Bigg Boss ನೆಚ್ಚಿನ ಸ್ಪರ್ಧಿಗೆ ವೋಟ್​ ಹಾಕಲು ಕೊನೆ ಅವಕಾಶ: ಯಾವಾಗ, ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

Published : Jan 16, 2026, 01:43 PM IST
Bigg Boss 12 Finalists

ಸಾರಾಂಶ

ಬಿಗ್​ಬಾಸ್​ 12ರ ಗ್ರ್ಯಾಂಡ್ ಫಿನಾಲೆ ಇದೇ 18ರಂದು ನಡೆಯಲಿದ್ದು, ಗಿಲ್ಲಿ ನಟ, ಅಶ್ವಿನಿ ಗೌಡ ಸೇರಿದಂತೆ ಆರು ಮಂದಿ ಸ್ಪರ್ಧಿಗಳಿದ್ದಾರೆ. ವೀಕ್ಷಕರ ಮತಗಳ ಆಧಾರದ ಮೇಲೆ ವಿನ್ನರ್​ ನಿರ್ಧಾರವಾಗಲಿದ್ದು, ಜಿಯೋ ಹಾಟ್​ಸ್ಟಾರ್​ ಮೂಲಕ  ಹೇಗೆ, ಯಾವಾಗ ವೋಟ್​ ಹಾಕ್ಬೇಕು? ಇಲ್ಲಿದೆ ಡಿಟೇಲ್ಸ್​

ಬಿಗ್​ಬಾಸ್​ 12 (Bigg Boss 12) ಗ್ರ್ಯಾಂಡ್ ಫಿನಾಲೆ ಇದೇ 18ರಂದು ನಡೆಯಲಿದೆ. ಯಾರು ವಿನ್​ ಆಗುತ್ತಾರೆ ಎಂದು ತಿಳಿಯಲು ಇನ್ನೇನು ಕೆಲವೇ ಕೆಲವು ಗಂಟೆಗಳು ಬಾಕಿ ಇವೆ. ಇದಾಗಲೇ ತಮ್ಮ ನೆಚ್ಚಿನ ಸ್ಪರ್ಧಿ ವಿನ್​ ಆಗಬೇಕೆಂದು, ಅವರ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ಕೊನೆಯ ಹಂತದ ಪ್ರಚಾರ ನಡೆಸುತ್ತಿದ್ದಾರೆ. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ನಡುವೆ ಸಕತ್​ ಪೈಪೋಟಿ ಕೂಡ ಇದೆ. ಈ ಬಾರಿ ಹೆಣ್ಣೊಬ್ಬಳು ಗೆಲ್ಲುವುದು ಎಂದು ಭವಿಷ್ಯ ನುಡಿಯಲಾಗಿದೆ. ಆದರೆ ಅಭಿಮಾನಿಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಗಿಲ್ಲಿ ನಟನೇ ವಿನ್​ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ.

ವೋಟ್​ ಮೇಲೆ ಸ್ಪರ್ಧಿಗಳ ಹಣೆಬರಹ

ಕೊನೆಯ ಕ್ಷಣದವರೆಗೂ ಹೀಗೆಯೇ ಎಂದು ಹೇಳಲಾಗದು. ಬಿಗ್​ಬಾಸ್​ನ ಲೆಕ್ಕಾಚಾರವೂ ಬೇರೆಯದ್ದೇ ಇರಬಹುದು. ಅದೇನೇ ಇದ್ದರೂ ಸದ್ಯ ಬಿಗ್​ಬಾಸ್​ ಹೇಳಿರುವ ಪ್ರಕಾರ ಹೋಗುವುದಾದರೆ, ವೀಕ್ಷಕರ ಮತದ ಲೆಕ್ಕಚಾರಾದ ಆಧಾರದ ಮೇಲೆ ವಿನ್ನರ್​ ಘೋಷಿಸಲಾಗುತ್ತದೆ ಎನ್ನುವುದು. ಆದ್ದರಿಂದ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎನ್ನುವ ನಿಮ್ಮ ವೋಟಿಂಗ್​ ಆಧಾರದ ಮೇಲೆ ಸ್ಪರ್ಧಿಗಳ ಹಣೆಬರಹ ನಿಗದಿಯಾಗುತ್ತದೆ ಎಂದು ಸದ್ಯ ಹೇಳಲಾಗುತ್ತಿದೆ. ಹಾಗಿದ್ದರೆ, ವೋಟಿಂಗ್​ ಲೈನ್​ ಎಲ್ಲಿಯವರೆಗೆ ಇರುತ್ತೆ? ನೀವು ಹೇಗೆ ವೋಟ್​ ಮಾಡಬಹುದು ಎಂಬಿತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

