ಆಗ ಊಟಕ್ಕೂ ಪರದಾಟ, ಈಗ ಬಿಗ್​ ಬಾಸ್ ಕಿರೀಟ? ವೋಟಿಂಗ್​ ಲೆಕ್ಕದಲ್ಲಿ ಗಿಲ್ಲಿನೇ ನಂ.1 ಸ್ಪರ್ಧಿ!

Published : Jan 17, 2026, 02:13 PM IST
Gilli

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸ್ಪರ್ಧಿ ಗಿಲ್ಲಿಗೆ ಭರ್ಜರಿ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಾದ್ಯಂತ ಫ್ಯಾನ್ಸ್ ಪ್ರಚಾರ ಮಾಡುತ್ತಿದ್ದು, ಅವರ ಹೋರಾಟದ ಬದುಕು, ಪ್ರಸ್ತುತ ವೋಟಿಂಗ್ ಟ್ರೆಂಡ್ ಗಮನಿಸಿದರೆ, ಗಿಲ್ಲಿಯೇ ಈ ಬಾರಿಯ ವಿನ್ನರ್ ಆಗುವ ಸಾಧ್ಯತೆ ದಟ್ಟವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಭಾನುವಾರ ರಾತ್ರಿ ಈ ಬಾರಿಯ ಬಿಗ್ ಬಾಸ್ ವಿಜೇತ ಯಾರು ಅನ್ನೋದು ಅನೌನ್ಸ್ ಆಗಲಿದೆ. ಈ ಸೀಸನ್​ನುದ್ದಕ್ಕೂ ಸಖತ್ ಮನರಂಜನೆ ಕೊಟ್ಟುಕೊಂಡು ಬಂದಿರೋ ಗಿಲ್ಲಿನೇ ವಿನ್ನರ್ ಆಗಬೇಕು ಅನ್ನೋದು ಬಹುತೇಕ ವೀಕ್ಷಕರ ಆಸೆ. ಆ ಆಸೆ ಈಡೇರುತ್ತಾ? ಗಿಲ್ಲಿ ಸೀಸನ್ 12 ವಿನ್ನರ್ ಆಗ್ತಾನಾ? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ. ಗೆಲ್ತಾನಾ ಹಳ್ಳಿ ಹೈದ?

ಯೆಸ್ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಕ್ಕೆ ಕ್ಷಣಗಣನೆ ಶುರುವಾಗಿದೆ. ಕಿಚ್ಚ ಸುದೀಪ್ ಭಾನುವಾರ ರಾತ್ರಿ ಒಬ್ಬ ಸ್ಪರ್ಧಿಯ ಕೈಯೆತ್ತಿ ಇವರೇ ಈ ಸೀಸನ್ ವಿನ್ನರ್ ಅಂತ ಘೋಷಣೆ ಮಾಡಲಿದ್ದಾರೆ. ಆದ್ರೆ ಸದ್ಯದ ಟ್ರೆಂಡ್ ನೋಡ್ತಾ ಇದ್ರೆ ಗಿಲ್ಲಿ ನಟನೇ ಈ ಬಾರಿ ವಿನ್ನರ್ ಆಗೋದು ಬಹುತೇಕ ಖಚಿತ.

ಹೋರಿ, ಆಟೋಗಳ ಮೇಲೆ ಗಿಲ್ಲಿ ನಟನ ಪಟ!

ಹೌದು ಗಿಲ್ಲಿ ಕ್ರೇಜ್ ಹೇಗಿದೆ ಅಂದ್ರೆ ರಾಜ್ಯದ ನಾನಾ ಕಡೆಗೆ ಗಿಲ್ಲಿ ಫ್ಯಾನ್ಸ್ ಪ್ರಚಾರ ಮಾಡ್ತಾ ಇದ್ದಾರೆ. ಪೋಸ್ಟರ್​​ಗಳನ್ನ ಅಂಟಿಸಿ ಗಿಲ್ಲಿಗೆ ವೋಟ್ ಹಾಕಿ ಅಂತ ಮನವಿ ಮಾಡಿದ್ದಾರೆ. ಹಳ್ಳಿಗಳಲ್ಲಿ ಹೋರಿಗಳ ಮೈಮೇಲೆ ಗಿಲ್ಲಿ ಚಿತ್ರ ಬಿಡಿಸಲಾಗಿದೆ. ಗಿಲ್ಲಿ ಪೋಸ್ಟರ್ ಹೊತ್ತ ಆಟೋಗಳು ಎಲ್ಲೆಡೆ ಓಡಾಡ್ತಾ ಇದೆ. ಅನೇಕರು ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮಂಡ್ಯದಲ್ಲಂತೂ ನೋಡಿದಲ್ಲೆಲ್ಲಾ ಗಿಲ್ಲಿ ಪೋಸ್ಟರ್ಸ್ ರಾರಾಜಿಸ್ತಾ ಇವೆ.

