
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ( Bigg Boss Kannada Season 12) ಈ ವಾರ ನಾಮಿನೇಶನ್ ಟಾಸ್ಕ್ ನಡೆದಿದೆ. ಆ ವೇಳೆ ಸೂರಜ್ ಅವರು ರಜತ್‌ಗೆ ನಾಮಿನೇಟ್ ಮಾಡಿದರು. ಆ ಬಳಿಕ ರಜತ್ ಅವರು ಸ್ಪಷ್ಟನೆ ನೀಡಿರೋದು ದೊಡ್ಡ ಮಟ್ಟದ ಚರ್ಚೆಯಾಗಿದೆ.
“ಕಿಚನ್ ಡಿಪಾರ್ಟ್‌ಮೆಂಟ್ ಹಾಗೂ ರಜತ್ ನಡುವೆ ಜಗಳ ಆದಾಗ ನೀವು ಎಂಟ್ರಿ ಕೊಟ್ಟಿರಿ. ಇದು ನನಗೆ ಇಷ್ಟ ಆಗಲಿಲ್ಲ” ಎಂದು ಸೂರಜ್ ಹೇಳಿದ್ದಾರೆ.
“ನನಗೆ ಚಾನ್ಸ್ ಇದ್ದಾಗ ಏನು ಆಟ ಆಡಬೇಕೋ ಅದನ್ನು ಆಡಿದ್ದೀನಿ. ಒಳಗಡೆ ಎಲ್ಲರೂ ಜಗಳ ಆಡುತ್ತಿದ್ದಾಗ, ನಾನು ಸುಮ್ಮನೆ ಕೂತುಕೊಂಡಿರಲಿಲ್ಲ. ಇದು ನನ್ನ ಮನೆ, ನನಗೆ ಅಧಿಕಾರ ಇದೆ, ನನಗೆ ಗೊತ್ತಿರೋರಿಗೆ ಹೇಳುತ್ತಿದ್ದರು, ಆಗ ನಾನು ಮಾತನಾಡಿದೆ. ಹುಡುಗಿ ಜೊತೆ ರೊಮ್ಯಾನ್ಸ್ ಮಾಡಿಕೊಂಡು ಇರಲಿಲ್ಲ” ಎಂದು ರಜತ್ ಹೇಳಿದ್ದಾರೆ.
ರಾಶಿಕಾ ಶೆಟ್ಟಿ ಅವರು, ನನ್ನ ಹೆಸರು ತಗೋಬೇಡಿ, ನಿಮ್ಮ ಹಾಗೂ ರಜತ್ ಚರ್ಚೆ ನಡೆಯಬೇಕಿದ್ರೆ ನನ್ನ ಹೆಸರು ತಗೋಬೇಡಿ. ನಿಮ್ಮ ಮೇಲಿರುವ ಗೌರವವನ್ನು ಕಳೆದುಕೊಳ್ಳಬೇಡಿ. ಆ ಪದವನ್ನು ಬಳಸಬೇಡಿ.
“ಇರೋದನ್ನು ನಾನು ಹೇಳುತ್ತಿದ್ದೀನಿ. ಊರು ಸ್ಟೋರಿ, ಲವ್ ಸ್ಟೋರಿ, ಹೇಟ್ ಸ್ಟೋರಿ ನಾನು ಹೇಳುತ್ತಿದ್ದೆನಾ? ಯಾರು ಯಾರಿಗೆ ಬೇಕಿದ್ರೆ ಜಗಳ ಆಗಲಿ, ನನಗೆ ಬೇಕು ಅಂದರೆ ಮಾತಾಡ್ತೀನಿ” ಎಂದು ರಜತ್ ಅವರು ಹೇಳಿದ್ದಾರೆ.
ರಜತ್ ಅವರು ರೊಮ್ಯಾನ್ಸ್ ಎಂದು ಹೆಸರು ಹೇಳಿರಲಿಲ್ಲ. ಆದರೆ ರಾಶಿಕಾ ಅವರೇ ಮಧ್ಯ ಪ್ರವೇಶ ಮಾಡಿ, ನನ್ನ ಹೆಸರು ತಗೋಬೇಡಿ ಎಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬೇರೆ ಹುಡುಗಿಯರು ಇದ್ದರು, ಆದರೆ ಅವರು ಯಾರೂ ಕೂಡ ಏನೂ ಹೇಳಿರಲಿಲ್ಲ. ಸೂರಜ್ ಹಾಗೂ ರಾಶಿಕಾ ಶೆಟ್ಟಿಯ ಸ್ನೇಹವೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ.
