ಶಾಸ್ತ್ರಕ್ಕೆ ಇಟ್ಟಿದ್ದ ಊಟವನ್ನೂ ಗುಳುಂ ಮಾಡಿದ್ರಂತೆ ಅಮೃತಧಾರೆ ಗೌತಮ್​! ಆ ಘಟನೆ ತಿಳಿಸಿದ ಪತ್ನಿ ಚೈತ್ರಾ

By Suvarna News  |  First Published Dec 1, 2023, 9:17 PM IST

ಅಮೃತಧಾರೆ ಗೌತಮ್​ ಅರ್ಥಾತ್​ ರಾಜೇಶ್​ ನಟರಂಗ ಅವರು ಒಮ್ಮೆ ಶಾಸ್ತ್ರಕ್ಕೆ ಇಟ್ಟಿದ್ದ ತಿಂಡಿಗಳನ್ನೂ ತಿಂದುಬಿಟ್ಟಿದ್ರಂತೆ. ಆ ದಿನಗಳ ನೆನೆಪಿಸಿದ ಪತ್ನಿ ಚೈತ್ರಾ ಹೇಳಿದ್ದೇನು? 
 


ರಾಜೇಶ್‌ ನಟರಂಗ ಎಂದರೆ ಬಹುಶಃ ಹೆಚ್ಚಿನ ಸೀರಿಯಲ್‌ ಪ್ರಿಯರಿಗೆ ತಿಳಿಯಲಿಕ್ಕಿಲ್ಲ. ಆದರೆ ಗೌತಮ್‌ ಎಂದರೆ ಸಾಕು ಕಣ್ಣ ಮುಂದೆ ಬರುವುದು ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ ಗೌತಮ್‌ ಮತ್ತು ಭೂಮಿಕಾ. ಹೌದು. ಗೌತಮ್‌ ಪಾತ್ರಕ್ಕೆ ಜೀವ ತುಂಬಿರುವ ನಟನೇ ರಾಜೇಶ್‌ ನಟರಂಗ. ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ ರಾಜೇಶ್‌. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ. ಈ ಬಗ್ಗೆ ಖುದ್ದು ಅಮೃತಧಾರೆ ಸೀರಿಯಲ್‌ ನಾಯಕಿ ಭೂಮಿಕಾ ಅರ್ಥಾತ್‌ ಛಾಯಾ ಸಿಂಗ್‌ ಕೂಡ ಈ ಹಿಂದೆ ಹೇಳಿದ್ದರು. ರಾಜೇಶ್‌ ಸರ್‌ ಅವರಿಗೆ ನಾಯಕಿಯಾಗಿ ನಟನೆ ಮಾಡುವುದು ಅಷ್ಟು ಈಜಿಯಲ್ಲ ಎಂದು. ಅಷ್ಟರ ಮಟ್ಟಿನ ಪರ್ಫೆಕ್ಟ್‌ ವ್ಯಕ್ತಿ ರಾಜೇಶ್‌ ನಟರಂಗ ಅವರು. 

ಸದ್ಯ ಗೌತಮ್‌ ಎಂದಾಕ್ಷಣ ಅಮೃತಧಾರೆಯ ಅವರ ಪತ್ನಿ ಭೂಮಿಕಾ ಕೂಡ ನೆನಪಾಗುತ್ತಾರೆ. ಮಧ್ಯ ವಯಸ್ಸಿನಲ್ಲಿ ಮದುವೆಯಾದವರ ಕಥಾ ಹಂದರವನ್ನು ಈ ಸೀರಿಯಲ್‌ ಹೊಂದಿದೆ. ಆಗರ್ಭ ಶ್ರೀಮಂತ ಗೌತಮ್‌ ಮತ್ತು ಮಧ್ಯಮ ವರ್ಗದ ಹೆಣ್ಣು ಭೂಮಿಕಾ ನಡುವಿನ ಕಥೆಯಿದು. ಈ ಸೀರಿಯಲ್‌ನಲ್ಲಿ ಇಬ್ಬರ ನಡುವೆ ಹೊಂದಾಣಿಕೆ ಈಗಷ್ಟೇ ಆಗುತ್ತಿದ್ದರೆ, ಅಸಲಿ ಜೀವನದಲ್ಲಿ ರಾಜೇಶ್‌ ಅವರಿಗೆ ಮದುವೆಯಾಗಿ 15 ವರ್ಷಗಳಾಗಿವೆ. ಅವರಿಗೆ ಓರ್ವ ಪುತ್ರಿ ಕೂಡ ಇದ್ದಾರೆ. ಅಂದಹಾಗೆ ರಾಜೇಶ್‌ ಅವರ ನಿಜ ಜೀವನದ ಪತ್ನಿಯ ಹೆಸರು ಚೈತ್ರಾ. 

