ಗಿಲ್ಲಿ ನಟನ ವಿರುದ್ಧ ದೂರು; ಎದೆ, ತೊಡೆ, ಸೊಂಟ ತೋರಿಸೋದು ಓಕೆನಾ? ಹೆಣ್ಣಿನ ಮೈತುಂಬ ಬಟ್ಟೆ ಹಾಕಿಸಿ: ವೀಕ್ಷಕರು

Published : Nov 20, 2025, 11:57 AM IST
bigg boss gilli nata

ಸಾರಾಂಶ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ರಿಷಾ ಗೌಡ ಅವರ ಬಟ್ಟೆ ಮುಟ್ಟಿದ್ದು ದೊಡ್ಡ ತಪ್ಪಾಯಿತು. ಆದರೆ ನಿಜಕ್ಕೂ ಸಮಾಜದಲ್ಲಿ ಏನಾಗ್ತಿದೆ? ಏನು ನಡೆಯುತ್ತಿದೆ ಎಂಬುದರ ಬಗ್ಗೆ ವೀಕ್ಷಕರೊಬ್ಬರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.  

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಇತ್ತೀಚೆಗೆ ಬೆಡ್‌ ರೂಮ್‌ನಲ್ಲಿದ್ದ ರಿಷಾ ಗೌಡ ಅವರ ಬಟ್ಟೆಯನ್ನು ಗಿಲ್ಲಿ ನಟ ಮುಟ್ಟಿದ್ದಲ್ಲದೆ, ಅದನ್ನು ಬಾತ್‌ರೂಮ್‌ ಏರಿಯಾಗೆ ತಂದು ಹಾಕಿದ್ದರು. ಇದನ್ನು ಕಿಚ್ಚ ಸುದೀಪ್‌ ಕೂಡ ವಿರೋಧಿಸಿ, ಖಂಡಿಸಿದ್ದರು. ಗಿಲ್ಲಿ ನಟ ಅವರು ಹೆಣ್ಣು ಮಕ್ಕಳ ಬಟ್ಟೆ ಮುಟ್ಟಿದ್ದಕ್ಕೆ ದೂರು ದಾಖಲಾಗಿತ್ತು. ಈಗ ದೀಪು ಎನ್ನುವವರು ಸೋಶಿಯಲ್‌ ಮೀಡಿಯಾದಲ್ಲಿ ಇದನ್ನು ವಿರೋಧಿಸಿದ್ದಾರೆ.

ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹೀಗಿದೆ?

ಮಹಿಳೆಯರ ಬಟ್ಟೆ ಮುಟ್ಟಿದ್ದು ತಪ್ಪು ಎನ್ನುತ್ತಾರೆ, ಅದು ಮೈಮೇಲೆ ಇದ್ದಾಗಲ್ಲ ಎತ್ತಿಟ್ಟ ಬಟ್ಟೆ ಮುಟ್ಟಿದ್ದು ತಪ್ಪು ಅಂತಾದ್ರೆ ಮಹಿಳಾ ಆಯೋಗ ಕ್ರಮ ಕೈಗೊಳ್ಳಲಿ. ಆದರೆ ಅದಕ್ಕಿಂತ ಮೊದಲು ನಮ್ ಮೈ, ನಮ್ಮಿಷ್ಟ ಅಂತ ಎದೆ, ತೊಡೆ, ಸೊಂಟ ತೋರಿಸೋ ಮಹಿಳೆಯರ ಮೇಲೆ ಕ್ರಮ ತಗೊಳ್ಳಲಿ.

ಹೌದೂ... ಅವರವರ ಮೈ ಅವರವರ ಇಷ್ಟ, ಆದರೆ ಎಲ್ಲಿ? ಅವರವರ ಮನೆಯ 4 ಗೋಡೆ ಮಧ್ಯ, ಸಾರ್ವಜನಿಕ ಸ್ಥಳದಲ್ಲಿ ಅಲ್ಲ, ನಾಲ್ಕು ಜನರ ಮುಂದೂ ಅಲ್ಲ, ಕ್ಯಾಮರಾ ಮುಂದೆಯೂ ಅಲ್ಲ. Razer ಜಾಹೀರಾತು ಮಾಡೋ ಹುಡುಗನ ಜೊತೆಗೂ ತೊಡೆ ಕಾಣೋ ಹುಡುಗಿ ಬೇಕು, ಸೋಪ್ ಅಂತೂ ಗಂಡು ಮಕ್ಕಳು ಹಚ್ಚೋದೆ ಇಲ್ಲ ಅನಿಸುತ್ತದೆ. ಅದಕ್ಕೆ ಪಾಪ ಕಂಪೆನಿಯವರು ಹುಡುಗಿಯರನ್ನೇ ಬಟ್ಟೆ ಬಿಚ್ಚಿಸಿ ಬಾತ್‌ ಟಬ್‌ಗೆ ಇಳಿಸ್ತಾರೆ, ಪರ್ಫ್ಯೂಮ್‌ನಿಂದ ಕಾಂಡೋಮ್‌ ಜಾಹೀರಾತಿನಲ್ಲಿ seductive ಆಗಿ ನಟಿಸಲು ಹುಡುಗಿಯರೇ ಬೇಕು.