ರಜತ್ ಅವರು ರಾಶಿಕಾ ಬಳಿ ಈ ಬಗ್ಗೆ ಮಾತನಾಡಿದ್ದು, ಕ್ಷಮೆ ಕೂಡ ಕೇಳಿದ್ದಾರೆ. “ನಾನು ಒಂದು ಹುಡುಗಿ ಇದ್ದಾಳೆ ಎನ್ನೋದನ್ನು ನೆನಪಿನಲ್ಲಿ ಇಟ್ಟುಕೊಂಡು ಮಾತನಾಡಬೇಕಿತ್ತು. ಕಿಚನ್ ಏರಿಯಾದಲ್ಲಿ ನಡೆದ ವಿಷಯವನ್ನು ತೆಗೆಯಬೇಡ ಎಂದು ಸೂರಜ್‌ಗೆ ನಾಲ್ಕು ದಿನದ ಹಿಂದೆ ಹೇಳಿದ್ದೆ. ಕಿಚನ್‌ನಲ್ಲಿ ನಾವು ಕೂಡ ಮಾಡಿಸಿಕೊಂಡು ತಿಂದಿದ್ದೆವು. ಹೀಗಾಗಿ ನಾನು ಅಲ್ಲಿ ಮಾತನಾಡಿದ್ದೆ. ಲವ್, ಹೇಟ್ ಸ್ಟೋರಿ ಎಂದು ನೀವು ಮಾತನಾಡಿಕೊಳ್ಳುತ್ತಿದ್ದಿರಿ, ಅದರ ಬಗ್ಗೆ ನಾನು ಮಾತನಾಡಬೇಕಿತ್ತು, ನಾನು ಅದನ್ನು ಹೇಳೋ ಉದ್ದೇಶ ಹೊಂದಿದ್ದೆ. ಆದರೆ ಬಾಯಿ ತಪ್ಪಿ ರೊಮ್ಯಾನ್ಸ್ ಎಂದೆ. ರೊಮ್ಯಾನ್ಸ್ ಎಂದು ಹೇಳುವ ಉದ್ದೇಶ ನನಗೆ ಇರಲಿಲ್ಲ” ಎಂದು ಹೇಳಿದ್ದಾರೆ.
“ಜಗಳ ಆಡಿರೋದು, ಬಿಟ್ಟಿರೋದು ನಿಮಗೆ ಬಿಟ್ಟಿದ್ದು. ನಿಮ್ಮ ಜಗಳದಲ್ಲಿ ನನ್ನ ಹೆಸರು ತಗೊಂಡಿದ್ದೀರಾ. ಇಷ್ಟು ಜನರು ಇದ್ದಾರೆ, ಹೊರಗಡೆ ವೀಕ್ಷಕರು ಇದ್ದಾರೆ. ಆಮೇಲೆ ನಾವು ಎಪಿಸೋಡ್ ಮಿಸ್ ಮಾಡಿಕೊಂಡಿದ್ದೀವಿ. ಏನಾದರೂ ಆಗಿರಬಹುದು ಎಂದು ವೀಕ್ಷಕರು ಅಂದುಕೊಂಡರೆ ಏನು ಮಾಡೋದು? ನಮಗೂ ಜೀವನ ಇದೆ, ಕುಟುಂಬ ಇದೆ, ಕರಿಯರ್ ಇದೆ” ಎಂದು ಹೇಳಿದ್ದಾರೆ.
“ನಿನ್ನ ಜೊತೆ ನನ್ನ ಒಳ್ಳೆಯ ಸ್ನೇಹ ಇದೆ. ಅದನ್ನು ನಾನು ಗೌರವಿಸುತ್ತೇನೆ. ನಾಳೆ ನಿನ್ನ ಜೊತೆಗೆ ನಾನು ಮಾತನಾಡ್ತೀನೊ ಇಲ್ಲವೋ ಗೊತ್ತಿಲ್ಲ. ನನ್ನ ಕುಟುಂಬದ ಬಗ್ಗೆ ಯೋಚನೆ ಇದೆ. ಫಿನಾಲೆಯಲ್ಲಿ ನಾನು, ನೀನು ಇರಬೇಕು, ನಾವು ಚೆನ್ನಾಗಿ ಆಡಬೇಕು” ಎಂದು ರಾಶಿಕಾ ಹೇಳಿದ್ದಾರೆ. “ಏನೇ ಇರಲಿ, ನಿನ್ನ ವಿಷಯ ಬಂದಾಗ ಯಾರೂ ಮಾತನಾಡಲೀ, ಬಿಡಲಿ ನಾನು ಮಾತನಾಡ್ತೀನಿ” ಎಂದು ಸೂರಜ್ ಹೇಳಿದ್ದಾರೆ.
“ಇಷ್ಟುದಿನಗಳ ಕಾಲ ಒಂದು ದಿನವೂ ಫ್ಲರ್ಟ್ ಮಾಡಿಲ್ಲ, ವೀಕೆಂಡ್ ಎಪಿಸೋಡ್‌ನಲ್ಲಿ ಚೆನ್ನಾಗಿ ಕಾಣಸ್ತೀಯಾ ಎಂದಿದ್ದೆ. ಅದೇ ಹೈಯೆಸ್ಟ್. ನಾನು ಅವಳ ಕೈ ಕೂಡ ಮುಟ್ಟಿಲ್ಲ” ಎಂದು ಸೂರಜ್ ಅವರು ಕಾವ್ಯ ಶೈವ, ಚೈತ್ರಾ ಕುಂದಾಪುರ ಬಳಿ ಚರ್ಚೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.