ಅದೊಂದು ತಪ್ಪು ಮಾಡಿ Bigg Boss ಟ್ರೋಫಿಯಿಂದ ದೂರ ಆಗ್ತಿದ್ದಾರಾ Ashwini Gowda? ಕಂಪೆನಿ HR ಏನಂತಾರೆ?

Published : Jan 05, 2026, 03:23 PM IST
Ashwini Gowda Bigg boss

ಸಾರಾಂಶ

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಅಶ್ವಿನಿ ಗೌಡ ಅವರು ಕೆಲವೊಮ್ಮೆ ಜನರ ಹೃದಯ ಗೆದ್ದರೆ, ಇನ್ನೂ ಕೆಲವೊಮ್ಮೆ ಹೃದಯವನ್ನು ಕಳೆದುಕೊಳ್ತಾರೆ. ಹೀಗೆ ಆಗುತ್ತಿರೋಕೆ ಕಾರಣ ಏನು? ನಿಜಕ್ಕೂ ಅವರ ಆಟ ಹೇಗಿದೆ? ಕಂಪೆನಿ HR ಹೇಳಿದ್ದೇನು? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12  ಶೋ ಸ್ಪರ್ಧಿ ಅಶ್ವಿನಿ ಗೌಡ ಆಟದ ಬಗ್ಗೆ ಖಾಸಗಿ ಕಂಪೆನಿ HR ಆಗಿರುವ ಸಂಕೇತ್‌ ರಾಮಮೂರ್ತಿ ಅವರು ಬರೆದ ಬರಹ ಇಲ್ಲಿದೆ.

ಬಿಗ್‌ ಬಾಸ್‌ ಶೋನಲ್ಲಿ ಅಶ್ವಿನಿ ಗೌಡ ಅವರನ್ನು ನೋಡಿದಾಗ ನಾನು HR ವೃತ್ತಿಪರನಾಗಿ ಅವರಲ್ಲಿ ಎರಡು ವ್ಯಕ್ತಿಗಳನ್ನು ನೋಡುತ್ತೇನೆ… ಒಬ್ಬರು – ಹೃದಯ ಗೆಲ್ಲುವವರು. ಇನ್ನೊಬ್ಬರು – ಒಂದು ಕ್ಷಣದಲ್ಲಿ ಅದೇ ಹೃದಯವನ್ನು ಕಳೆದುಕೊಳ್ಳುವವರು.

ಬಿಗ್‌ ಬಾಸ್‌ ನಮಗೆ ಮನರಂಜನೆ ನೀಡುವುದು ಆದರೆ ಅಶ್ವಿನಿ ಅವರು HR ಪಾಠಗಳನ್ನು ಕೂಡ ಕೊಡ್ತಿದ್ದಾರೆ. ನಾನು ಅವರ ವರ್ತನೆಯನ್ನು ಯಾವಾಗಲೂ ಗಮನಿಸುತ್ತೇನೆ. ಅದರಲ್ಲೇ ಅವರ ಅತಿ ದೊಡ್ಡ ಶಕ್ತಿ ಕೂಡ ಇದೆ, ದೊಡ್ಡ ರಿಸ್ಕ್‌ ಕೂಡ ಇದೆ. ಒಂದು ಕಡೆ, ಅವರು ಜನರ ಮನಗೆಲ್ಲುವ ಮಾನವೀಯತೆ ತೋರಿಸುತ್ತಾರೆ. ಮತ್ತೊಂದು ಕಡೆ, ಕೋಪ ಹೆಚ್ಚಾದಾಗ ಮಾತಿನ ಆಯ್ಕೆಯೇ ಅವರ ಇಮೇಜ್‌ಗೆ ಹಾನಿ ಮಾಡುತ್ತದೆ.

ಉದ್ದೇಶ ಒಳ್ಳೆಯದಿದ್ದರೂ, impact ತಪ್ಪಾದರೆ ದೃಷ್ಟಿಕೋನ ಬದಲಾಗುತ್ತದೆ.

1) ಅಶ್ವಿನಿ ಗೌಡ ಅವರ Positive Shade – “Observation + Empathy”

ಅಶ್ವಿನಿ ಅವರು ಜನರನ್ನು ಓದುವ ಶಕ್ತಿ ಹೊಂದಿದ್ದಾರೆ. ಜಾಹ್ನವಿ ಜೊತೆಗೆ ಅವರ ಬಾಂಧವ್ಯ ನಿಜವಾಗಿತ್ತು. ಜಾನವಿ ಎಲಿಮಿನೇಟ್ ಆಗುವಾಗ ಅಶ್ವಿನಿ ಅವರು ಕಣ್ಣೀರು ಹಾಕಿದ ಕ್ಷಣ, ಅವರೊಳಗಿನ ಸಹಾನುಭೂತಿ ಮತ್ತು ಸಂಬಂಧಗಳ ಮೌಲ್ಯ ಸ್ಪಷ್ಟವಾಯಿತು.

ನಿನ್ನೆ ಸುದೀಪ್ ಅವರ ವೀಕೆಂಡ್‌ ಎಪಿಸೋಡ್‌ನಲ್ಲಿ ಗಿಲ್ಲಿಯೊಂದಿಗೆ ಅವರ ನಡುವಲ್ಲಿ ಹಲವು ಜಗಳಗಳು ಇದ್ದರೂ, ಅವರು ಗಿಲ್ಲಿಯ ಬಗ್ಗೆ ಒಳ್ಳೆಯ ಮಾತು ಹೇಳಿದ್ದು ಪರಿಪಕ್ವ ಗ್ರಹಿಕೆ ಎಂದು ನನಗೆ ಅನಿಸಿತು.

