Nanda Gokula Serial: ಮೀನಾ ಬದುಕಲ್ಲಿ ಹೊಸ ತಿರುವು; ವೀಕ್ಷಕರ ಊಹೆಗೂ ನಿಲುಕದ ಘಟನೆ ನಡೀತು

Published : Nov 20, 2025, 09:42 AM IST
nanda gokula serial

ಸಾರಾಂಶ

Nanda Gokula Kannada Serial: ನಂದಗೋಕುಲ ಧಾರಾವಾಹಿಯಲ್ಲಿ ಮೀನಾ-ಕೇಶವ ಬದುಕಿನಲ್ಲಿ ಹೊಸ ತಿರುವು ಸಿಕ್ಕಿದೆ. ಇಷ್ಟುದಿನದಿಂದ ಮೀನಾ ಕಾಯುತ್ತಿದ್ದ ಕ್ಷಣ ಬಂದಿದೆ. ಹಾಗಾದರೆ ಮುಂದೆ ಏನಾಗುವುದು?

ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ನಂದಗೋಕುಲ’ ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಕ್ಕಿದೆ. ಮೀನಾ-ಕೇಶವ ಬದುಕಿನಲ್ಲಿ ಹೊಸ ಟ್ವಿಸ್ಟ್‌ ಸಿಕ್ಕಿದೆ. ಇಷ್ಟುದಿನಗಳಿಂದ ಮೀನಾ ಬಯಸುತ್ತಿದ್ದ ಕ್ಷಣ ಬಂದಿದೆ. ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಬಂದಿದೆ! ‘ನಂದ ಗೋಕುಲ’ ಧಾರಾವಾಹಿಯಲ್ಲಿ ಇಷ್ಟು ಬೇಗ ಹೀಗೆ ಆಗುತ್ತದೆ ಎಂದು ವೀಕ್ಷಕರು ಅಂದುಕೊಂಡಿರಲಿಲ್ಲ.

ವೈಭವನಿಗೆ ಹೆಣ್ಣು ಹುಡುಕೋ ಶಾಸ್ತ್ರ

ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ಎಂಥ ಹೆಣ್ಣು ಮಗಳು ಎಂದು ನಂದನಿಗೆ ಅರ್ಥ ಆಗುತ್ತದೆ. ವೈಭವನಿಗೆ ಹುಡುಗಿ ಹುಡುಕಬೇಕು ಎಂದು ಮೀನಾ ಬಯಸಿದ್ದಳು. ಅದರಂತೆ ನಂದನ ಕುಟುಂಬ ಹುಡುಗಿ ನೋಡಲು ಹೋಗಿತ್ತು. ಅಲ್ಲಿ ಆ ಮನೆಯವರು ವೈಭವ್‌ನಿಗೆ ಹೊಸ ಮನೆ ಕೊಡಿಸೋದಾಗಿ ಹೇಳಿದ್ದರು. ಇದರಿಂದ ನಂದಕುಮಾರ್‌ ಮನೆ ಇಬ್ಭಾಗ ಆಗುತ್ತಿತ್ತು. ಮನೆಯಿಂದ ಹೊರಗಡೆ ಹೋಗೋದಿಲ್ಲ ಎಂದು ವೈಭವ್‌ ಹೇಳಿ ಆ ಸಂಬಂಧ ಮುರಿದುಕೊಂಡನು. ಇದಕ್ಕೆಲ್ಲ ಮೀನಾ ಕಾರಣ ಎಂದು ಕೇಶವ ಬೈದಿದ್ದನು.

ಇಂಥ ಸೊಸೆ ಸಿಗುತ್ತಿರಲಿಲ್ಲ

ಪತ್ನಿ ಜೊತೆ ಮುನಿಸಿಕೊಂಡಿದ್ದಾನೆ ಎಂದು ನಂದಕುಮಾರ್‌ ಕೂಡ ಬೇಸರ ಮಾಡಿಕೊಂಡಿದ್ದನು, ಕೇಶವನಿಗೆ ಅವನು ಬುದ್ಧಿ ಹೇಳಿದ್ದನು. ಆಮೇಲೆ ಕೇಶವ, ಮೀನಾಗೆ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮೀನಾಗಿಂತ ಒಳ್ಳೆಯ ಸೊಸೆ ನಮಗೆ ಸಿಗೋದಿಲ್ಲ, ನಾವೇ ಹುಡುಕಿದ್ದರೂ ಕೂಡ ಇಂಥ ಸೊಸೆ ಸಿಗುತ್ತಿರಲಿಲ್ಲ ಎಂದು ನಂದಕುಮಾರ್‌, ಕೇಶವನಿಗೆ ಹೇಳಿದ್ದನು. ಕೊನೆಗೂ ಮೀನಾಳನ್ನು ತನ್ನ ಸೊಸೆಯೆಂದು ಒಪ್ಪಿಕೊಂಡು, ಅವಳಿಗೆ ಹೊಸ್ತಿಲು ಶಾಸ್ತ್ರವನ್ನು ನೆರವೇರಿಸುತ್ತಾನೆ.

ನಂದಕುಮಾರ್‌ದು ನಾಟಕವೇ?

ನಂದಕುಮಾರ್‌ ಈ ರೀತಿ ಒಪ್ಪಿಕೊಳ್ಳೋದು ನಿಜಕ್ಕೂ ಮನಸ್ಸಿಟ್ಟು ಮಾಡುವುದೋ? ನಿಜವೋ? ನಾಟಕವೋ? ಎಂದು ಕಾದು ನೋಡಬೇಕಿದೆ. ಇದು ಕಥೆಯಲ್ಲಿ ಮತ್ತೊಂದು ತಿರುವೋ ಎಂಬ ಪ್ರಶ್ನೆ ಬಂದಿದೆ. ಈ ಶಾಸ್ತ್ರವು ಮೀನಾಳಿಗೆ ನಿಜವಾದ ಹೊಸ ಆರಂಭವಾಗುತ್ತದೆಯೇ ಅಥವಾ ಅವಳ ಕುಟುಂಬದೊಳಗೆ ಹೊಸ ಅಪಾಯಗಳನ್ನು ತೆರೆದಿಡುತ್ತದೆಯೇ?

ಈ ಮಹತ್ವದ ವಿಧಿಯ ನಂತರ ನಂದಗೋಕುಲದ ಮನೆಯವರನ್ನು ಯಾವ ಬದಲಾವಣೆಗಳು ಎದುರು ನೋಡುತ್ತಿವೆ? ಎಂದು ಕಾದು ನೋಡಬೇಕಿದೆ.

ಎಲ್ಲವನ್ನೂ ಬದಲಾಯಿಸುವ ಶಕ್ತಿ ಹೊಂದಿರುವ ಡ್ರಾಮಾ, ಭಾವನೆಗಳು ಮತ್ತು ಅಚ್ಚರಿಗಳನ್ನು ತಪ್ಪಿಸಿಕೊಳ್ಳಬೇಡಿ ಕೇವಲ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!