ಇನ್ನು sanitary pads adಗಳು ಹಾಕಿರೋ demo ಒಂದು ತೋರಿಸಲ್ಲ... Zoom ಮಾಡಿ ಹಾಕಿದ್ದು ಕಾಣೋದೇ ಇಲ್ಲ, ಲೀಕ್‌ ಆಗೋದೇ ಇಲ್ಲ, ವಾಸನೆ ಬರೋದೇ ಇಲ್ಲ ಅಂತ ಅವಳ, ಖಾಸಗಿ ಅಂಗಗಳ ಸುತ್ತ ಕ್ಯಾಮರಾ ಸುತ್ತಿಸಿ ಅವಳನ್ನ ಹಾರಿಸಿ, ಓಡಿಸಿ ಕುಣಿಸಿ ತೋರಿಸ್ತಾರೆ, ಬಾಡಿ ಲೋಶನ್‌ ಕೂಡಾ ತೊಡೆಗೆ ಸವರಬೇಕು.

ಮುನ್ನಿ ಬದನಾಮ್ ಆಗಬಹುದು,‌ ಶೀಲಾ ಜವಾನಿ ತೋರಿಸಬಹುದು, Mai to tandoori murugi hoon yaar ಅನ್ನಬಹುದು, ಕಥೆಯಲ್ಲಿ ಹೀರೋ, ಹೀರೋಯಿನ್ ಯಾರಿಗೂ ಕಾಣದ ಹಾಗೆ ಮಾಡಬೇಕಾದ‌ ರೊಮ್ಯಾನ್ಸ್‌, ಕ್ಯಾಮರಾ ಮುಂದೆ ಮಾಡಿಸ್ತಾರೆ... ಇದು ಬರೀ ಒಂದು ಭಾಷೆ ಅಲ್ಲ, ಎಲ್ಲಾ ಭಾಷೆಯಲ್ಲೂ ಇಂಥ ಹಾಡು, ಡ್ಯಾನ್ಸ್‌, ದೃಶ್ಯ ಇರ್ತವೆ. ಐಟಮ್‌ ಸಾಂಗ್‌, ಅದಕ್ಕೊಬ್ಬಳು ಐಟಮ್‌ ಗರ್ಲ್.‌

ಹುಡುಗಿ ಆಗಿದ್ದವ್ಳು ಐಟಮ್ ಆದಾಗ ಮಹಿಳೆಗೆ ಅವಮಾನ ಆಗಲ್ವಾ? ಅದನ್ಯಾಕೆ ಯಾರೂ ಕೇಳಲ್ಲ. ಆದರೂ ಆ ಹುಡುಗಿಗೆ ದುಡ್ಡು ಕೊಟ್ರೆ ಎಷ್ಟು ಬೇಕಾದ್ರೂ ಬಟ್ಟೆ ಬಿಚ್ಚಿಸಿ ಎಲ್ಲಿ ಬೇಕಾದ್ರೂ ಮುಟ್ಟಿ, ಹಿಸುಕಿ, ಹಿಡ್ಕೊಂಡು ಹೊರಳಾಡಬಹುದು ಅನಿಸುತ್ತದೆ. ಖಾಸಗಿ ಭಾಗ ಅಂದ್ರೆ ಈಗಿನ ಕೆಲ ಹೆಣ್ಣು ಮಕ್ಕಳಿಗೆ ಹೃದಯ, ಕಿಡ್ನಿ, ಲಿವರ್, ಕರುಳು ಪಾಚಿ ಅಷ್ಟೇ... ಬಾಕಿ ಎಲ್ಲ ತೋರಿಸಿ ಹಣ ಹೆಸರು ಮಾಡೋ ಭಾಗಗಳೇ ಆಗಿವೆ.

ಆದರೆ ಒಳ ಅಂಗಿ ಅಂತ ಇರ್ಥಾವಲ್ಲ... ಅದರ ಒಳಗೆ ಇರೋ ಭಾಗಗಳು ಕೂಡಾ ಹೊರಗೆ ಕಾಣೋ ತರ ಸೈಡ್‌ನಲ್ಲಿ ಮಾತ್ರ ಲೂಸ್‌ ಆಗಿ ಬಟ್ಟೆ ಹಾಕ್ಕೊಂಡು ಮಧ್ಯದಲ್ಲಿ ಮೈ ತೋರಿಸಿಕೊಂಡು ಓಡಾಡೋ ವಿಂಡೋ ಲೈ* ಪ್ರಮೋಟರ್ಸ್ ಅಂದ್ರೆ ವಸ್ತುನ ತಗೊಳ್ಳಲ್ಲ ಅಂದ್ರು ಅಂಗಡಿ glass ಕಿಟಕಿ, ಗೋಡೆ ಇಂದ ವಸ್ತು ನೋಡ್ತಾರಲ್ಲ (window shopping) ಆ ತರ ನಾವು ಅವರಿಂದ ಏನೂ ಮಾಡಿಸಿಕೊಳ್ಳಲ್ಲ, ಮುಟ್ಟಿಸಿಕೊಳ್ಳಲ್ಲ ಆದ್ರೆ ಧಾರಾಳವಾಗಿ ತೋರಿಸ್ತೀವಿ ಅನ್ನೋ window ಲೈ* promoters ಯಾಕಿನ್ನೂ ಮಹಿಳಾ ಆಯೋಗದ ಕಣ್ಣಿಗೆ ಬಿದ್ದಿಲ್ಲ? ಯಾಕೀ ಜಾಣ ಕುರುಡುತನ?

