ಗುಂಡಣ್ಣನ ಕನಸು ನಿಜ ಆಗುವುದೇ, ನಿಜ ಆಗೋದಕ್ಕೆ ಶ್ರೇಷ್ಠ ಬಿಡುವಳೇ; ಭಾಗ್ಯಲಕ್ಷ್ಮೀಗೆ ಪಾನಿಪುರಿ ಯೋಗ ಇದ್ಯಾ?

By Shriram Bhat  |  First Published Nov 16, 2023, 2:50 PM IST

ತಾಂಡವ್ ಎದುರೇ ಇರುವ ಚಾನ್ಸ್ ಸಿಕ್ಕಿರುವುದರಿಂದ ಶ್ರೇಷ್ಠಾ ಖುಷಿಯಾಗಿದ್ದಾಳೆ. ಅಷ್ಟೇ ಅಲ್ಲ, ತಾನು ಯೋಜಿಸಿದಂತೆ ಪ್ಲಾನ್ ಪ್ರಕಾರವೇ ಎಲ್ಲಾ ನಡೆಯುತ್ತಿದೆ  ಎಂಬ ಭ್ರಮೆಯಲ್ಲಿ ಆಕೆ ತೇಲಾಡುತ್ತಿದ್ದಾಳೆ. ಆದರೆ, ತಾಂಡವ್ ಪರಿಸ್ಥಿತಿ ಮಾತ್ರ ಅಲ್ಲೋಲಕಲ್ಲೋಲ ಎಂಬಂತಾಗಿ ಆತ ಬಗೆಬಗೆಯಲ್ಲಿ ಪರಿತಪಿಸುತ್ತಿದ್ದಾನೆ. 


ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಹೊಸ ಹೊಸ ತಿರುವುಗಳ ಮೂಲಕ ವೀಕ್ಷಕರಿಗೆ ಹೊಸತನ ನೀಡುತ್ತಿದೆ ಎನ್ನಬಹುದು. ಶ್ರೇಷ್ಠಾ ತಾಂಡವ್ ಆಫೀಸ್‌ನಲ್ಲಿ ಪ್ರಾಜೆಕ್ಟ್ ಕೋ-ಮ್ಯಾನೇಜರ್ ಆದ ಬಳಿಕ ತಾಂಡವ್ ಮನಸ್ಥಿತಿಯನ್ನು ಊಹಿಸಲೂ ಅಸಾಧ್ಯ ಎನ್ನುವಂತಾಗಿದೆ. ಮನೆಯಿಂದ ಹೇಗೋ ಹೊರಹೋಗಿದ್ದ ಶ್ರೇಷ್ಠಾ, ಈಗ ತಾಂಡವ್ ಎದುರು ಆಫೀಸಿನಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಸದ್ಯ ತಾಂಡವ್ ಪರಿಸ್ಥಿತಿ ಹೇಗಿದೆ ಎಂದರೆ 'ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ' ಎಂಬಂತಾಗಿದೆ. ಶ್ರೇಷ್ಠಾ ತಾಂಡವ್ ಎದುರು ಆಫೀಸಿನಲ್ಲಿ ವಕ್ಕರಿಸಿರುವುದು ಮನೆಯವರಿಗೆ ಗೊತ್ತಿಲ್ಲ ಎಂಬ ನೆಮ್ಮದಿಯಷ್ಟೇ ತಾಂಡವ್ ಪಾಲಿಗೆ!

ಆದರೆ, ಮನೆಯಲ್ಲಿ ಗುಂಡಣ್ಣ ಕನಸು ಕಾಣುತ್ತಿದ್ದಾನೆ. ಅವನ ಕನಸಿನಲ್ಲಿ ಹೀರೋ-ಹೀರೋಯಿನ್ ಇಬ್ಬರೂ ಪಾನಿ ಪುರಿ ಶಾಪ್‌ಗೆ ಹೋಗಿದ್ದಾರೆ ಅಲ್ಲಿ ಯಾರು ಹೆಚ್ಚು ತಿನ್ನುತ್ತಾರೆ ಎಂಬ ಕಾಂಪಿಟೀಶನ್ ಏರ್ಪಟ್ಟಿದೆ. ತಾಂಡವ್‌ ಹೆಂಡತಿ ಜತೆಗೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾನೆ. ಮಕ್ಕಳ ಎದುರು ಹೆಂಡತಿಯನ್ನು ತುಂಬಾ ಚೆನ್ನಾಗಿಯೇ ಕಾಳಜಿ ಮಾಡುತ್ತಿದ್ದಾನೆ. ಅದನ್ನು ನೋಡಿ ತಾಂಡವ್ ಮಕ್ಕಳಿಬ್ಬರೂ ತುಂಬಾ ಖುಷಿ ಪಡುತ್ತಿದ್ದಾರೆ. ಸ್ವತಃ ಭಾಗ್ಯ ಕೂಡ ತನ್ನ ಗಂಡನ ಪ್ರೀತಿ ಕಂಡು ಅಚ್ಚರಿಗೊಂಡಿದ್ದಾಳೆ. ಜತೆಜತೆಗೆ ತುಂಬಾ ಸಂತೋಷಗೊಂಡಿದ್ದಾಳೆ ಕೂಡ. 

