ಬಿಗ್ ಬಾಸ್‌ ಎಲಿಮಿನೇಶನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ; ಯಾರಾಗಬಹುದು ಔಟ್!

By Shriram Bhat  |  First Published Dec 2, 2023, 2:43 PM IST

ಸದ್ಯ ನಮ್ರತಾ, ಸ್ನೇಹಿತ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಮೈಕೇಲ್ ಎಲ್ಲರೂ ಯಾವುದೇ ಟೀಮ್ ಜತೆ ಅಷ್ಟಾಗಿ ಗುರುತಿಸಿಕೊಂಡವರಲ್ಲ. ಟಾಸ್ಕ್, ಟೀಮ್ ಅಂತ ಬಂದಾಗ ಸಹಜವಾಗಿ ವಿನಯ್ ಜತೆ ಅವರೆಲ್ಲರೂ ಇದ್ದರೂ ಅವರು ವಿನಯ್ ಜತೆಗೇ ಅಂಟಿಕೊಂಡು ಇರುವವರಲ್ಲ. 



ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಎಂಟನೇ ವಾರದ ಹಂತಕ್ಕೆ ಬಂದು ನಿಂತಿದೆ. ಈ ವೀಕೆಂಡ್ ಎಲಿಮಿನೇಶನ್ ಯಾರಿರಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ನಡೆಯುತ್ತಿದೆ. ಹಲವರು ಸ್ನೇಹಿತ್ ಹೆಸರು ಹೇಳಿದರೆ ಕೆಲವರು ಸಿರಿ ಹೆಸರು ಹೇಳುತ್ತಿದ್ದಾರೆ. ನಮ್ರತಾ, ತನಿಷಾ ಹೆಸರುಗಳು ಕೂಡ ಕೇಳಿ ಬರುತ್ತಿದೆ. ಆದರೆ ನಿಜವಾಗಿ ಯಾರು ಎಂಬುದನ್ನು ಊಹಿಸಲು ಅಸಾಧ್ಯ. ಕಾರಣ, ನಾಳೆ ಎಲಿಮಿನೇಶನ್ ಇರಲಿದೆ, ಅದನ್ನು ಸಹಜವಾಗಿಯೇ ಸೀಕ್ರೆಟ್ ಆಗಿಯೇ ಇಟ್ಟಿರುತ್ತಾರೆ. 

ಬಿಗ್ ಬಾಸ್ ಮನೆಯಲ್ಲಿ ಸಹಜವಾಗಿಯೇ ಖುಷಿ, ಮನಸ್ತಾಪ, ಹೋರಾಟ, ಹಾರಾಟ ಎಲ್ಲವೂ ನಡೆಯುತ್ತಿವೆ. ಎಲ್ಲರೂ ಬಂದಿರುವುದು ಗೆಲ್ಲಲಿಕ್ಕಾಗಿ, ಅದೇ ಮಂತ್ರವನ್ನು ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳೂ ಜಪಿಸುತ್ತಾರೆ. ಆದರೆ ಟಾಸ್ಕ್‌, ಟೀಮ್ ಅಂತ ಬಂದಾಗ ಇರುವವರಲ್ಲೇ ಗ್ರೂಫ್ ಸೃಷ್ಟಿಯಾಗುತ್ತದೆ. ಬಿಗ್ ಬಾಸ್ ಸೀಸನ್ ಶುರುವಾದ ಹೊಸತರಲ್ಲಿ ವಿನಯ್ ಟೀಮ್ ಮತ್ತು ಕಾರ್ತಿಕ್ ಟೀಮ್ ಎಂದು ಎರಡು ಟೀಮ್ ಸೃಷ್ಟಿಯಾಗಿತ್ತು. ಆದರೆ, ಬರುಬರುತ್ತಾ ಸ್ಪರ್ಧಿಗಳು ಕಡಿಮೆ ಆದಂತೆ, ಟೀಮ್‌ಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈಗಂತೂ ಕಾರ್ತಿಕ್-ವಿನಯ್ ಕೂಡ ಒಂದೇ ಟೀಮ್ ಎಂಬಂತಾಗಿದೆ. 

