
ಬಿಗ್ ಬಾಸ್ ಕನ್ನಡ ಸೀಸನ್ ನಿತ್ಯದ ಎಪಿಸೋಡ್‌ನಲ್ಲಿ ಎಲ್ಲವನ್ನೂ ತೋರಿಸೋದಿಲ್ಲ, ಆದರೆ 24/7 ಲೈವ್ ಇರುತ್ತದೆ. ಈಗ ಗಿಲ್ಲಿ ನಟ ಅವರು ರಕ್ಷಿತಾ ಬಗ್ಗೆ ಮಾತನಾಡಿರೋದು ಬಂದಿಲ್ಲ ಎಂದು ವೀಕ್ಷಕರು ಬೇಸರ ಹೊರಹಾಕಿದ್ದಾರೆ. ಮುಂಬರುವ ರವಿವಾರ ಜನವರಿ 18ರಂದು ಫಿನಾಲೆ ನಡೆಯುವುದು.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೀಕ್ ಆಗಿರೋದರಿಂದ ಫಿನಾಲೆ ಸ್ಪರ್ಧಿಗಳು, ಯಾರಿಗೆ ನೋವು ಉಂಟು ಮಾಡಿದ್ದರೋ ಅವರಿಗೆ ಕ್ಷಮೆ ಕೇಳಬೇಕಿತ್ತು. ಆಗ ಗಿಲ್ಲಿ ಅವರು ರಕ್ಷಿತಾ, ರಘು, ಅಶ್ವಿನಿ, ಕಾವ್ಯಗೆ ಕ್ಷಮೆ ಕೇಳಿದ್ದರು. ಆದರೆ ರಕ್ಷಿತಾಗೆ ಕ್ಷಮೆ ಕೇಳಿದ್ದು ಟಿವಿಯಲ್ಲಿ ಬಂದಿಲ್ಲ.
“ಗಿಲ್ಲಿ ನಟ ಅವರು ತುಂಬ ಎಮೋಶನಲ್ ಆಗಿ ಮಾತಾಡಿರೋದು, ಲೈವ್‌ಲ್ಲಿ ನೋಡಿ ಕಣ್ಣೀರು ಬಂತು. ಟಿವಿಯಲ್ಲಿ ಹಾಕಿಲ್ಲ. ರಕ್ಷಿತಾ ಒಳ್ಳೆಯತನವನ್ನು ಯಾಕೆ ತೋರಿಸಿಲ್ಲ. ರಕ್ಷಿತಾ ಶೆಟ್ಟಿಗೆ ಕ್ಷಮೆ ಕೇಳುವ ಪತ್ರವನ್ನು ಓದುವ ಕ್ಲಿಪ್ ತೋರಿಸಿಲ್ಲ. ರಕ್ಷಿತಾ ಅವರ ಮೂರು ಆಸೆಯನ್ನು ಯಾವಾಗ ನೆರವೇರಿಸುತ್ತೀರಾ? ಫಿನಾಲೆ ದಿನ ಹುಲಿವೇಷ ಹಾಕಿ ಸರ್ಪ್ರೈಸ್ ಕೊಡ್ತೀರಾ?” ಎಂದು ಓದುಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿರುವಾಗ ಅಡುಗೆ ಜವಾಬ್ದಾರಿಯನ್ನು ಹೆಚ್ಚಿನ ಸಮಯ ತಾವೇ ಹೊತ್ತುಕೊಂಡಿದ್ದಾರೆ. ಮನೆದಲ್ಲಿರುವ ಅನೇಕರಿಗೆ ಅವರು ಸಹಾಯ ಮಾಡಿದ್ದಾರೆ ಮತ್ತು ಯಾವಾಗಲೂ ಸಹಕಾರದ ಮನೋಭಾವ ತೋರಿದ್ದಾರೆ. ಕೆಲವೊಮ್ಮೆ ಅವರು ಮಾತನಾಡುವ ರೀತಿ ತುಂಬಾ ಪಕ್ವವಾಗಿರುತ್ತದೆ, ವಯಸ್ಸು ಚಿಕ್ಕದಾಗಿದ್ದರೂ ಆಲೋಚನೆಗಳು ದೊಡ್ಡದು.