Tap to resize

Latest Videos

ಕ್ಯಾನ್ಸರ್ ಬಂದು ಅಪ್ಪ ತೀರಿಕೊಂಡರು, 15 ವರ್ಷದ ಶಾರುಖ್ ಖಾನ್ ಮುಂಬೈ ರಸ್ತೆಯಲ್ಲಿ ಮಲಗಿದ್ದರು; ಕಿಂಗ್ ಖಾನ್ ಸ್ಟೋರಿ ವೈರಲ್!

ತಾಂಡವ್ ಎದುರೇ ಇರುವ ಚಾನ್ಸ್ ಸಿಕ್ಕಿರುವುದರಿಂದ ಶ್ರೇಷ್ಠಾ ಖುಷಿಯಾಗಿದ್ದಾಳೆ. ಅಷ್ಟೇ ಅಲ್ಲ, ತಾನು ಯೋಜಿಸಿದಂತೆ ಪ್ಲಾನ್ ಪ್ರಕಾರವೇ ಎಲ್ಲಾ ನಡೆಯುತ್ತಿದೆ  ಎಂಬ ಭ್ರಮೆಯಲ್ಲಿ ಆಕೆ ತೇಲಾಡುತ್ತಿದ್ದಾಳೆ. ಆದರೆ, ತಾಂಡವ್ ಪರಿಸ್ಥಿತಿ ಮಾತ್ರ ಅಲ್ಲೋಲಕಲ್ಲೋಲ ಎಂಬಂತಾಗಿ ಆತ ಬಗೆಬಗೆಯಲ್ಲಿ ಪರಿತಪಿಸುತ್ತಿದ್ದಾನೆ. ಆದರೆ, ಗುಂಡಣ್ಣನ ಕನಸು ಮಾತ್ರ ಚೆನ್ನಾಗಿದೆ. ವೀಕ್ಷಕರು ಗುಂಡಣ್ಣ ಕಾಣುತ್ತಿರುವ ಕನಸು ಆದಷ್ಟು ಬೇಗ ನಿಜವಾಗಬಾರದೇ ಎಂದು ಯೋಚಿಸುವಂತಾಗಿದೆ. 

ಹೀಗೆ ಅಂತ ಗೊತ್ತಿದ್ದ್ರೆ ನಾನುಬಿಗ್ ಬಾಸ್‌ಗೆ ಹೋಗ್ತಾನೆ ಇರ್ಲಿಲ್ಲ; ರಕ್ಷಕ್ ಬುಲೆಟ್ ಹೇಳಿದ್ದು ಯಾರಿಗೆ, ಯಾಕೆ?

ಭಾಗ್ಯಲಕ್ಷ್ಮೀ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರದವರೆಗೆ, ಸಂಜೆ 7.00 ಗಂಟೆಗೆ ಪ್ರಸಾರವಾಗುತ್ತಿದೆ. ಭಾಗ್ಯ ಮತ್ತು ತಾಂಡವ್ ಪಾತ್ರಗಳು ವೀಕ್ಷಕರನ್ನು ಭಾರೀ ಎನ್ನುವಷ್ಟು ಸೆಳೆಯುತ್ತಿದ್ದು, ಕುಸುಮಾ ಪಾತ್ರ ಕೂಡ ಕುತೂಹಲ ಕೆರಳಿಸುವಂತಿದೆ. ಇತ್ತೀಚೆಗೆ, ಭಾಗ್ಯಲಕ್ಷ್ಮೀ ಸೀರಿಯಲ್ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್ ಅವರು ಬಿಗ್ ಬಾಸ್ ಮನೆಗೆ ಹೋಗಿ ವರ್ತೂರು ಸಂತೋಷ್ ಅವರ ಮನವೊಲಿಕೆಗೆ ಪ್ರಯತ್ನಪಟ್ಟು ಕೂಡ ಗಮನಸೆಳೆದಿದ್ದಾರೆ. ಸದ್ಯ, ಕಲರ್ಸ್ ಕನ್ನಡದ ಹಲವು ಧಾರಾವಾಹಿಗಳ ಮಧ್ಯೆ ಭಾಗ್ಯಲಕ್ಷ್ಮೀ ಸೀರಿಯಲ್ ಸಾಕಷ್ಟು ವಿಭಿನ್ನ ಕಥೆ ಹೊಂದಿದೆ ಎನ್ನಬಹುದು. 

click me!