ಬಹುಶಃ ಹಿಂದೆ ಯಾವ ಬಿಗ್ ಬಾಸ್ ಸ್ಪರ್ಧಿಗೂ ಈ ಪರಿಯ ಬೆಂಬಲ ಸಿಕ್ಕಿರಲಿಲ್ಲ. ನಾಡಿನ ಜನತೆ ಒಬ್ಬ ಸ್ಪರ್ಧಿ ಗೆಲ್ಲಬೇಕು ಅಂತ ತೀರ್ಮಾನಿಸಿಬಿಟ್ಟಿದ್ದಾರೆ. ಬಿಗ್ ಬಾಸ್ ಹೇಳಿ ಕೇಳಿ ಜನರ ವೋಟಿಂಗ್ ಮೇಲೆ ನಡೆಯೋ ಶೋ. ಸೋ ಈ ಪರಿ ಜನಬೆಂಬಲ ಇದ್ದಮೇಲೆ ಗಿಲ್ಲಿ ಗೆಲ್ಲೋದು ಬಹುತೇಕ ಖಚಿತ.

ಆಗ ಊಟಕ್ಕೂ ಪರದಾಟ. ಈಗ ಬಿಗ್​ ಬಾಸ್ ಕಿರೀಟ?

ಬಿಗ್ ಬಾಸ್ ಮನೆಯಲ್ಲಿ ಶುಕ್ರವಾರ ಸ್ಪರ್ಧಿಗಳ ಕಷ್ಟದ ದಿನಗಳನ್ನ ಹೇಳಿಕೊಳ್ಳುವ ಅವಕಾಶ ನೀಡಿದ್ದು, ಆಗ ಗಿಲ್ಲಿ ತನ್ನ ಹೋರಾಟದ ದಿನಗಳ ಕಥೆ ಹೇಳಿದ್ದಾನೆ. ಬೆಂಗಳೂರಿನಲ್ಲಿ ತುತ್ತು ಅನ್ನಕ್ಕೆ , ತುಂಡು ಜಾಗಕ್ಕೆ ಕಷ್ಟಪಟ್ಟಿದ್ದನ್ನ ಹೇಳಿದ್ದಾನೆ. ಅನ್ನವನ್ನ ಕದ್ದು ತಿಂದಿದ್ದೇನೆ ಅಂತ ಹೇಳಿ ಭಾವುಕ ಆಗಿದ್ದಾನೆ. ಗಿಲ್ಲಿ ಕಥೆ ಕೇಳಿ ಎಲ್ಲರೂ ಕಣ್ಣೀರಾಗಿದ್ದಾರೆ. ಇದು ಗಿಲ್ಲಿ ಸಿಂಪತಿಗಾಗಿ ಹೇಳಿದ ಕಥೆಯೇನೂ ಅಲ್ಲ. ಗಿಲ್ಲಿ ಮಂಡ್ಯದ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗ. ಇವತ್ತು ಇಷ್ಟು ಜನಪ್ರಿಯತೆಯನ್ನ ಗಿಲ್ಲಿ ಗಳಿಸಿರೋದು ತನ್ನ ಸ್ವಂತ ಪ್ರತಿಭೆಯ ಮೇಲೆ ಅನ್ನೋದು ಅಕ್ಷರಶಃ ಸತ್ಯ.

ಗಿಲ್ಲಿಗೆ ಶಾಲಾ ದಿನಗಳಿಂದಲೂ ಸಿನಿಮಾ ಅಂದ್ರೆ ಭಯಂಕರ ಹುಚ್ಚು. ಕಾಮಿಡಿ ಅಂದ್ರೆ ಪ್ರಾಣ. ಕಾಲೇಜ್‌ಗೆ ಹೋಗಿ ಅಟೆಂಡೆನ್ಸ್ ಹಾಕಿದ್ದಕ್ಕಿಂತ ಸಿನಿಮಾ ಥಿಯೇಟರ್​ಗೆ ವಿಸಿಟ್ ಹಾಕಿದ್ದೇ ಹೆಚ್ಚು. ಊಟಕ್ಕೆ ಅಂತ ಕೊಟ್ಟ ದುಡ್ಡಲ್ಲಿ ಸಿನಿಮಾ ನೋಡ್ತಿದ್ದ ಗಿಲ್ಲಿ, ತಾನು ಬರೆಯಬೇಕು, ಕಾಮಿಡಿ ಸ್ಕ್ರಿಪ್ಟ್ ಮಾಡಬೇಕು, ನಿರ್ದೇಶಕ ಆಗಬೇಕು ಅಂತ ಕನಸು ಕಂಡಿದ್ದ. ಹಾಗೇ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದ. ಅಲ್ಲಿಂದ ಶುರುವಾಗಿದ್ದು ಗಿಲ್ಲಿಯ ಹೋರಾಟದ ದಿನಗಳು.

