
ಬಿಗ್ ಬಾಸ್ ಮನೆಯಲ್ಲಿ ( Bigg Boss Kannada Season 12 ) ಈ ವಾರ ಸ್ಪರ್ಧಿಗಳಿಗೆ ಅವರ ಮನೆಯವರಿಂದ ಪತ್ರಗಳು ಬಂದಿತ್ತು. ಆದರೆ ಈ ಪತ್ರ ಎಲ್ಲರ ಕೈ ಸೇರೋದಿಲ್ಲ. ಸ್ಪರ್ಧಿಗಳ ತ್ಯಾಗ, ಸ್ವಾರ್ಥದಿಂದ ಯಾರಿಗೆ ಪತ್ರ ಸಿಗಬೇಕು ಎನ್ನೋದು ನಿರ್ಧರಿತವಾಗುತ್ತದೆ. ಈ ವೇಳೆ ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ ನಡುವೆ ಯಾರಿಗೆ ಪತ್ರ ಸಿಗಬೇಕು ಎನ್ನೋದನ್ನು ಮನೆಯವರು ನಿರ್ಧಾರ ಮಾಡಬೇಕಿತ್ತು.
ರಕ್ಷಿತಾ ಹಾಗೂ ರಾಶಿಕಾ ಶೆಟ್ಟಿ ಪರ ಯಾರು ಯಾರು ಇದ್ದಾರೆ ಎಂದು ನಿರ್ಧಾರ ಮಾಡಿದ್ದರೂ ಕೂಡ, ಫೈನಲ್ ಆಗಿ ಹೇಳುವಲ್ಲಿ ಸಮಯ ತಗೊಂಡರು. ಇದರಿಂದ ಬಿಗ್ ಬಾಸ್ ಇಬ್ಬರಿಗೂ ಪತ್ರ ಸಿಗೋದಿಲ್ಲ ಎಂದು ಘೋಷಣೆ ಮಾಡಿದ್ದರು.
“ಮೂರನೇ ವಾರ ನನ್ನ ವ್ಯಕ್ತಿತ್ವವನ್ನೇ ತಿರುಚಿದ್ದಾಳೆ, ನಾನು ರಕ್ಷಿತಾ ಪರ ಇಲ್ಲ” ಎಂದು ಅಶ್ವಿನಿ ಗೌಡ ಪಟ್ಟು ಹಿಡಿದರು. ಧ್ರುವಂತ್, ಜಾಹ್ನವಿ, ಕಾಕ್ರೋಚ್ ಸುಧಿ, ರಿಷಾ ಗೌಡ, ಸೂರಜ್ ಅವರು ರಾಶಿಕಾ ಶೆಟ್ಟಿಗೆ ಪತ್ರ ಸಿಗಬೇಕು ಎಂದರು. ಆದರೆ ಫೈನಲ್ ಮಾಡಿ ಹೇಳಲೇ ಇಲ್ಲ.
ಪತ್ರ ಸಿಕ್ಕಿಲ್ಲ ಎಂದಾಗ ರಾಶಿಕಾ ಶೆಟ್ಟಿ ಅವರು ಭೂಮಿ-ಆಕಾಶ ಒಂದು ಮಾಡುವ ರೀತಿಯಲ್ಲಿ ಅತ್ತರು, “ನಂದು ಅಂತ ಬಂದಾಗ, ನನಗೆ ಯಾವಾಗಲೂ ಹೀಗೆ ಯಾಕೆ ಆಗತ್ತೆ? ನಮಗೆ ಯಾಕೆ ಹೀಗೆ ಮಾಡಿದ್ರಿ? ಪ್ರತಿಸಲ ನನಗೆ ಹೀಗೆ ಆಗತ್ತೆ? ಸಿಲ್ಲಿ ಸಿಲ್ಲಿ ಕಾರಣಗಳನ್ನು ಕೊಡುತ್ತಾರೆ. ಅಂದು ಕ್ಯಾಪ್ಟನ್ಸಿ ಟಾಸ್ಕ್‌ಗೆ ನಾನು ಹೋಗಬಹುದಿತ್ತು. ಇಲ್ಲಿ ಸ್ವಾರ್ಥಿಗಳಾಗಿರಬೇಕು. ಇವರು ನಮಗೆ ಇಷ್ಟ, ಅವರ ಲೆಟರ್ ಸಿಗಬಾರದು ಅಂತಾರೆ, ಅವಳಿಗೆ ತಮ್ಮನ ಕಡೆಯಿಂದ ಕಾಲ್ ಬಂತು ಎಂದರು? ನಾನು ಏನು ಮಾತಾಡಿದೆ? ” ಎಂದು ಹೇಳಿದರು.
ಆಗ ಅಶ್ವಿನಿ ಗೌಡ, ರಿಷಾ ಗೌಡ ಅವರು “ಅವರು ಗ್ರೂಪ್ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಗ್ರೂಪ್ ಒಡೆಯತ್ತೆ” ಎಂದು ರಾಶಿಕಾಗೆ ಹೇಳಿಕೊಂಡು, ಸಮಾಧಾನ ಮಾಡಿದ್ದಾರೆ.
ಆದರೆ ರಕ್ಷಿತಾ ಶೆಟ್ಟಿ ಮಾತ್ರ ಸೈಲೆಂಟ್ ಆಗಿ ಅತ್ತರು, ಆದರೆ ರಾಶಿಕಾ ಥರ ಯಾವುದೇ ಸೀನ್ ಕ್ರಿಯೇಟ್ ಮಾಡಲಿಲ್ಲ. ಉಳಿದವರು ಸಮಾಧಾನ ಮಾಡಿದರೂ ಕೂಡ, “ಪರವಾಗಿಲ್ಲ” ಎಂದು ರಕ್ಷಿತಾ ಹೇಳಿದರು. ರಕ್ಷಿತಾ ತಂದೆ-ತಾಯಿ ಮುಂಬೈನಲ್ಲಿ ಇರುತ್ತಾರೆ, ಉಡುಪಿಯಲ್ಲಿ ಅಜ್ಜಿ ಇರುತ್ತಾರೆ. ರಕ್ಷಿತಾಗೆ ಮನೆಯಿಂದ ಪದೇ ಪದೇ ಬಟ್ಟೆ ಬರೋದಿಲ್ಲ, ಏನೂ ಸಿಗೋದಿಲ್ಲ. ಹೀಗಾಗಿ ಇವರಿಗೆ ಪತ್ರ ಸಿಗಲಿ ಎಂದು ಕೆಲವರು ಬಯಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದ್ದು, ರಕ್ಷಿತಾ ಅವರು ಸಮಾಧಾನದಿಂದ ಇದ್ದರು, ಆದರೆ ರಾಶಿಕಾ ಮಾತ್ರ ಸಿಕ್ಕಾಪಟ್ಟೆ ಅತ್ತರು, ನನಗೆ ಮಾತ್ರ ಹೀಗೆ ಆಗಿದೆ ಎಂದು ಅತ್ತಿರೋದನ್ನು ಟ್ರೋಲ್ ಮಾಡಿದ್ದಾರೆ. ಇನ್ನು ರಕ್ಷಿತಾ ಪ್ರೌಢಿಮೆಯಿಂದ ಇದನ್ನು ಸ್ವೀಕಾರ ಮಾಡಿದ್ದಲ್ಲದೆ, ಅಶ್ವಿನಿ ಗೌಡ ಬಗ್ಗೆ ಕೂಡ ಒಂದು ಮಾತನಾಡಲಿಲ್ಲ. ರಕ್ಷಿತಾ ಅವರ ಪ್ರೌಢಿಮೆ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆಯಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.