99 ಮತ ಹಾಕಲು ಅವಕಾಶ

ಸದ್ಯ ಬಿಗ್​ಬಾಸ್​ನ ಫಿನಾಲೆಯಲ್ಲಿ ಆರು ಮಂದಿ ಇದ್ದಾರೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ರಘು ಮತ್ತು ಧನುಷ್​ ಫಿನಾಲೆಯಲ್ಲಿ ಇದ್ದು, ಒಬ್ಬರು ವಿನ್ನರ್​, ಇನ್ನಿಬ್ಬರು ರನ್ನರ್ಸ್​ ಅಪ್​ ಆಗಲಿದ್ದಾರೆ (Bigg Boss Kannada 12 winner), ವಿನ್ನರ್​ಗೆ 50 ಲಕ್ಷ ರೂಪಾಯಿ ಬಹುಮಾನದ ಜೊತೆ, ಇನ್ನೂ ಹಲವು ಉಡುಗೊರೆಗಳು ಸಿಗಲಿವೆ. ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್​ ಮಾಡಲು ಜಿಯೋ ಹಾಟ್​ಸ್ಟಾರ್​ ಆ್ಯಪ್​ ಬಳಸಬೇಕಿದೆ. ಇದರ ಮೂಲಕ ಮತ ಹಾಕಬಹುದು. ಇದಾಗಲೇ ವೋಟಿಂಗ್​ ಲೈನ್​ ಆರಂಭವಾಗಿದೆ. ಪ್ರತಿ ಖಾತೆಗೆ 99 ಮತ ಹಾಕುವ ಅವಕಾಶವನ್ನು ಬಿಗ್​ಬಾಸ್​ ನೀಡಿದೆ. ನೀವು ಒಬ್ಬರಿಗೇ 99 ವೋಟ್​​ ಹಾಕಬಹುದು, ಇಲ್ಲವೇ ಬೇರೆ ಬೇರೆಯವರಿಗೆ ಸೇರಿ 99 ಹಾಕಬಹುದು. ಒಮ್ಮೆ ಹಾಕಿದ ವೋಟ್​ ಮತ್ತೆ ಅಯ್ಯೋ ಇವರಿಗೆ ಬೇಡವಾಗಿತ್ತು ಎಂದರೆ ಹಿಂದಕ್ಕೆ ಪಡೆಯುವ ಅವಕಾಶ ಇರುವುದಿಲ್ಲ.

ಎಲ್ಲಿಯವರೆಗೆ ವೋಟ್​ ಹಾಕ್ಬೋದು?

ಇಲ್ಲಿ ಒಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಏಕೆಂದರೆ ಈ ವೋಟಿಂಗ್​ ಲೈನ್​ ಆರಂಭವಾಗಿದ್ದು ಇದೇ 14ರಿಂದ. ಅದಕ್ಕೂ ಮುನ್ನ ನೀವೇನಾದರೂ ಮತ ಚಲಾಯಿಸಿದ್ದರೆ, ಅದು ಮಿಡ್​ವೀಕ್​ ಎಲಿಮಿನೇಷನ್​ನಲ್ಲಿ ಮುಗಿದು ಹೋಗಿದೆ. ಆದ್ದರಿಂದ ಗ್ರ್ಯಾಂಡ್​ ಫಿನಾಲೆಯಲ್ಲಿ ಯಾರು ವಿನ್​ ಆಗಬೇಕು ಎಂದು ನೀವು ಬಯಸುತ್ತೀರೋ, ಅವರಿಗೆ ವೋಟ್​ ಹಾಕಲು 14ರ ನಂತರದ ವೋಟ್​ ಗಣನೆಗೆ ಬರಲಿದೆ. ಈ ವೋಟಿಂಗ್​ ಲೈನ್​ ಜನವರಿ 18ರ ಬೆಳಿಗ್ಗೆ 10 ಗಂಟೆಯವರೆಗೆ ತೆರೆದಿರುತ್ತದೆ. ಬಿಗ್​ಬಾಸ್​ ಹೇಳಿರುವ ಪ್ರಕಾರ, ನಿಮ್ಮ ಈ ವೋಟ್​ ಮೇಲೆ ವಿನ್ನರ್​ ನಿರ್ಧಾರವಾಗುತ್ತದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ Bigg Boss Winner ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!
Kannada Celebrity Lovers: ಪ್ರೀತಿಯಲ್ಲಿ ಬಿದ್ದಿರುವ 7 ಕನ್ನಡ ಕಿರುತೆರೆಯ ಜೋಡಿಗಳೂ 2026ರಲ್ಲಿ ಮದುವೆ ಆಗ್ತಾರಾ?