
ಬಿಗ್ ಬಾಸ್ ಮನೆಯಲ್ಲಿ ಜಂಟಿಗಳನ್ನು ಅನರ್ಹರು ಎಂದು ಪರಿಗಣಿಸಲಾಗಿದ್ದು, ಅವರನ್ನು ಫೈನಲಿಸ್ಟ್ ಕಂಟೆಂಡರ್ ಆಯ್ಕೆ ಮಾಡುವುದಕ್ಕೆ ಟಾಸ್ಕ್‌ಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಆಟವಾಡಿಸಿದ ಎರಡೂ ಟಾಸ್ಕ್‌ಗಳನ್ನು ಜಂಟಿಗಳ ತಂಡವು ಸೋತಿದ್ದು, ಒಂಟಿಗಳ ತಂಡವು ಗೆದ್ದಿದೆ. ಇದೀಗ ಎಲ್ಲ ಜಂಟಿಗಳು ತಮ್ಮ ದಿನಸಿಗಳನ್ನು ಉಳಿಸಿಕೊಳ್ಳಲು ಹಾಗೂ ಫೈನಲಿಸ್ಟ್ ಕಂಟೆಂಡರ್ ಆಗಲು ಈ ಟಾಸ್ಕ್ ಗೆಲ್ಲುವುದು ಭಾರೀ ಅನಿವಾರ್ಯವಾಗಿದೆ. ಆದರೆ, ಈ ಟಾಸ್ಕ್ ಅನ್ನು ಸೋಲಿಸುವುದಕ್ಕೆ ಸ್ವತಃ ಬಿಗ್ ಬಾಸ್ ಜಂಟಿಗಳ ಪೈಕಿ ಒಂದು ಜೋಡಿಯನ್ನು ಅವರ ವಿರುದ್ಧವಾಗಿಯೇ ಎತ್ತಿಕಟ್ಟಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿರುವ 18 ಜನರ ಪೈಕಿ 6 ಜನ ಒಂಟಿಗಳು ಹಾಗೂ ಇನ್ನು 6 ಜೋಡಿ (12 ಜನ) ಜಂಟಿಗಳಿದ್ದಾರೆ. ಇದೀಗ ಒಂಟಿಗಳು ಮತ್ತು ಜಂಟಿಗಳಿಗೆ ನಡೆಸಲಾಗುತ್ತಿರುವ ಟಾಸ್ಕ್‌ನಲ್ಲಿ ಜಂಟಿಗಳನ್ನು ಸೋಲಿಸುವುದಕ್ಕೆ ಸ್ವತಃ ಅದೇ ಗುಂಪಿನಲ್ಲಿರುವ ಚಂದ್ರಪ್ರಭ ಮತ್ತು ಡಾಗ್ ಸತೀಶ್ ಅವರನ್ನು ನಿಯೋಜನೆ ಮಾಡಲಾಗಿದೆ. ಇದರಲ್ಲಿ ಡಾಗ್ ಸತೀಶ್ ಹಾಗೂ ಚಂದ್ರಪ್ರಭ ಅವರು ಸೇರಿ 3ನೇ ಟಾಸ್ಕ್‌ನಲ್ಲಿ ಜಂಟಿಗಳ ತಂಡವನ್ನು ಸೋಲಿಸುವುದಕ್ಕೆ ಪ್ರಯತ್ನ ಮಾಡಬೇಕು. ಇದರಲ್ಲಿ ಯಶಸ್ವಿಯಾದರೆ ಅವರನ್ನು ಫೈನಲಿಸ್ಟ್ ಕಂಟೆಂಡರ್ ಎಂದು ಪರಿಗಣಿಸಲಾಗುತ್ತದೆ. ಅಂದರೆ, ತಾವಿರುವ ಗುಂಪಿನಲ್ಲಿಯೇ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿಸಲಾಗುತ್ತಿದೆ.