ಇವರೇನೋ ತೋರಿಸಿ ಆರಾಮಾಗಿ ಸೆಕ್ಯುರಿಟಿ ಗಾರ್ಡ್ ಇಟ್ಕೊಂಡು‌, ಸೇಫ್ ಆಗಿ ಮನೆ ಸೇರ್ಕೊಂಡು ವೀಕ್ಷಣೆ, ಫಾಲೋವರ್ಸ್ ಅಂತ ಹಣ ಮಾಡ್ತಾರೆ... ಮಾನ ಮರ್ಯಾದೆ ಅಂದ್ರೇನು ಗೊತ್ತಿರಲ್ಲ, ಗೊತ್ತಿದ್ರೆ ನಾನ್ ಹೀಗೆ ಇರೋದನ್ನ ನನ್ನ ಅಪ್ಪನೂ ನೋಡ್ತಾನೆ, ಅಣ್ಣ, ತಮ್ಮ, ಗಂಡ, ಗಂಡನ ಸ್ನೇಹಿತರು, ಗಂಡನ ಅಣ್ಣ ತಮ್ಮ ಅಪ್ಪ ಕೂಡಾ ನೋಡ್ತಾನೆ, ನಂಗೆ ಪಾಠ ಕಲಿಸಿದವನೂ ನೋಡ್ತಾನೆ... ನಾಳೆ ಮಗು ಆಗಿದ್ದಾಗ ಎದೆ ಹಾಲು ಕುಡಿದು ಗಂಡಸಾಗಿ ಬೆಳೆದ ಮಗನೂ ಅದೇ ದೃಷ್ಟಿಯಲ್ಲಿ ನೋಡ್ತಾನೆ ಅನ್ನೋ ಪ್ರಜ್ಞೆ ಇರ್ತಿತ್ತು. ಆದ್ರೆ ಇವಕ್ಕೆ ದುಡ್ಡು ಹಾಕ್ತಾನೆ ಅಂದ್ರೆ ಫೇಕ್‌ ಐಡಿಯಲ್ಲಿ ಮಗ, ಅಣ್ಣ, ಅಪ್ಪ, ಅಜ್ಜ ಇದ್ರೂ ಬಟ್ಟೆ ಬಿಚ್ತಾರೆ.

ಇವ್ರು ಹೆಂಗಾದ್ರೂ ಇದ್ಕೊಳ್ಳಲಿ, ಆದ್ರೆ ಇದರಿಂದ ತೊಂದರೆ ಆಗೋದು security guard afford ಮಾಡೋಕೆ ಆಗದೆ ರಸ್ತೆಯಲ್ಲಿ ಮಾನವಾಗಿ ನಡ್ಕೊಂಡು ಹೋಗೋವ್ಳಿಗೆ... ಅವ್ಳು ಫ್ರಂಟ್‌ ಕ್ಯಾಮರಾ ಮುಂದೆ ನಿಂತು tempt ಮಾಡಿ ಬಿಡ್ತಾಳೆ, ಅವ್ಳು ಏರಿಸಿದ ಕಾವಲ್ಲಿ ಪಾಪದ ಇವಳು ಬೆಳೆಯುತ್ತಾಳೆ.

ಗಂಡು ಮಕ್ಕಳು ಬಟ್ಟೆ ಮುಟ್ಟಬಾರದು ಅನ್ನಿ ತಪ್ಪಲ್ಲ, ಹಾಗೆ ಒಂದು ಕಡೆ ಇಟ್ಟ ಬಟ್ಟೆ ಮುಟ್ಟಿದರೂ ಅಂತ ಏನ್ ಆಗಬಾರದ್ದು ಏನಾಗಲ್ಲಾ... ಆದ್ರೆ ಅದಕ್ಕಿಂತ ಮೊದಲು ಹೆಣ್ಣು ಮಕ್ಕಳಿಗೆ ಮೈ ತುಂಬಾ ಬಟ್ಟೆ ಹಾಕಿಸಿ ನೋಡೋಣ. ಅನ್ನಿಸಿದ್ದು ಅಲ್ಲ... ಇರೋದನ್ನೆ ಹೇಳ್ದೆ. ಯಾವಳಿಗಾದ್ರು ಎಲ್ಲಾದ್ರೂ ನೋವಾಗಿದ್ರೆ ಆಗ್ಲಿ, ಬೇಜಾರಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!