Tap to resize

Latest Videos

ಭಾಗ್ಯಲಕ್ಷ್ಮಿ ಸೀರಿಯಲ್‌ ತಾಂಡವ್‌ರನ್ನು ನಟಿ ಸಂಗೀತಾ ಮದ್ವೆಯಾಗಿದ್ದು ಇದಕ್ಕಂತೆ! ಉಫ್​ ಅಂದ ಫ್ಯಾನ್ಸ್​

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕಿಚನ್​ ಕಾರ್ಯಕ್ರಮದಲ್ಲಿ ರಾಜೇಶ್​ ಮತ್ತು ಚೈತ್ರಾ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚೈತ್ರಾ ಅವರು, ರಾಜೇಶ್​ ಅವರ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ. ಅಷ್ಟಕ್ಕೂ ರಾಜೇಶ್​ ಅವರ ಅಮೃತಧಾರೆಯ ಪಾತ್ರದಲ್ಲಿಯೂ ಅವರಿಗೆ ತಿನ್ನುವುದು ಎಂದರೆ ಸಿಕ್ಕಾಪಟ್ಟೆ ಇಷ್ಟ. ಇದನ್ನು ನೋಡಿ ಸೀರಿಯಲ್​ ಪತ್ನಿ ಭೂಮಿಕಾ ಕೂಡ ಮುಸುಮುಸು ನಕ್ಕಿದ್ದು ಇದೆ. ಆದರೆ ಅಸಲಿಗೆ ನಿಜ ಜೀವನದಲ್ಲಿಯೂ ಇಂಥ ಘಟನೆ ನಡೆದಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ ಚೈತ್ರಾ. ಒಮ್ಮೆ ಹಬ್ಬದ ಸಂದರ್ಭದಲ್ಲಿ ಶಾಸ್ತ್ರಕ್ಕೆಂದು ಇಟ್ಟಿದ್ದ ಆಹಾರವನ್ನೂ ತಿಂದುಬಿಟ್ಟಿದ್ರಂತೆ ರಾಜೇಶ್​ ನಟರಂಗ!

ಅದನ್ನು ಚೈತ್ರಾ ತಿಳಿಸಿದರು. ಬಾಳೆಯಲ್ಲಿ ಇಟ್ಟಿದ್ದ ಎಲ್ಲಾ ಆಹಾರ ಗುಳುಂ ಮಾಡಿಬಿಟ್ಟಿದ್ರು. ಆಗ ಅವರ ಚಿಕ್ಕಪ್ಪ, ಅಯ್ಯೋ ಇದೇನಿದು ಎಲ್ಲಾ  ತಿಂದುಬಿಟ್ಯಲ್ಲೋ, ಎಲೆಯಲ್ಲಿ ಚೂರಾದ್ರೂ ಉಳಿಸೋ, ಅನ್ನ ಕಾಣದೇ ಇರೋರ್​ ಥರ ತಿಂತಾ ಇದ್ಯಲ್ಲಾ ಎಂದು  ಹೇಳಿದ್ರು ಎಂಬುದನ್ನು ನೆನಪಿಸಿಕೊಂಡರು. ಇದೇ ಕಾರ್ಯಕ್ರಮದಲ್ಲಿ, ಭಾಗ್ಯಲಕ್ಷ್ಮಿ ಸೀರಿಯಲ್​ ತಾಂಡವ್​ ಅಂದರೆ ಸುದರ್ಶನ ರಂಗಪ್ರಸಾದ್​ ಮತ್ತು ಅವರ ಪತ್ನಿ ಸಂಗೀತಾ ಕೂಡ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಕಿಚನ್​ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತದೆ.   ಆಲೂ ಹಕ್ಕಿ ಗೂಡಲ್ಲಿ ಸುದರ್ಶನ್-ಸಂಗೀತ ಒಲವಿನ ಸೂತ್ರ; ಇಂಡೋ-ಚೈನೀಸ್ ಅಡುಗೆಯಿಂದ ಗಮನ ಸೆಳೆದ ರಾಜೇಶ್-ಚೈತ್ರಾ ಎಂಬ ಶೀರ್ಷಿಕೆಯಲ್ಲಿ ಇದರ ಪ್ರೊಮೋ ವಾಹಿನಿ ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಜೋಡಿ ಇಂಡೋ-ಚೈನೀಸ್ ಮಾಡಿದ್ದಾರೆ. 

ಚೀನಾದಲ್ಲಿ ರಸ್ತೆ ಮೇಲೆ ತಲೆಹರಟೆ ಮಾಡಿದ್ರೆ ಏನಾಗತ್ತೆ? ಡಾ.ಬ್ರೋ ವಿವರಿಸಿದ್ದಾರೆ ನೋಡಿ...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!