Tap to resize

Latest Videos

ಸದ್ಯ ನಮ್ರತಾ, ಸ್ನೇಹಿತ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಮೈಕೇಲ್ ಎಲ್ಲರೂ ಯಾವುದೇ ಟೀಮ್ ಜತೆ ಅಷ್ಟಾಗಿ ಗುರುತಿಸಿಕೊಂಡವರಲ್ಲ. ಟಾಸ್ಕ್, ಟೀಮ್ ಅಂತ ಬಂದಾಗ ಸಹಜವಾಗಿ ವಿನಯ್ ಜತೆ ಅವರೆಲ್ಲರೂ ಇದ್ದರೂ ಅವರು ವಿನಯ್ ಜತೆಗೇ ಅಂಟಿಕೊಂಡು ಇರುವವರಲ್ಲ. ಮೊದಮೊದಲು ನಮ್ರತಾ ಪಕ್ಕಾ ವಿನಯ್ ಫ್ಯಾನ್ ಎಂಬಂತೆ ಆಡುತ್ತಿದ್ದರೂ ಇತ್ತೀಚೆಗೆ ವಿನಯ್ ಜತೆ ಮುನಿಸು ಮಾಡಿಕೊಂಡು ಮನೆಯಲ್ಲಿ ಒಬ್ಬಂಟಿ ಎಂಬಂತಾಗಿದ್ದಾರೆ, ಸಂಗೀತಾ ಜತೆ ಇದ್ದರೂ ಅವರನ್ನು ನಮ್ರತಾ ಅಷ್ಟಾಗಿ ನಂಬುವ ಸ್ಥಿತಿಯಲ್ಲಿಲ್ಲ ಎನ್ನಬಹುದು. 

ತನಿಷಾ ಮಾತ್ರ ಕಾರ್ತಿಕ್ ಬೆಸ್ಟ್ ಫ್ರೆಂಡ್ ಎಂಬಂತೆ ಇದ್ದಾರೆ. ಆಗಲೂ ಈಗಲೂ ಅವರು ಹೆಚ್ಚಾಗಿ ಯಾರ ಜತೆಯೂ ಅಂಟಿಕೊಂಡು ಇದ್ದವರಲ್ಲ. ಸಂಗೀತಾ ಕಾರ್ತಿಕ್ ಅವರನ್ನು ಬಿಟ್ಟು ದೂರ ಹೋದರೂ ತನಿಷಾ ಇನ್ನೂ ಕಾರ್ತಿಕ್ ಜತೆ ಸ್ನೇಹದಿಂದಲೇ ಇದ್ದಾರೆ. ಈಗಂತೂ ಬಿಗ್ ಬಾಸ್ ಮನೆಯಲ್ಲಿ ಭಾರೀ ಪೈಪೋಟಿ ಇದೆ. ಯಾರೂ ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ಆದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಅಲ್ಲಿಂದ ಇಲ್ಲಿಯವರೆಗೂ ಉಳಿದುಕೊಂಡು ಬಂದಿರುವ ಏಕೈಕ ಫ್ರೆಂಡ್‌ಶಿಪ್ ಅಂದ್ರೆ ಅದು ಕಾರ್ತಿಕ್-ತನಿಷಾ ಅವರದು. 

ಹಿರಣ್ಯ ಸಿನಿಮಾ ಟೀಸರ್ ಲಾಂಚ್; ಮಾಸ್ ಅವತಾರದಲ್ಲಿ ಅಬ್ಬರಿಸಿದ ನಟ ರಾಜವರ್ಧನ್ ಮೇಲೆ ಮೂಡಿದೆ ಭಾರೀ ನಿರೀಕ್ಷೆ!

ಒಟ್ಟಿನಲ್ಲಿ, ಶುರುವಾಗಿ ಎಂಟನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಈಗಂತೂ ಹೆಚ್ಚಿನ ಕುತೂಹಲದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಕೊನೆಗೆ ಗೆಲ್ಲುವವರು ಯಾರು ಎಂಬುದು ಎಲ್ಲರನ್ನೂ ಯಕ್ಷಪ್ರಶ್ನೆಯಾಗಿ ಕಾಡುತ್ತಿರುವ ಪ್ರಶ್ನೆ. ಏನೇ ಆಗಲಿ, ಯಾರಾದರೊಬ್ಬರು ಗೆಲ್ಲುತ್ತಾರೆ, ಭಾರೀ ಬಹುಮಾನವನ್ನೂ ಪಡೆಯುತ್ತಾರೆ. ಪ್ರತಿವಾರ ಒಬ್ಬೊಬ್ಬರು ಬಿಗ್ ಬಾಸ್ ಮನೆಯಿಂದ ಔಟ್ ಆಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಈ ವಾರ ಯಾರು ಎಂಬುವುದಕ್ಕೆ ಉತ್ತರ ನಾಳೆ ಸಿಗಲಿದೆ. 

ಕತ್ತಲು ಬೆಳಕಿನಲ್ಲಿ ಪ್ರಶಾಂತ್ ನೀಲ್ 'ಸಲಾರ್' ಆಟ: ಸುಸ್ತಾದ ಪ್ರೇಕ್ಷಕರು!

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು. 

click me!