BBK 12: ಕತ್ತಲೆ ರೂಮ್‌ನಲ್ಲಿ ಕೊನೆಗೂ ಆ ಘಟನೆ ನೆನಪಿಸಿಕೊಂಡು ಕಣ್ಣೀರಿಟ್ಟ ಗಿಲ್ಲಿ ನಟ! ನಗಿಸುವರಿಗೂ ನೋವಿರುತ್ತೆ!

Published : Jan 16, 2026, 04:15 PM IST
Bigg Boss Gilli Nata

ಸಾರಾಂಶ

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗ್ರ್ಯಾಂಡ್‌ ಫಿನಾಲೆ ವೀಕ್‌ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಈ ಶೋಗೆ ತೆರೆ ಬೀಳುವುದು. ಹೀಗಿರುವಾಗ ಸ್ಪರ್ಧಿಗಳು ಕಷ್ಟದ ಬಗ್ಗೆ ಮಾತನಾಡಿದ್ದಾರೆ. 

ಬಿಗ್‌ ಬಾಸ್‌ ಎನ್ನೋದು ವ್ಯಕ್ತಿತ್ವದ ಆಟ. ಇಲ್ಲಿ ಸ್ಪರ್ಧಿಗಳ ವೈಯಕ್ತಿಕ ವಿಷಯ, ಎಲ್ಲೂ ಹೇಳಿಕೊಳ್ಳದ ಸಂಗತಿಗಳು, ವೃತ್ತಿ ಜೀವನದ ಏರಿಳಿತಗಳು ಕೂಡ ರಿವೀಲ್‌ ಆಗೋದುಂಟು. ಎಂಥವರೂ ಕೂಡ ದೊಡ್ಮನೆಗೆ ಬಂದು ಅಳೋದುಂಟು. ಈಗ ಫಿನಾಲೆ ಸ್ಪರ್ಧಿಗಳು ಹೋರಾಟದ ಬಗ್ಗೆ ಮಾತನಾಡಿ ಅತ್ತಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಫಿನಾಲೆ ಸ್ಪರ್ಧಿಗಳು ತಮ್ಮ ಕಷ್ಟ ಹೇಳಿದ ಬಗ್ಗೆ ಮಾಹಿತಿ ನೀಡಲಾಗಿದೆ.

ಗಿಲ್ಲಿ ನಟ ಹೇಳಿದ್ದೇನು?

“ಮಲಗಲು ಜಾಗ, ಊಟಕ್ಕೋಸ್ಕರ ಒದ್ದಾಡಿದ್ದೆ. ದುಡ್ಡು, ಚಿನ್ನ ಕದ್ದಿರೋದು ಕೇಳಿರುತ್ತೀರಾ, ನಾನು ಅನ್ನ ಕದ್ದು ತಿಂದಿದ್ದೇನೆ” ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ. ಮಂಡ್ಯದ ಪುಟ್ಟ ಹಳ್ಳಿಯವರಾದ ಗಿಲ್ಲಿ ನಟ ಅವರು ಊರು ಬಿಟ್ಟು ಬಂದು, ಬೆಂಗಳೂರು ಸೇರಿದ್ದರು. ಅಲ್ಲಿ ಅವರು ಏನೇನೋ ಕೆಲಸ ಮಾಡಿ ಒದ್ದಾಡಿದ್ದುಂಟು. ಅಷ್ಟೇ ಅಲ್ಲದೆ ಒಂದು ಹೊತ್ತಿನ ಊಟಕ್ಕೋಸ್ಕರ ತುಂಬ ಅವಮಾನ ಪಟ್ಟಿದ್ದರು. ಈ ಬಗ್ಗೆ ಅವರು ಸಾಕಷ್ಟು ಸಂದರ್ಶನ, ರಿಯಾಲಿಟಿ ಶೋಗಳಲ್ಲಿ ಹೇಳಿಕೊಂಡಿದ್ದರು.

ಕಾವ್ಯ ಶೈವ ಏನಂದ್ರು?

ಕಾವ್ಯ ಶೈವ ಅವರು ಮೊದಲ ಬಾರಿಗೆ ತಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. “ಹಾಲು ತರಲು ದುಡ್ಡು ಇರಲಿಲ್ಲ, ಅಕ್ಕಿ ಕೂಡ ಲೆಕ್ಕಾಚಾರ ಹಾಕಿ ಅಡುಗೆ ಮಾಡಿದ್ದೇವೆ” ಎಂದು ಹೇಳಿದ್ದರು. ಕಾವ್ಯ ಅವರಿಗೆ ಗವರ್ನ್‌ಮೆಂಟ್‌ ಕೆಲಸ ಆಗುವ ಹಂತದಲ್ಲಿತ್ತು, ನಟನೆ ಮೇಲಿನ ಒಲವಿನಿಂದ ಅವರು ಆ ಜಾಬ್‌ ಅವಕಾಶ ಬಿಟ್ಟು ಚಿತ್ರರಂಗಕ್ಕೆ ಬಂದರು.

ಅಶ್ವಿನಿ ಗೌಡ ಏನಂದ್ರು?

ಅಶ್ವಿನಿ ಗೌಡ ಅವರು ಆಗರ್ಭ ಶ್ರೀಮಂತರ ಮಗಳು, ಇವರ ತಂದೆ ಕಾರ್ಪೋರೇಟ್‌ ಆಗಿದ್ದವರು, ಈಗ ಅವರ ತಂದೆ ಇಲ್ಲ. ತಂದೆ ಬಗ್ಗೆ ಮಾತನಾಡಿದ ಅಶ್ವಿನಿ ಅವರು, “ಮಗಳು ನನಗೆ ಗಾಡ್‌ ಗಿಫ್ಟ್‌ ಎಂದು ನನ್ನ ತಂದೆ ಹೇಳುತ್ತಿದ್ದರು” ಎಂದು ಹೇಳಿದ್ದಾರೆ.

ಧನುಷ್‌ ಗೌಡ ಹೇಳಿದ್ದೇನು?

ಧನುಷ್‌ ಗೌಡ ಅವರು ಮಾತನಾಡಿದ್ದು, “ಬೀದಿ ಬೀದಿಗೆ ಹೀರೋ ಇರ್ತಾರೆ, ನೀನು ಏನು ಹೀರೋ ಆಗ್ತೀಯಾ ಎಂದು ಹೇಳಿದ್ದುಂಟು” ಎಂದಿದ್ದಾರೆ. ಧನುಷ್‌ ಅವರು ಗೀತಾ ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸಿದ್ದರು. ಗೌರಿಶಂಕರ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಕೂಡ ಹೀರೋ ಆಗಿ ನಟಿಸಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಬಳಿಕ ಮೊದಲ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಅನುಶ್ರೀ
ಬಿಗ್ ಬಾಸ್ ಫಿನಾಲೆಗೂ ಮುನ್ನ ಬಿಗ್ ಟ್ವಿಸ್ಟ್‌; ಗಿಲ್ಲಿಯನ್ನ ಬಿಗಿದಪ್ಪಿಕೊಂಡ ಅಶ್ವಿನಿ ಗೌಡ!