
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರು ಕೆಲವೊಮ್ಮೆ ಬಳಸುವ ಪದಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಆಗುತ್ತವೆ, ಚರ್ಚೆ ಆಗುತ್ತವೆ. ಇನ್ನೇನು ವೀಕ್ಷಕರು ಅಶ್ವಿನಿ ಗೌಡ ಅವರನ್ನು ಜನರು ಹೊಗಳಲು ಆರಂಭಿಸಿದ್ದಾರೆ ಎನ್ನುವಾಗಲೇ ರಾಶಿಕಾ ಶೆಟ್ಟಿ ವಿರುದ್ಧ ಮತ್ತೆ ಮಾತನಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಲೆ ಎಬ್ಬಿಸಿದೆ.
ಈ ಹಿಂದೆ ಕೂಡ ಅವರು ರಕ್ಷಿತಾಗೆ ಎಸ್ ಪದ ಬಳಸಿದ್ದು ದೊಡ್ಡ ಚರ್ಚೆಯಾಗಿತ್ತು. ಆಮೇಲೆ ರಕ್ಷಿತಾ ಅವರು ಬೇರೆಯವರ ಜೊತೆ ಅಂಟಿಕೊಂಡು ಕೂರುತ್ತಾರೆ ಎಂದು ಹೇಳಿದ್ದರು. ಕಿಚ್ಚ ಸುದೀಪ್ ಅವರು ಈ ಬಗ್ಗೆ ಕಿವಿ ಹಿಂಡಿದ್ದೂ ಇದೆ.
“ರಕ್ಷಿತಾ ಅಂದುಕೊಂಡಷ್ಟು ಮುಗ್ಧೆ ಅಲ್ಲವೇ ಅಲ್ಲ, ರಕ್ಷಿತಾ ಬೇರೆಯವರಿಗೆ ಡ್ರಾಮಾ ಅಂತ ಹೇಳ್ತಾಳೆ, ಆದರೆ ಇವರು ಡ್ರಾಮಾ ಕಂಪೆನಿಗೆ ತಂದೆ ಅಲ್ಲ, ಮುತ್ತಾತ. ರಕ್ಷಿತಾಳ ಕುತಂತ್ರ, ಚೇಷ್ಟೆ ಎಲ್ಲರಿಗೂ ಅರ್ಥ ಆಗುವುದು ಎಂದಾಗ ಒಬ್ಬೊಬ್ಬರನ್ನು ಟಾರ್ಗೆಟ್ ಮಾಡುತ್ತಾಳೆ. ಅಲ್ಲಿ ಅವರ ಕೈ ಹಿಡಿದುಕೊಳ್ಳೋದು, ಅಂಟಿಕೊಂಡು ಕೂರೋದು ಮಾಡ್ತಾಳೆ. ನಾವು 25ನೇ ವಯಸ್ಸಿನಲ್ಲಿ ಮಕ್ಕಳ ಥರ ಅಂಟಿಕೊಂಡು ಕೂರಲಿಲ್ಲ. ನಿನ್ನ ವಯಸ್ಸಿನ ಬೇರೆ ಮಕ್ಕಳು ಕೂಡ ಈ ಶೋವನ್ನು ನೋಡ್ತಾರೆ” ಎಂದು ಅಶ್ವಿನಿ ಗೌಡ ಹೇಳಿದ್ದರು.
ಧ್ರುವಂತ್ ಅವರು ಕೂಡ ರಕ್ಷಿತಾಗೆ ಅಸಹ್ಯ, ಗಲೀಜು, ಹಲ್ಲುಜ್ಜಲ್ಲ ಎಂದು ಹೇಳಿದ್ದರು. ರಕ್ಷಿತಾ ಕೂಡ ಈ ಬಗ್ಗೆ ಸಿಡಿದೆದ್ದಿದ್ದರು.
ಈಗ ಪಂಚಿಂಗ್ ಬ್ಯಾಗ್ ಟಾಸ್ಕ್ ಕೊಟ್ಟಾಗ, ಅಶ್ವಿನಿ ಗೌಡ ಅವರು “ರಾಶಿಕಾ ಶೆಟ್ಟಿ ನಿನ್ನನ್ನು ನೀಣು ಮಿಸ್ ಯುನಿವರ್ಸ್ ಅಂದುಕೊಂಡಿದ್ದೀಯಾ? ಇನ್ನೊಂದು ಟ್ರ್ಯಾಕ್, ಮತ್ತೊಂದು ಟ್ರ್ಯಾಕ್ ಅಂತ ನಾನು ಶುರು ಮಾಡಿಕೊಂಡಿಲ್ಲ. ನಿನಗೆ ನಿಯತ್ತು ಇಲ್ಲ ಅನ್ನೋದಿಕ್ಕೆ ಸೂರಜ್ ವಿಷಯವೇ ಕಾರಣ. ನಿನಗೆ ಒರಗಿಕೊಳ್ಳೋಕೆ ರಘು ತೊಡೆ, ಎದೆ ಬೇಕು. ನನಗೆ ಅವಶ್ಯಕತೆ ಇಲ್ಲ, ನಾನು ಬೇರೆಯವರಿಗೆ ಹೆಗಲಾಗಿರುವೆ” ಎಂದು ಹೇಳಿದ್ದರು.
ಅಶ್ವಿನಿ ಗೌಡ ಅವರು ಈ ರೀತಿ ಮಾತನಾಡುತ್ತಿರೋದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಅಶ್ವಿನಿ ಗೌಡ ಅವರು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಬಗ್ಗೆ ಮಾತನಾಡೋದು ಸರಿ ಅಲ್ಲ. ಅದರಲ್ಲಿಯೂ ರಕ್ಷಿತಾ ಅವರಾಗಲೀ, ರಾಶಿಕಾ ಶೆಟ್ಟಿ ಆಗಲೀ ರಘು ಅವರನ್ನು ಅಣ್ಣಾ ಎಂತಲೇ ಕರೆಯುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.