BBK 12: ಡ್ರೋನ್‌ ಪ್ರತಾಪ್‌, ಒಳ್ಳೆ ಹುಡ್ಗ ಪ್ರಥಮ್‌ ಬರೆದ ದಾಖಲೆಗೆ ರಕ್ಷಿತಾ ಶೆಟ್ಟಿ ಸೇರೋದ್ರಲ್ಲಿ ಡೌಟ್‌ ಇಲ್ಲ!

Published : Oct 18, 2025, 06:00 AM IST
rakshitha shetty Bigg Boss

ಸಾರಾಂಶ

Bigg Boss Kannada 12: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಭಾರೀ ಸದ್ದು ಮಾಡುತ್ತಿದ್ದಾರೆ. ಈ ಹಿಂದಿನ ಸೀಸನ್‌ಗಳಲ್ಲಿ ಹೊರಗಡೆಯಿಂದ ನೆಗೆಟಿವಿಟಿ ಇಟ್ಕೊಂಡು ಒಳಗಡೆ ಬಂದ ಇಬ್ಬರು ಪಾಸಿಟಿವ್‌ ಪ್ರತಿಕ್ರಿಯೆ ಪಡೆದು ಹೊರಬಂದಿದ್ದರು. ಈಗ ಲಿಸ್ಟ್‌ಗೆ ರಕ್ಷಿತಾ ಶೆಟ್ಟಿ ಸೇರುತ್ತಾರಾ? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ಬಾರಿ ತುಳು ನಾಡಿನ ರಕ್ಷಿತಾ ಶೆಟ್ಟಿ ದೊಡ್ಡ ಮಟ್ಟದ ಸೌಂಡ್‌ ಮಾಡುತ್ತಿದ್ದಾರೆ. ಮುಂಬೈನಲ್ಲಿ ಬೆಳೆದ ರಕ್ಷಿತಾಗೆ ಹಿಂದಿ, ಇಂಗ್ಲಿಷ್‌ ಭಾಷೆ ಬಳಸಿದ್ದೇ ಜಾಸ್ತಿ. ಈಗ ದೊಡ್ಮನೆಯಲ್ಲಿ ಅವರು ಕನ್ನಡವನ್ನು ಜಾಸ್ತಿ ಬಳಸಲು ಪ್ರಯತ್ನಪಡುತ್ತಿದ್ದಾರೆ. ಆದರೆ ಸ್ಪರ್ಧಿಗಳಿಗೆ ಇವರೇ ವಿಲನ್‌ ಆದಂತಿದೆ. ನೆಗೆಟಿವಿಟಿ ಇಟ್ಕೊಂಡು, ಒಳಗಡೆ ಬಂದಂತಹ ಸ್ಪರ್ಧಿಗಳಿಬ್ಬರು ಪಾಸಿಟಿವ್‌ ಆಗಿ ಹೊರಗಡೆ ಹೋದ ಉದಾಹರಣೆ ಈಗಾಗಲೇ ಇವೆ. ಅವರ ಸಾಲಿಗೆ ರಕ್ಷಿತಾ ಕೂಡ ಸೇರಿಕೊಳ್ಳಲಿದ್ದಾರೆ.

ರಕ್ಷಿತಾ ಶೆಟ್ಟಿ ವಿರುದ್ಧ ಆರೋಪ

ಅಶ್ವಿನಿ ಗೌಡ, ಜಾಹ್ನವಿ ಅವರು ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಬಾತ್‌ರೂಮ್‌ ಮುಂದೆ ರಕ್ಷಿತಾ ಅವರು ಡ್ಯಾನ್ಸ್‌ ಮಾಡಿದರು, ನಾಗವಲ್ಲಿ ಎಂದು ರಕ್ಷಿತಾ ವಿರುದ್ಧ ಜಾಹ್ನವಿ, ಅಶ್ವಿನಿ ಗೌಡ ಅವರು ಆರೋಪ ಮಾಡಿದ್ದರು. ಇನ್ನು ಕಾಕ್ರೋಚ್‌ ಸುಧಿಗೂ ರಕ್ಷಿತಾ ಕೂಡ ಆಗಿ ಬರೋದಿಲ್ಲ.

ರಕ್ಷಿತಾ ಶೆಟ್ಟಿ ಟ್ರೋಲ್‌ ಆಗಿದ್ರು!

ರಕ್ಷಿತಾ ಅವರು ಈ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಅಡುಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಇಂಗ್ಲಿಷ್‌, ಹಿಂದಿ, ತುಳು, ಕನ್ನಡ ಪದ ಬಳಸಿ ಇವರು ಮಾತನಾಡೋದು ಸಿಕ್ಕಾಪಟ್ಟೆ ಟ್ರೋಲ್‌ ಆಗಿತ್ತು. ಇನ್ನು ಇವರ ಡ್ರೆಸ್ಸಿಂಗ್‌ ಸೆನ್ಸ್‌ ಬಗ್ಗೆ ಕೂಡ ಆರೋಪ ಕೇಳಿ ಬಂದಿತ್ತು. ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಗೆ ಹೋಗುವಾಗ ನೆಗೆಟಿವಿಟಿ ಇಟ್ಕೊಂಡು ಅವರು ಒಳಗಡೆ ಬಂದಿದ್ದರು.

ಡ್ರೋನ್‌ ಪ್ರತಾಪ್‌ ವಿರೋಧಿಸಿದ್ದು ನೆನಪಿದ್ಯಾ?

