
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಆರು ವಾರಗಳು ಕಳೆದಿವೆ. ಈಗಾಗಲೇ ಈ ಮನೆಯಲ್ಲಿ ಎರಡು ಗುಂಪು ರೆಡಿಯಾಗಿದೆ. ಈಗ ಗಿಲ್ಲಿ ನಟನನ್ನು ಇನ್ನೊಂದು ಗುಂಪು ಟಾರ್ಗೆಟ್ ಮಾಡಿದೆ.
ಈ ವಾರ ಕಳಪೆ ಯಾರು? ಉತ್ತಮ ಯಾರು? ಎಂಬ ಪ್ರಶ್ನೆ ಎದುರಾಗಿತ್ತು. ಆ ವೇಳೆ ಧ್ರುವಂತ್ ಅವರು, “ಗಿಲ್ಲಿ ನಟ, ಅವರು ಹಾಗೂ ಅವರ ಕಾವ್ಯ ಬಗ್ಗೆ ಬಿಟ್ಟು ಬೇರೆ ಎಲ್ಲರನ್ನು ತಮಾಷೆ ಮಾಡುತ್ತಾರೆ” ಎಂದು ಹೇಳಿದ್ದರು.
ಇದು ಕಾವ್ಯ ಶೈವಗೆ ಸಿಟ್ಟು ತರಿಸಿದೆ. “ಅವರ ಕಾವ್ಯ ಅನ್ನೋದು ಬೇಡ” ಎಂದು ಹೇಳಿದ್ದಾರೆ. ಆಗ ಧ್ರುವಂತ್ ಅವರು, “ನನ್ನ ಅಭಿಪ್ರಾಯ” ಎಂದಿದ್ದಾರೆ. ಕಾವ್ಯ ಅವರು, “ಬೇರೆಯವರ ಕ್ಯಾರೆಕ್ಟರ್ ಬಗ್ಗೆ ಮಾತನಾಡಬೇಡಿ, ನಾನು ಬೇರೆ ಥರ ಮಾತಾಡ್ತೀನಿ” ಎಂದು ಹೇಳಿದ್ದಾರೆ. ಆಗ ಧ್ರುವಂತ್ ಅವರು, “ನನ್ನ ವಿಷಯ ಬಂದಾಗ ನನ್ನ ಬಗ್ಗೆ ಮಾತನಾಡು, ಕಾವ್ಯ ಬಗ್ಗೆ ಬೇಡ” ಎಂದು ಹೇಳಿದ್ದಾರೆ.
ಇನ್ನು ರಿಷಾ ಗೌಡ ಕೂಡ, “ಕಾವ್ಯ ಬಿಟ್ಟು ನಿನಗೆ ಬೇರೆ ಏನಾದರೂ ಗೊತ್ತಾ?” ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಧ್ರುವಂತ್ ವಿರುದ್ಧ ಕಾವ್ಯ ಶೈವ, ಗಿಲ್ಲಿ ನಟ ಜಗಳ ಆಡಿದ್ದಾರೆ.
ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಗೌಡ, ಧ್ರುವಂತ್, ಕಾಕ್ರೋಚ್ ಸುಧಿ ಒಂದು ಗುಂಪಾಗಿದ್ದಾರೆ. ಇಲ್ಲಿ ರಾಶಿಕಾ ವಿಷಯ ಬಂದರೆ ಅಲ್ಲಿ ಸೂರಜ್ ಎಂಟ್ರಿ ಆಗುವುದು. ಜಾಹ್ನವಿ ಕೂಡ ಅಶ್ವಿನಿ ಪರವಾಗಿಯೇ ಇದ್ದಾರೆ.
ಧ್ರುವಂತ್‌ನನ್ನು ಅರ್ಥ ಮಾಡಿಕೊಳ್ಳೋಕೆ ಆಗೋದಿಲ್ಲ, ಮಲ್ಲಮ್ಮ ಇದ್ದಾಗ ಇಡೀ ದಿನ ಅವರ ಜೊತೆ ಇದ್ದು ಯೂಸ್ ಮಾಡಿಕೊಂಡರು, ಅವರು ಹೋದ್ಮೇಲೆ ಮಲ್ಲಮ್ಮನ ಹೆಸರು ಹೇಳಲೇ ಇಲ್ಲ. ಯಾವ ವಿಚಾರದಲ್ಲಿಯೂ ವಾದ ಮಾಡೋದಿಲ್ಲ, ಸ್ಟ್ಯಾಂಡ್ ತಗೊಳೋದಿಲ್ಲ ಎಂದು ಗಿಲ್ಲಿ ನಟ ನೇರವಾಗಿ ಹೇಳಿದ್ದರು. ಆಗಲೂ ಕೂಡ ಧ್ರುವಂತ್, “ಗಿಲ್ಲಿ ಬರೀ ಕಾವ್ಯ ಅಂತ ಹೇಳ್ತಾರೆ, ಬೇರೆಯವರನ್ನು ಅಣುಕಿಸಿ ಮಾತಾಡ್ತಾರೆ” ಎಂದು ಹೇಳಿದ್ದರು.
ಧ್ರುವಂತ್ ಆಗಾಗ ಮಾತನಾಡುತ್ತಾರೆ, ಇನ್ನೊಮ್ಮೆ ಅಳುತ್ತಾರೆ, ಮತ್ತೊಮ್ಮೆ ಒಂದು ಅಕ್ಷರವೂ ಮಾತನಾಡೋದಿಲ್ಲ. ಹೀಗಾಗಿ ಇವರ ಕ್ಯಾರೆಕ್ಟರ್ ಏನು ಎನ್ನೋದು ಸೂರಜ್‌ಗೂ ಕೂಡ ಅರ್ಥ ಆಗಿಲ್ವಂತೆ. ಧ್ರುವಂತ್‌ನನ್ನು ಅರ್ಥ ಮಾಡಿಕೊಳ್ಳೋದು ಕಷ್ಟ, ನಮ್ಮ ತಲೆ ಹಾಳಾಗತ್ತೆ ಎನ್ನುವ ಅರ್ಥದಲ್ಲಿ ಗಿಲ್ಲಿ ನಟ ಅವರು ಸೂರಜ್‌ಗೆ ಹೇಳಿದ್ದರು.
ಒಟ್ಟಿನಲ್ಲಿ ಈ ವಾರ ಕಳಪೆ ಯಾರು? ಉತ್ತಮ ಯಾರು ಎಂದು ಕಾದು ನೋಡಬೇಕಿದೆ. ಈ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಕ್ಲಾಸ್ ತಗೋತಾರಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.