
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಹಿಂದೆ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ, ಜಾಹ್ನವಿ ಅವರು ಮಾತಿನ ದಾಳಿ ಮಾಡಿದಾಗ ಗಿಲ್ಲಿ ನಟ ಸ್ಟ್ಯಾಂಡ್ ತಗೊಂಡಿದ್ದರು. ಅದಕ್ಕೆ ಕಿಚ್ಚನ ಚಪ್ಪಾಳೆ ತಗೊಂಡಿದ್ದ ಗಿಲ್ಲಿ ನಟನಿಗೆ ಈಗ ಕಳಪೆ ಪಟ್ಟ ಸಿಕ್ಕಿದೆ.
ಗಿಲ್ಲಿ ನಟ ಹಾಗೂ ಕಾವ್ಯ ಶೈವ ಆಟದ ಬಗ್ಗೆ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಮಾತನಾಡಿಕೊಂಡಿದ್ದಾರೆ. “ಗಿಲ್ಲಿ ನಟ ಹೊರಗಡೆ ಹಾಗೆ, ಹೀಗೆ ಎಂದು ಇಲ್ಲಿಯವರೇ ಮಾತಾಡ್ತಾರೆ. ಕಾವ್ಯ ಶೈವ ಅವನಿಗೆ ಟ್ರಂಪ್ ಕಾರ್ಡ್. ಎಲ್ಲಿ ಫೂಟೇಜ್ ಸಿಗತ್ತೋ ಅಲ್ಲಿಗೆ ಬರ್ತಾನೆ. ಏನೂ ಮಾಡೋದಿಲ್ಲ, ಯಾವ ವಿಷಯಕ್ಕೂ ಸ್ಟ್ಯಾಂಡ್ ತಗೊಳೋದಿಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಕಾಕ್ರೋಚ್ ಸುಧಿ ಕೂಡ ಮಾತನಾಡಿ, “ಕಳಪೆ ಪಟ್ಟ ಸಿಗಬೇಕು ಎಂದು ಇಂದು ಆಟ ಹಾಳು ಮಾಡಿದ್ದಾನೆ, ಫೂಟೇಜ್ ಸಿಗತ್ತೆ” ಎಂದು ಹೇಳಿದ್ದಾರೆ. ಇದಕ್ಕೆ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಕೂಡ ಸಹಮತ ನೀಡಿದ್ದಾರೆ.
ಈ ವಾರದ ಕಳಪೆ ಯಾರು ಎಂದು ಪ್ರಶ್ನೆ ಬಂದಾಗ, ಕಾಕ್ರೋಚ್ ಸುಧಿ ಅವರು ಎರಡು ವಾರದಿಂದ ಎಲ್ಲಿಯೂ ಕಾಣಿಸ್ತಿಲ್ಲ, ಸೈಲೆಂಟ್ ಆಗಿದ್ದಾರೆ ಎಂದು ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಧನುಷ್ ಗೌಡ ಮುಂತಾದವರು ಹೇಳಿದ್ದಾರೆ. ಐದಕ್ಕೂ ಹೆಚ್ಚು ಮತಗಳು ಸಿಕ್ಕಿತ್ತು.
ಕಾಕ್ರೋಚ್ ಸುಧಿ ಅವರು ಕಳಪೆ ಎಂದು ಪಟ್ಟ ಸಿಗುತ್ತಿದೆ, ಹೆಚ್ಚು ಮತ ಬೀಳ್ತಿದೆ ಎಂದು ಕಾಣುತ್ತಿರುವಾಗಲೇ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ರಿಷಾ ಗೌಡ ಟೀಂ ಗಿಲ್ಲಿ ನಟನಿಗೆ ಕಳಪೆ ಪಟ್ಟ ಕೊಟ್ಟರು. ಗಿಲ್ಲಿ ನಟ ಸಿಕ್ಕಾಪಟ್ಟೆ ಕಾಮಿಡಿ ಮಾಡ್ತಾರೆ, ಬೇರೆಯವರನ್ನು ತುಳಿದು ಕಾಮಿಡಿ ಮಾಡ್ತಾರೆ, ಏನೂ ಕೆಲಸ ಮಾಡೋದಿಲ್ಲ ಎಂದು ಕಾರಣ ನೀಡಿ ಅವರಿಗೆ ಕಳಪೆ ಪಟ್ಟ ಕೊಟ್ಟರು.
ಧ್ರುವಂತ್ ಅವರು, “ಬೇರೆಯವರನ್ನು ಕೆಳಗಡೆ ತುಳಿದು ಹಾಕಿ ಕಾಮಿಡಿ ಮಾಡ್ತಾರೆ, ಅವರಿಗೂ ಸ್ವಾಭಿಮಾನ ಇರುತ್ತದೆ, ಸ್ವಗೌರವ ಇರುತ್ತದೆ” ಎಂದು ಹೇಳಿದ್ದಾರೆ.
ಜೈಲಿನಲ್ಲಿ ಗಿಲ್ಲಿ ನಟ ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಗಿಲ್ಲಿ ಕಾಟ ಕೊಡ್ತಾರೆ ಎಂದು ಉಳಿದವರು ಕೂಡ ಮಾತನಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.