ಬಿಗ್‌ ಬಾಸ್‌ ಮನೆಗೆ ಬರುವಾಗ ನೆಗೆಟಿವಿಟಿ ಇಟ್ಕೊಂಡು ಬಂದು, ಹೊರಗಡೆ ಹೋಗುವಾಗ ಪಾಸಿಟಿವ್‌ ವ್ಯಕ್ತಿಯಾಗಿ ಹೋದ ಸ್ಪರ್ಧಿ ಡ್ರೋನ್‌ ಪ್ರತಾಪ್.‌ ಡ್ರೋನ್‌ ವಿಚಾರದಲ್ಲಿ ಪ್ರತಾಪ್‌ ಹೇಳಿದ್ದ ಸುಳ್ಳುಗಳು ಸಿಕ್ಕಾಪಟ್ಟೆ ವೈರಲ್‌ ಆಗಿದ್ದವು. ಅದಾದ ಬಳಿಕ ಅವರಿಗೆ ಬಿಗ್‌ ಬಾಸ್‌ ಮನೆಯಲ್ಲಿ ಕೂಡ ಎಲ್ಲರೂ ವಿರೋಧ ಮಾಡಿದ್ದರು. ಪ್ರತಾಪ್‌ ಒಂದು ಕಡೆಯಾದರೆ, ಉಳಿದ ಸ್ಪರ್ಧಿಗಳು ಇನ್ನೊಂದು ಕಡೆಯಾಗಿದ್ದರು. ಪ್ರತಾಪ್‌ ವಿರುದ್ಧ ಹೋದವರನ್ನು ಕೆಲ ವೀಕ್ಷಕರು ಕೂಡ ಇಷ್ಟಪಡದೇ ಇದ್ದಿದ್ದುಂಟು. ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಗೆ ಬಂದು ಹೋದಬಳಿಕ ಪ್ರತಾಪ್‌ ಅವರನ್ನು ವೀಕ್ಷಕರು ನೋಡುವ ರೀತಿ ಬೇರೆಯೆ ಆಗಿದೆ.

ಒಳ್ಳೆ ಹುಡುಗ ಪ್ರಥಮ್‌ಗೆ ವಿರೋಧ ಇತ್ತು

ಬಿಗ್‌ ಬಾಸ್‌ ಕನ್ನಡ ಸೀಸನ್‌ 4 ಶೋನಲ್ಲಿ ಪ್ರಥಮ್‌ ಅವರು ಪ್ರತಿ ವಾರ ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದರು. ಎಲ್ಲರೂ ಪ್ರಥಮ್‌ರಿಂದ ಕಿರಿಕಿರಿ ಅನುಭವಿಸಿ, ಈ ವಾರವಾದರೂ ಅವರು ಎಲಿಮಿನೇಟ್‌ ಆಗಲಿ ಅಂಥ ಬಯಸಿದ್ದುಂಟು. ಆದರೆ ಪ್ರಥಮ್‌ ಪ್ರೇಕ್ಷಕರ ಮನಸ್ಸು ಗೆದ್ದು ಟ್ರೋಫಿ ಪಡೆದರು.

ಈಗ ರಕ್ಷಿತಾ ಅದೇ ಹಾದಿ ಹಿಡಿಯುತ್ತಾರಾ?

ಪ್ರಥಮ್‌ ಹಾಗೂ ಡ್ರೋನ್‌ ಪ್ರತಾಪ್‌ ಅವರು ನೆಗೆಟಿವಿ ಇಟ್ಕೊಂಡು, ಹೊರಗಡೆ ಬರುವಷ್ಟರಲ್ಲಿ ವೀಕ್ಷಕರ ಪ್ರೀತಿ ಪಡೆದರು. ಅದರಂತೆ ರಕ್ಷಿತಾ ಶೆಟ್ಟಿ ಸಿಕ್ಕಾಪಟ್ಟೆ ಪ್ರಯತ್ನಪಟ್ಟು, ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಇದು ವೀಕ್ಷಕರಿಗೆ ಇಷ್ಟ ಆಗಿದೆ. ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿರುವ ರಕ್ಷಿತಾ ಈ ಬಾರಿ ಟ್ರೋಫಿ ಗೆದ್ದರೂ ಕೂಡ ಆಶ್ಚರ್ಯವಿಲ್ಲ.

ಮೂವರು ಮನೆಯಿಂದ ಹೊರಕ್ಕೆ

ಆರ್‌ಜೆ ಅಮಿತ್‌, ಕರಿಬಸಪ್ಪ ಹಾಗೂ ಸತೀಶ್‌ ಕ್ಯಾಡಬಮ್ಸ್‌ ಕೂಡ ಎಲಿಮಿನೇಟ್‌ ಆಗಿದ್ದಾರೆ. ಅಶ್ವಿನಿ ಗೌಡ, ಕಾಕ್ರೋಚ್‌ ಸುಧಿ, ರಾಶಿಕಾ ಶೆಟ್ಟಿ, ಮಾಳು ನಿಪನಾಳ ಅವರು ಮೊದಲ ಫಿನಾಲೆಗೆ ಫೈನಲಿಸ್ಟ್‌ ಆಗಿದ್ದಾರೆ. ಉಳಿದವರು ನಾಮಿನೇಟ್‌ ಆಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!