
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಒಂಟಿಗಳು, ಜಂಟಿಗಳ ಕಾಳಗ ಶುರುವಾಗಿದೆ. ಈ ಆಟ ಶುರುವಾಗಿ ಮೂರು ದಿನಕ್ಕೆ ಫ್ಲರ್ಟ್ ಶುರುವಾಗಿದೆ. ದೊಡ್ಮನೆಯಲ್ಲಿ ಲವ್, ಜಗಳ ಮಾಮೂಲು. ಆದರೆ ಈ ಬಾರಿ ಮೂರನೇ ದಿನಕ್ಕೆ ಫ್ಲರ್ಟ್ ಆರಂಭ ಆಗಿದೆಯಂತೆ. ಅಭಿಷೇಕ್ ಎಲ್ಲ ಹುಡುಗಿಯರ ಜೊತೆ ಫ್ಲರ್ಟ್ ಮಾಡ್ತಿದ್ದಾರೆ ಅಂತ ಅಶ್ವಿನಿ ಅವರು ತಮಾಷೆಯಾಗಿ ಬಿಗ್ ಬಾಸ್‌ಗೆ ದೂರು ಹೇಳಿದ್ದಾರೆ.
ಅಭಿಷೇಕ್ ಶ್ರೀಕಾಂತ್: ಫ್ಲರ್ಟ್ ಮಾಡ್ತಿಲ್ಲ, ಚೆನ್ನಾಗಿರೋದು ಕಾಣಿಸಿದ್ರೆ ಹೇಳ್ತೀನಿ, ಅಷ್ಟೇ. ನಾನು ಫ್ಲರ್ಟ್ ಮಾಡೋಕೆ ಶುರು ಮಾಡಿದ್ರೆ ನಿಂತುಕೊಳ್ಳೋಕೆ ಆಗೋದಿಲ್ಲ.
ಅಶ್ವಿನಿ: ಎಲ್ಲ ಹುಡುಗಿಯರನ್ನು ಬೇಬಿ, ಬಂಗಾರಿ ಅಂತ ಹೇಳುತ್ತಾನೆ. ರಾಶಿಕಾಗೆ ನಿನ್ನ ಸೊಂಟ ವೀಕ್‌ನೆಸ್, ಸ್ಪಂದನಾಗೆ ನಿನ್ ಕಾಲು, ಕಾವ್ಯಗೆ ಕಣ್ಣು ಅಂತ ಹೇಳಿದ್ದಾನೆ. ಜಾನುಗೆ, ನನಗೆ ಇನ್ನೂ ಏನೂ ಹೇಳಿಲ್ಲ.
ಅಭಿಷೇಕ್ ಶ್ರೀಕಾಂತ್: ಬಿಗ್ ಬಾಸ್, ನಾನು ಧನುಗೆ ಕೂಡ ಹೇಳಿದೀನಿ
ಅಶ್ವಿನಿ: ಧನು ಬಿಡಿ..
ಅಭಿಷೇಕ್ ಶ್ರೀಕಾಂತ್: ನೀವೆಲ್ಲ ಎಲ್ಲಿ ನನಗೆ ಬಿದ್ದುಬಿಡ್ತೀರೋ ಏನೋ ಅಂತ..
ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನವೇ ಅಭಿಷೇಕ್ ಅವರು ಅಶ್ವಿನಿಗೆ “ನೀನು ಚೆನ್ನಾಗಿದ್ದೀಯಾ” ಅಂತ ಹೇಳಿದ್ದರು. ಅದಾದ ಮೇಲೆ ರಾಶಿಕಾಗೆ ಅಭಿಷೇಕ್ ಮೇಕಪ್ ಕೂಡ ಮಾಡಿದ್ದರು. ರಾಶಿಕಾ ಹಾಗೂ ಅಭಿಷೇಕ್ ಅವರು ಡ್ರೆಸ್ ಎಕ್ಸ್‌ಚೇಂಜ್, ಚಪ್ಪಲಿ ಅಂತೆಲ್ಲ ಒಂದಿಷ್ಟು ಮಾತುಕತೆ ಆಡಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ನಿಜಕ್ಕೂ ಲವ್ ಆಗಿರುತ್ತದೋ ಅಥವಾ ಹೆಚ್ಚು ದಿನ ದೊಡ್ಮನೆಯಲ್ಲಿ ಇರಬೇಕು ಅಂತ ಈ ರೀತಿ ಆಟ ಆಡ್ತಾರೋ ಗೊತ್ತಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸೆಪ್ಟೆಂಬರ್ 28ರಂದು ಶುರುವಾಗಿದೆ. ರಾಶಿಕಾ ಶೆಟ್ಟಿ, ಕಾಕ್ರೋಚ್ ಸುಧಿ, ಗಿಲ್ಲಿ ನಟ, ಚಂದ್ರಪ್ರಭ, ಡಾಗ್ ಸತೀಶ್, ಧನುಷ್ ಗೌಡ, ಮಂಜುಭಾಷಿಣಿ, ಕಾವ್ಯ ಶೈವ, ಧ್ರುವಂತ್, ಅಶ್ವಿನಿ,ಅಶ್ವಿನಿ ಗೌಡ, ಅಭಿಷೇಕ್ ಶ್ರೀಕಾಂತ್, ಕರಿಬಸಪ್ಪ, ಮಾಳು ನಿಪನಾಳ, ಆರ್‌ಕೆ ಅಮಿತ್, ಸ್ಪಂದನಾ ಸೋಮಣ್ಣ, ಮಲ್ಲಮ್ಮ ಮುಂತಾದವರು ಭಾಗಿಯಾಗಿದ್ದಾರೆ.
ಕಳೆದ ಸೀಸನ್ ಪ್ರಸಾರ ಆಗುವಾಗಲೇ ಕನ್ನಡಕ್ಕೆ ಆದ್ಯತೆ ಕೊಟ್ಟಿಲ್ಲ ಎಂಬ ಬೇಸರದಲ್ಲಿ ನಟ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್ ನಿರೂಪಣೆ ಮಾಡೋದಿಲ್ಲ ಎಂದು ಷರತ್ತು ಹಾಕಿದ್ದರು. ಅದಾದ ನಂತರ ವಾಹಿನಿಯು ಮನವೊಲಿಸಿದ ಬಳಿಕ ಕಿಚ್ಚ ಸುದೀಪ್ ಅವರು ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದರು. ಈ ಶೋ ಶುರುವಾದ ಮೊದಲ ದಿನವೇ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಆದರೆ ರಕ್ಷಿತಾ ಎಲಿಮಿನೇಟ್ ಆಗಿಲ್ಲ, ಸೀಕ್ರೇಟ್ ರೂಮ್‌ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.