ಈ ಟಾಸ್ಕ್ ಆಟವಾಡುವುದಕ್ಕೂ ಎಲ್ಲ ಜಂಟಿಗಳೂ ಸೇರಿಕೊಂಡು ಈ ಬಾರಿ ನಾವು ಗೆಲ್ಲಲೇಬೇಕು ಎಂದು ಟೀಮ್ ಸ್ಟ್ರಾಟರ್ಜಿ ಮಾಡಿಕೊಂಡು ಬರುತ್ತಾರೆ. ಟಾಸ್ಕ್‌ನಲ್ಲಿರುವಂತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೆಳಭಾಗದಲ್ಲಿ ಕಟ್ಟಲಾಗಿರುವ ಕೀಯನ್ನು ನೀರಿನೊಳಗೆ ಮುಳುಗಿ ಅದನ್ನು ಬಿಚ್ಚಿಕೊಂಡು ಮೇಲೆ ಬಂದು ಅಲ್ಲಿ ಬೀಗ ಹಾಕಲಾಗಿರುವ ಕಂಟೆಸ್ಟೆಂಟ್‌ಗಳ ಕೈಗಳನ್ನು ಬಿಚ್ಚಬೇಕು. ನಾವು ಇದನ್ನು ಆಟವಾಡುತ್ತೇವೆ ಎಂದು ಡಾಗ್ ಸತೀಶ್ ಮತ್ತು ಚಂದ್ರಪ್ರಭ ಜೋಡಿ ಕೂಡ ಮುಂದೆ ಬರುತ್ತಾರೆ. ಆಗ ಇಡೀ ಜಂಟಿಗಳ ತಂಡವು ಇವರ ಮೇಲೆ ಭರವಸೆಯನ್ನಿಟ್ಟು ತಮ್ಮ ಪರವಾಗಿ ಆಟವಾಡುವುದಕ್ಕೆ ಕಳಿಸುತ್ತಾರೆ. ಅಲ್ಲಿ ಚಂದ್ರಪ್ರಭ ಮತ್ತು ಡಾಗ್ ಸತೀಶ್ ಆರಂಭದಲ್ಲಿ ಜೋರಾಗಿ ಓಡಿಬಂದು ಸ್ವಿಮ್ಮಿಂಗ್ ಪೂಲ್‌ಗೆ ಬೀಳುತ್ತಾರೆ. ಆದರೆ, ಸ್ವಿಮ್ಮಿಂಗ್ ಪೂಲ್‌ನ ಕೆಳಭಾಗದಲ್ಲಿ ಕಟ್ಟಿದ ವಸ್ತುವನ್ನು ಬಿಚ್ಚಿಕೊಳ್ಳದೇ ನಾಟಕವನ್ನು ಮಾಡುತ್ತಾ ಸಮಯ ಹಾಳು ಮಾಡುತ್ತಾರೆ. ಈ ಮೂಲಕ ತಂಡ ಸೋಲಿಗೆ ಕಾರಣವಾಗುತ್ತಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈ ಬಾರಿಯ ಮುಖ್ಯ ಉದ್ದೇಶವೇ ಎಕ್ಸ್‌ಪೆಕ್ಸ್ ದಿ ಅನ್ ಎಕ್ಸ್‌ಪೆಕ್ಟೆಡ್ (Expect the Unepected) ಎಂಬುದಾಗಿದೆ. ಈ ಹಿನ್ನೆಲೆಯಲ್ಲು ಜಂಟಿಗಳ ತಂಡದಲ್ಲಿ ಒಂದು ಜೋಡಿ ಆಗಿರುವ ಚಂದ್ರಪ್ರಭ ಹಾಗೂ ಡಾಗ್ ಸತೀಶ್ ಅವರು ತಮ್ಮದೇ ತಂಡದ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡುತ್ತಿದ್ದಾರೆ. ಇವರ ಕುತಂತ್ರವನ್ನು ಅರಿಯದ ಇಡೀ ಜಂಟಿಗಳ ತಂಡವು ತಮ್ಮ ಪ್ರತಿನಿಧಿಗಳಾಗಿ ಕಳಿಸಿದ ನಂತರ ಇವರು ಮಾಡುವ ಮೋಸವನ್ನು ಕೂಡ ಅರಿಯುವುದಿಲ್ಲ. ಆದರೆ, ತಮಗೆ ಕೊಟ್ಟ ಟಾಸ್ಕ್‌ನಲ್ಲಿ ಇಬ್ಬರೂ ಯಶಸ್ವಿಯಾದರೂ, ಇಡೀ ತಂಡದ ಸೋಲಿಗೆ ಕಾರಣವಾಗುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.