ಅವರು ಬಹಳ ಪರಿಶ್ರಮಿ ಹುಡುಗಿ, ಯಾರನ್ನಾದರೂ ಪ್ರೀತಿಸಿದರೆ ಅಂತಃಕರಣದಿಂದ ಕಾಳಜಿ ತೋರುತ್ತಾರೆ” ಎಂದು ವೀಕ್ಷಕರು ಹೇಳಿದ್ದಾರೆ.
ಯಾರ ಬಗ್ಗೆಗೂ ಬೆನ್ನತ್ತಿ ಕೆಟ್ಟ ಮಾತುಗಳನ್ನು ಮಾತನಾಡಿಲ್ಲ, ನಕಾರಾತ್ಮಕತೆಯಿಂದ ದೂರ ಉಳಿದಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಇರುವ, ಮೌಲ್ಯಗಳನ್ನು ಗೌರವಿಸುವ ವ್ಯಕ್ತಿತ್ವವೇ ರಕ್ಷಿತಾ. ಇಂತಹ ಶುದ್ಧ ಹೃದಯ ಮತ್ತು ನಿಜವಾದ ಗುಣಗಳೇ ಜನರ ಮನಸ್ಸು ಗೆಲ್ಲುತ್ತವೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇಷ್ಟಪಡುತ್ತಾರೆ. ಶುದ್ಧ ಹೃದಯ, ನಿಜವಾದ ಆಟ ಮತ್ತು ಗೌರವದಿಂದ ಅವರು ಜನರ ಮನಸ್ಸು ಗೆದ್ದಿದ್ದಾರೆ.
ಈ ಸೀಸನ್‌ನ Top 2 ಇವರಿಗೇ ತಕ್ಕದ್ದು. ಯಾರ ಬೆನ್ನ ಹಿಂದೆಯೂ ಕೆಟ್ಟ ಮಾತುಗಳನ್ನು ಮಾತನಾಡಿಲ್ಲ. ಯಾರಾದರೂ ಇಷ್ಟವಿರದಿದ್ದರೂ ಕೂಡ, ಅವರ ಬಗ್ಗೆ ಒಳ್ಳೆಯದೇ ಮಾತನಾಡುವ ಗುಣ ಹೊಂದಿದ್ದಾರೆ. ಸದಾ ಪಾಸಿಟಿವ್ ಆಗಿ ನಡೆದು, ನಕಾರಾತ್ಮಕತೆಯಿಂದ ದೂರ ಉಳಿದಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಇರುವ, ಮೌಲ್ಯಗಳನ್ನು ಗೌರವಿಸುವ ವ್ಯಕ್ತಿತ್ವ ಹೊಂದಿದ್ದಾರೆ.
ತಮ್ಮ ಮೇಲೆ ಅನ್ಯಾಯವಾದಾಗ, ದೊಡ್ಡ ವ್ಯಕ್ತಿತ್ವಗಳ ವಿರುದ್ಧವೂ ಧೈರ್ಯವಾಗಿ ತಮ್ಮ ಪರವಾಗಿ ನಿಂತಿದ್ದಾರೆ. ಮೀನುಗಾರ ಸಮುದಾಯದ ಸಮಸ್ಯೆಗಳ ಬಗ್ಗೆ ಕಾಳಜಿ ತೋರಿಸಿ, ಬಿಗ್ ಬಾಸ್ ವೇದಿಕೆಯಲ್ಲಿ ಅವುಗಳನ್ನು ಚರ್ಚೆಗೆ ತಂದಿದ್ದಾರೆ. ಅವರ ತಂದೆ ಪಾನ್ ಶಾಪ್ ನಡೆಸುವವರು; ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಸಮಾಜದ ಬಹುಮತ ಜನರನ್ನು ಪ್ರತಿನಿಧಿಸುವ ಹಿನ್ನೆಲೆ ಹೊಂದಿದ್ದಾರೆ.