HR ದೃಷ್ಟಿಯಿಂದ ಇದು:

Fair assessment, emotional intelligence, maturity in feedback.

2) Negative Shade – “Temper + Choice of Words”

ಆದರೆ ಅಶ್ವಿನಿ ಅವರು ತಾಳ್ಮೆ ಕಳೆದುಕೊಂಡಾಗ, ಮಾತಿನ ಶೈಲಿ ಕೆಲ ಸಂದರ್ಭಗಳಲ್ಲಿ ಅತ್ಯಂತ ತೀವ್ರವಾಗಿ ಹೊರಬರುತ್ತದೆ.

ನಿನ್ನೆ ಎಪಿಸೋಡ್‌ನಲ್ಲಿ ರಾಶಿಕಾ ಶೆಟ್ಟಿ ಕುರಿತು ಟ್ರ್ಯಾಕ್ ವಿಚಾರವಾಗಿ ಮಾತನಾಡಿದಾಗ, ಅದರ tone ವ್ಯಕ್ತಿಗತವಾಗಿ ಹೋಗಿದಂತೆ ಅನಿಸಿತು. ವಿಶೇಷವಾಗಿ ಮಹಿಳಾ ವಿಚಾರಗಳಲ್ಲಿ ಮಾತನಾಡುವ ವ್ಯಕ್ತಿಯಿಂದ, ಇನ್ನೊಬ್ಬ ಮಹಿಳೆಯ ಕ್ಯಾರೆಕ್ಟರ್‌ಗೆ ತಾಕುವ ರೀತಿಯ ಮಾತು ಬಂದಾಗ, ಅದು ವೀಕ್ಷಕರಿಗೆ ಸರಿ ಅನಿಸೋದಿಲ್ಲ. ಡಿಗ್ನಿಟಿ, ಗೌರವಯುತ ಕೆಲಸದ ಸಂಸ್ಕೃತಿ, ಕಮ್ಯುನಿಕೇಶನ್‌ ಬೌಂಡರಿ ವಿರುದ್ಧವಾಗುತ್ತದೆ.

ಅಶ್ವಿನಿ ಅವರು ಬಹಳ ಬಾರಿ ಜನರ ಮನ ಗೆಲ್ಲುವುದು ಅವರ ವರ್ತನೆಗಳ ಮೂಲಕ. ಆದರೆ ಕೆಲ ಸಂದರ್ಭಗಳಲ್ಲಿ, ಕೋಪ ಮತ್ತು ಶಬ್ದಗಳ ಮೂಲಕ ಅದೇ ನಂಬಿಕೆ ಕಡಿಮೆಯಾಗುತ್ತದೆ. ಅಶ್ವಿನಿ ಅವರು ವ್ಯಕ್ತಿಯಾಗಿ ಒಳ್ಳೆಯವರು. ಆದರೆ ಕೆಲ ಕ್ಷಣಗಳಲ್ಲಿ ಅವರ ಶಬ್ದಗಳು, ಅವರು ಯಾರು ಅನ್ನೋದನ್ನು ಪ್ರತಿನಿಧಿಸುವುದಿಲ್ಲ. Emotional Intelligence ಎಂದರೆ ಕೇವಲ empathy ಅಲ್ಲ, ಕೋಪದಲ್ಲಿ ಸರಿಯಾಶ ಶಬ್ದಗಳ ಆಯ್ಕೆ ಮಾಡುವ ಕೌಶಲವಾಗಿದೆ.

ಲೀಡರ್‌ಶಿಪ್ ಎಂದರೆ ಧೈರ್ಯ ಮಾತ್ರ ಅಲ್ಲ, ಗೌರವವನ್ನು ಮೆಂಟೇನ್‌ ಮಾಡಿ ಒಪ್ಪದೆ ಇರುವ ಕ್ಯಾಪೆಸಿಟಿಯಾಗಿದೆ.

ನಿಮ್ಮ ಅಭಿಪ್ರಾಯ?

ಅಶ್ವಿನಿ ಅವರು ವರ್ತನೆಗಳ ಮೂಲಕ ಜನರ ಮನ ಗೆಲ್ಲುತ್ತಾರೆ… ಆದರೆ ಶಬ್ದಗಳು ಅವರ ಪಾಸಿಟಿವ್‌ ವ್ಯಕ್ತಿತ್ವವನ್ನು overshadow ಮಾಡುತ್ತಿವೆಯೇ?

ಏನು ಅನಿಸುವುದು?

ಮಾಡುವ ಕೆಲಸ ಸ್ಟ್ರಾಂಗ್‌ ಇದ್ದರೂ ಕೂಡ, ಶಬ್ದಗಳು ತಪ್ಪಾದರೆ ದೃಷ್ಟಿಕೋನ ಉಳಿಯುತ್ತದೆಯೇ?

“ಅಶ್ವಿನಿ ಗೌಡ, ಗೌರವದಿಂದಲೇ ನಾನು ಇದನ್ನು ಬರೆಯುತ್ತಿದ್ದೇನೆ.”

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ರಾಶಿಕಾ ಶೆಟ್ಟಿಗೆ ಒರಗಿಕೊಳ್ಳೋಕೆ ರಘು ತೊಡೆ, ಎದೆ ಬೇಕು: ಎಡವಟ್ಟು ಮಾಡ್ಕೊಂಡ Ashwini Gowda
BBK 12 ರಘು ಹಾಕಿದ ಚಾಲೆಂಜ್ ಸ್ವೀಕಾರ ಮಾಡ್ತಾರಾ ಧ್ರುವಂತ್? ಚೆಂಡಾಟದಲ್ಲಿ ಸಿಡಿಗುಂಡು ಸ್ಪೋಟ