ಸಿನಿಮಾ, ರಿಯಾಲಿಟಿ ಶೋಗಳ ಸೆಟ್​ ಬಾಯ್ ಕೆಲಸಕ್ಕೆ ಹೋಗ್ತಾ ಇದ್ದ ಗಿಲ್ಲಿ, ಅಲ್ಲಿ ಸಿಕ್ತಾ ಇದ್ದ ಪೇಮೆಂಟ್​ನ ಉಳಿಸಿ ಅದ್ರಲ್ಲಿ ಕಿರುಚಿತ್ರಗಳನ್ನ ಮಾಡ್ತಾ ಇದ್ದ. ಗೆಳೆಯರ ಜೊತೆ ಕುಳಿತು ಸ್ಕ್ರಿಪ್ಟ್ ಮಾಡಿ, ಗೆಳೆಯರ ಗುಂಪನ್ನೇ ಸೇರಿಸಿಕೊಂಡು ನಟನೆ ಮಾಡಿ, ಯುಟ್ಯೂಬ್​ನಲ್ಲಿ ಅಪ್ ಲೋಡ್ ಮಾಡಿ ಗೆಲ್ಲುವ ಕನಸು ಕಾಣ್ತಾ ಇದ್ದ.

ಹೀಗೆ ಯುಟ್ಯೂಬ್​ನಲ್ಲಿ ಕಿರುಚಿತ್ರ ಮಾಡಿ, ಮೊಬೈಲ್​ ಪರದೆಯಲ್ಲೇ ತನ್ನ ಪ್ರತಿಭೆ ತೋರಿಸಿದ ಗಿಲ್ಲಿ ಅಲ್ಲಿಂದ ಕಿರುತೆರೆಗೆ ಎಂಟ್ರಿ ಕೊಟ್ಟ. ಕಾಮಿಡಿ ಕಿಲಾಡಿಗಳು ವೇದಿಕೆಗೆ ಎಂಟ್ರಿ ಕೊಟ್ಟ ಗಿಲ್ಲಿ ಅಲ್ಲಿಂದ ಹಿಂದೆ ತಿರುಗಿ ನೋಡಲಿಲ್ಲ. ಈ ಸಾರಿ ಬಿಗ್​ ಬಾಸ್‌ಗೆ ಬಂದಾಗ ಗಿಲ್ಲಿಯನ್ನ ಯಾರೂ ಅಷ್ಟು ಸೀರಿಯಲ್ ಆಗಿ ತೆಗೆದುಕೊಂಡಿರಲಿಲ್ಲ. ಇವನೊಬ್ಬ ತರ್ಲೆ, ತಮಾಷೆ ಮಾಡೋ ಸಿಲ್ಲಿ ನಟ ಅಂದುಕೊಂಡಿದ್ರು. ಆದ್ರೆ ನೋಡ್ತಾ ನೋಡ್ತಾ ಇಡೀ ಬಿಗ್ ಬಾಸ್ ಅನ್ನೇ ಗಿಲ್ಲಿ ಆವರಿಸಿಕೊಂಡು ಬಿಟ್ಟ.

ವೋಟಿಂಗ್​ ಲೆಕ್ಕದಲ್ಲಿ ಗಿಲ್ಲಿನೇ ನಂ.1 ಸ್ಪರ್ಧಿ..!

ಹೌದು ಹೇಗೆ ನೋಡಿದ್ರೂ ವೋಟಿಂಗ್ ಲೆಕ್ಕಾಚಾರದಲ್ಲಿ ಗಿಲ್ಲಿ ನಂ.1 ಸ್ಥಾನದಲ್ಲಿದ್ದಾನೆ. ಗಿಲ್ಲಿಗೆ ಹೊರಗಿರೋ ಕ್ರೇಜ್ ನೋಡಿದ್ರೆ, ಆತನಿಗೆ ಬರ್ತಿರೋ ವೋಟ್ ಲೆಕ್ಕ ನೋಡಿದ್ರೆ ಕಳೆದ ಸೀಸನ್​ ಹನುಮಂತನಿಗಿಂತ ಹೆಚ್ಚು ವೋಟ್ ಪಡೆದು ಗಿಲ್ಲಿ ಗೆಲ್ಲೋದು ಫಿಕ್ಸ್ ಎನ್ನಲಾಗ್ತಾ ಇದೆ. ಒಟ್ಟಾರೆ ತನ್ನ ಆಟದಿಂದ ಗಿಲ್ಲಿ ಈಗಾಗ್ಲೇ ಗೆದ್ದಾಗಿದೆ. ಇನ್ನೇನಿದ್ರೂ ಭಾನುವಾರ ಕಿಚ್ಚ ಗಿಲ್ಲಿಯ ಕೈ ಎತ್ತೋದು ಮತ್ತು ಗಿಲ್ಲಿ ಟ್ರೋಫಿ ಎತ್ತೋದು ಎರಡೇ ಬಾಕಿ ಇರೋದು!

  • ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿಚ್ಚ ಸುದೀಪ್‌ ಆಸೆಯನ್ನು ಈಡೇರಿಸಿದ Gilli Nata; ಕೊನೆಗೂ BBK 12 ಶೋನಲ್ಲಿ ಅದ್ಭುತವೊಂದು ಸೃಷ್ಟಿಯಾಯ್ತು!
BBK 12: ಕುರುಬ Vs ಗೌಡ: ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