ಸದಾ ಆಕ್ಟಿವ್ ಆಗಿದ್ದು, ಅವರ ಕಣ್ಣುಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪಾರ್ಕಲ್ ಕಾಣಿಸುತ್ತದೆ. ಅವರು ಮಾತನಾಡುವಾಗ ಅವರ ಎನರ್ಜಿ ಮತ್ತು ಸ್ಪಷ್ಟತೆ ಎಲ್ಲರ ಗಮನ ಸೆಳೆಯುತ್ತದೆ. ಅವರ ಮಾತುಗಳನ್ನು ಕಿಚ್ಚ ಸುದೀಪ್ ಕೂಡ ಆಸಕ್ತಿಯಿಂದ ಮತ್ತು ಆನಂದದಿಂದ ಕೇಳುತ್ತಾರೆ
ಹಿಂದೆ ಅವರ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ್ದವರೂ ಇಂದು ಅವರನ್ನು ಇಷ್ಟಪಡುವ ಮಟ್ಟಿಗೆ ಬದಲಾಗಿದ್ದಾರೆ, ಇದು ಅವರ ವ್ಯಕ್ತಿತ್ವದ ಶಕ್ತಿ. ಇದು ರಕ್ಷಿತಾಳ ನಿಜವಾದ ವ್ಯಕ್ತಿತ್ವ, ಶುದ್ಧ
ಗಿಲ್ಲಿ ಟ್ರೋಫಿ ಗೆಲ್ಲೋದರಲ್ಲಿ ಯಾವುದೇ ಸಂಶಯ ಇಲ್ಲ, ಗಿಲ್ಲಿ ಟ್ರೋಫಿಯನ್ನು ಗೆಲ್ಲುವ ಶಕ್ತಿ ಹೊಂದಿದ್ದಾರೆ. ಆದರೆ ಎರಡನೇ ಸ್ಥಾನಕ್ಕೆ ದಯವಿಟ್ಟು ರಕ್ಷಿತಾ ಅವರನ್ನು ಕೂಡ ಬೆಂಬಲಿಸಿ. ಬಿಗ್ ಬಾಸ್ ಮನೆಯೊಳಗೆ ರಕ್ಷಿತಾ ಯಾವಾಗಲೂ ಗಿಲ್ಲಿಗೆ ಬೆಂಬಲವಾಗಿ ನಿಂತಿದ್ದಾರೆ.
ಅವರು ಗಿಲ್ಲಿಗೆ ಸದಾ ಚೀಯರ್ ಮಾಡಿದ್ದಾರೆ, ತಾಯಿಯಂತೆ ಕಾಳಜಿ ವಹಿಸಿದ್ದಾರೆ, ಅನಾರೋಗ್ಯದ ಸಮಯದಲ್ಲಿ ಔಷಧಿ ನೀಡಿ ನೋಡಿಕೊಂಡಿದ್ದಾರೆ. ಗಿಲ್ಲಿಯಷ್ಟೇ ಅಲ್ಲ, ರಘು ಅವರಿಗೂ ಎಲ್ಲ ರೀತಿಯಲ್ಲಿ ಬೆಂಬಲ ನೀಡಿದ್ದಾರೆ. ನಿಸ್ವಾರ್ಥ ಬೆಂಬಲ, ಶುದ್ಧ ಹೃದಯ ಮತ್ತು ಕಾಳಜಿಯ ವ್ಯಕ್ತಿತ್ವವೇ ರಕ್ಷಿತಾಳ ಶಕ್ತಿ ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.