ಕಂತೆ ನಾವು ಡಿಸೈನ್ ಮಾಡ್ತೀವಿ. ಒಪನ್ ಕಿಚನ್ ಕೂಡ ಇದೆ. ಈ ಮನೆಯಲ್ಲಿ ಪಾಸಿಟಿವ್ ಫೀಲ್ ಆಗತ್ತೆ. ಒಂದು ವರ್ಷದಿಂದ ನಾವು ಮನೆ ಹುಡುಕಾಟದಲ್ಲಿದ್ದೆವು, ನಾಲ್ಕು ಕೋಟಿ ರೂಪಾಯಿ ಬೇಕಿತ್ತು. ಈಗ ಆಗೋದಿಲ್ಲ ಅಂಥ ನಾಲ್ಕು ವರ್ಷ ಬಿಟ್ಟು ತಗೋಳೋಣ ಅಂತ ಅಂದುಕೊಂಡಿದ್ದೆವು. ಆಮೇಲೆ ಸಾಲ, ನಮ್ಮ ಆದಾಯವನ್ನು ನೋಡಿಕೊಂಡು ಮನೆ ತಗೊಂಡೆವು” ಎಂದು ವೀಕ್ಷಿತಾ ದೀಪಕ್ ಗೌಡ ಹೇಳಿದ್ದಾರೆ.
ವೀಕ್ಷಿತಾ ಅವರು ದೀಪಕ್ ಗೌಡ ಎನ್ನುವ ಡಾಕ್ಟರ್‌ನ್ನು ಮದುವೆಯಾಗಿದ್ದಾರೆ. ದುಡ್ಡಿಗೋಸ್ಕರ ಡಾಕ್ಟರ್‌ನ್ನು ಮದುವೆಯಾದರು ಎಂದು ಅವರಿಗೆ ಟೀಕೆ ಮಾಡಲಾಗಿತ್ತು. ಒಟ್ಟಿನಲ್ಲಿ ವೀಕ್ಷಿತಾ ತುಂಬ ಟೀಕೆಗಳನ್ನು ಅನುಭವಿಸಿದ್ದರು. ಈಗ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಷಯವನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.