BBK 12, Exclusive video: ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳ ದೃಶ್ಯ

Published : Oct 07, 2025, 09:17 PM IST
Bigg Boss Kannada contestants evicted

ಸಾರಾಂಶ

Bigg Boss Kannada contestants evicted: ಬಿಗ್‌ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳನ್ನು ಹೊರಕಳುಹಿಸಲಾಗಿದೆ. ಪೊಲೀಸರ ಸಮ್ಮುಖದಲ್ಲಿ ಮನೆಗೆ ಬೀಗ ಹಾಕಲಾಗಿದ್ದು, ಸ್ಪರ್ಧಿಗಳನ್ನು ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಎರಡು-ಮೂರು ದಿನಗಳಲ್ಲಿ ಶೋ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ.

 

ಬೆಂಗಳೂರು: ಬಿಗ್‌ಬಾಸ್ ಮನೆಯಿಂದ ಎಲ್ಲಾ 17 ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿರುವ ಎಕ್ಸ್‌ಕ್ಲೂಸಿವ್ ದೃಶ್ಯ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಬಿಗ್‌ಬಾಸ್ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಹೊರಗಡೆ ಏನು ನಡೆಯುತ್ತಿದೆ ಎಂಬುದರ ಮಾಹಿತಿಯೇ ಇರಲಿಲ್ಲ. ಎಲ್ಲಾ ಸ್ಪರ್ಧಿಗಳನ್ನು ಒಂದೆಡೆ ಸೇರಿಸಿ ಬಿಗ್‌ಬಾಸ್ ಆಡಳಿತ ಸಿಬ್ಬಂದಿ ಮತ್ತು ಪೊಲೀಸರು ಮಾಲಿನ್ಯ ಮಂಡಳಿ ನೋಟಿಸ್ ಬಂದಿರುವ ಮಾಹಿತಿ ನೀಡಿದ್ದಾರೆ. ಪೊಲೀಸರೇ ನಿಂತು ಎಲ್ಲಾ ಸ್ಪರ್ಧಿಗಳನ್ನು ಹೊರಗಡೆ ಕಳುಹಿಸಿ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದಾರೆ. ಸ್ಪರ್ಧಿಗಳು ಮನೆಯಿಂದ ಬೇಸರದಿಂದ ಹೊರ ಬರುತ್ತಿರುವ ವಿಡಿಯೋ ಈ ಕೆಳಗೆ ನೀಡಲಾಗಿದೆ.

ಗೌಪ್ಯ ಸ್ಥಳಕ್ಕೆ ಸ್ಪರ್ಧಿಗಳು

ಬಿಗ್‌ಬಾಸ್ ಸ್ಪರ್ಧಿಗಳು ಸುಮಾರು 10 ಕಾರುಗಳಲ್ಲಿ ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಈ ಸಂಬಂಧ ಸ್ಪರ್ಧಿಗಳ ಕುಟುಂಬಗಳಿಗೆ ಬಿಗ್‌ಬಾಸ್ ಮ್ಯಾನೇಜ್‌ಮೆಂಟ್ ಮಾಹಿತಿಯನ್ನು ನೀಡಿದೆ. ಮಾಧ್ಯಮಗಳಿಗೆ ಮಾಹಿತಿ ತಿಳಿಯಬಾರದು ಎಂಬ ಉದ್ದೇಶದಿಂದ ಕಾರುಗಳು ಬೇರೆ ಬೇರೆ ಮಾರ್ಗದಲ್ಲಿ ಹೋಗಿವೆ. ಕಾರ್ ವಿಂಡೋಗಳಿಗೆ ಕಪ್ಪು ಬಟ್ಟೆಯನ್ನು ಹಾಕಲಾಗಿದೆ.

ಎರಡು ದಿನದಲ್ಲಿ ಮತ್ತೆ ಆರಂಭಿಸುವ ಸಂದೇಶ

ನ್ಯಾಯಾಲಯದಿಂದ  ಅನುಮತಿ ಪಡೆದುಕೊಂಡು  ಎರಡು ಅಥವಾ ಮೂರು ದಿನಗಳಲ್ಲಿ ಮತ್ತೆ ಶೋ ಆರಂಭಿಸುವ ಸಂದೇಶವನ್ನು ಬಿಗ್‌ಬಾಸ್ ಅಡಳಿತ ಮಂಡಳಿ ರವಾನಿಸಿದೆ. ಸ್ಪರ್ಧಿಗಳನ್ನು  ಕರೆದುಕೊಂಡು ಹೋಗುತ್ತಿದ್ದ ಕಾರ್ ಮೈಸೂರು ಹೆದ್ದಾರಿಯಲ್ಲಿ ಪಂಚರ್ ಆಗಿದೆ.

ಇದನ್ನೂ ಓದಿ: ಅತಿದೊಡ್ಡ ರಿಯಾಲಿಟಿ ಶೋಗೆ ಬೀಗ: ಬಿಗ್‌ಬಾಸ್ ಕಣ್ಣಿಗೆ ಮಣ್ಣೆರಚಿತಾ ಜಾಲಿವುಡ್ ಸ್ಟುಡಿಯೋ?

ಇದನ್ನೂ ಓದಿ: 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!