ಕುಲವಧು ನಟಿ ಧನ್ಯಾ ಅಲಿಯಾಸ್ ದೀಪಿಕಾ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮಗೆ ತಿಳಿದಿರುವ ಮೇಕ್ ಅಪ್ ಕಲೆಯನ್ನು ಕಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ದೀಪಿಕಾ ಮಾಸ್ಟರ್ ಕ್ಲಾಸ್ ಯಾವಾಗಿಂದ ಶುರುವಾಗುತ್ತೆ ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ (Bigg Boss Kannada season 11 contestant Chaitra Kundapura) ಅವರಿಗೆ ಚೆಂದದ ಮೇಕಪ್ ಮಾಡಿ, ಎಲ್ಲರ ಗಮನ ಸೆಳೆದಿರುವ ಕುಲವಧು ನಟಿ ಧನ್ಯಾ ದೀಪಿಕಾ (Kulavadhu Actress Dhanya Deepika) ಈಗ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ನೀಡಿದ್ದಾರೆ. ಧನ್ಯಾ ದೀಪಿಕಾ ಉತ್ತಮ ನಟಿ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಅವರು ಬೆಸ್ಟ್ ಮೇಕಪ್ ಆರ್ಟಿಸ್ಟ್ ಎಂಬುದು ಅನೇಕರಿಗೆ ತಿಳಿದಿರಲಿಲ್ಲ. ಇದನ್ನು ಧನ್ಯಾ, ಚೈತ್ರಾ ಕುಂದಾಪುರಗೆ ಮೇಕಪ್ ಮಾಡಿ ರಿವೀಲ್ ಮಾಡಿದ್ದಲ್ಲೆ, ತಮ್ಮ ಬ್ಯುಸಿನೆಸ್ ವಿಸ್ತರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಈಗಿನ ದಿನಗಳಲ್ಲಿ ನಟ – ನಟಿಯರು ಬರೀ ತಮ್ಮ ವ್ಯಾಪ್ತಿಯನ್ನು ಆಕ್ಟಿಂಗ್ ಗೆ ಸೀಮಿತ ಮಾಡಿಕೊಂಡಿಲ್ಲ. ಬಹುತೇಕ ನಟಿಯರು ಆಕ್ಟಿಂಗ್ ಜೊತೆ ಬೇರೆ ಕೆಲಸ ಮಾಡ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಗೌತಮಿ ಹೇರ್ ಆಯಿಲ್ ಮಾರಾಟ ಮಾಡ್ತಿದ್ದರೆ, ಅಮೃತಾ ರಾಮಮೂರ್ತಿ ಸೀರೆ ಮಾರಾಟ ಮಾಡ್ತಿದ್ದಾರೆ. ಇನ್ನು ತನಿಷಾ ಕುಪ್ಪಂಡ , ಜ್ಯುವೆಲರಿ ಶಾಪ್ ಓನರ್. ಸೋಶಿಯಲ್ ಮೀಡಿಯಾ ಮೂಲಕ ಹಣ ಸಂಪಾದನೆ ಮಾಡುವ, ಬ್ಯೂಟಿ ಪ್ರಾಡಕ್ಟ್ ಜೊತೆ ಕೈ ಜೋಡಿಸಿರುವ ಅನೇಕ ನಟಿಯರ ಪಟ್ಟಿಗೆ ಈಗ ಧನ್ಯಾ ದೀಪಿಕಾ ಸೇರ್ಪಡೆಯಾಗಿದೆ.
ಯಾರೀ 'ಅಣ್ಣಯ್ಯ' ಧಾರಾವಾಹಿ ಪರಶು? ರಿಯಲ್ ವಿದ್ಯಾರ್ಹತೆ ಗೊತ್ತಾದ್ರೆ ಬೆರಗಾಗ್ತೀರಾ
ಧನ್ಯಾ ದೀಪಿಕಾ ಬ್ಯುಸಿನೆಸ್ ಏನು? : ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧನ್ಯಾ ದೀಪಿಕಾ ತಮ್ಮ ಬ್ಯುಸಿನೆಸ್ ವಿವರವನ್ನು ಹಂಚಿಕೊಂಡಿದ್ದಾರೆ. ಧನ್ಯಾ ತಮ್ಮ ಜೊತೆ ಮತ್ತೊಂದಿಷ್ಟು ಜನರನ್ನು ಮೇಕಪ್ ಆರ್ಟಿಸ್ಟ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಚೈತ್ರಾ ಕುಂದಾಪುರ ಅವರ ಮೇಕ್ ಓವರ್ ವಿಡಿಯೋಗೆ 6 ಮಿಲಿಯನ್ಸ್ ವೀವ್ ಬಂದಿದೆ. ಜನರು, ಧನ್ಯಾ ಮೇಕಪ್ಪನ್ನು ತುಂಬಾ ಇಷ್ಟಪಟ್ಟಿದ್ದಾರೆ. ಅದಕ್ಕೆ ಧನ್ಯವಾದ ಹೇಳಿದ ಧನ್ಯಾ, ಮೇಕಪ್ ಸ್ಟುಡಿಯೋಕೆ ಇದ್ರಿಂದ ಹೊಸ ಕಿಕ್ ಸಿಕ್ಕಿದೆ ಎಂದಿದ್ದಾರೆ. ಅನೇಕ ಜನರು ಕ್ಲಾಸ್ ಯಾವಾಗ ಅಂತ ಪ್ರಶ್ನೆ ಕೇಳ್ತಿದ್ದರು, ಮುಂದಿನ ತಿಂಗಳಿನಿಂದ ಮೇಕಪ್ ಮಾಸ್ಟರ್ ಕ್ಲಾಸ್ ಶುರು ಮಾಡ್ತಿದ್ದೇವೆ ಎಂದು ಧನ್ಯಾ ಹೇಳಿದ್ದಾರೆ. ಸ್ಕ್ರೀನ್ ಮೇಲೆ ನಂಬರ್ ನೀಡಿದ್ದು, ಆಸಕ್ತರು ಧನ್ಯಾರಿಂದ ಮೇಕಪ್ ಕಲಿಯಬಹುದು. ಫೀ ಎಷ್ಟು, ಎಷ್ಟು ದಿನ ಕ್ಲಾಸ್, ಕ್ಲಾಸ್ ಟೈಂಮಿಂಗ್ ಎಲ್ಲವನ್ನೂ ಫೋನ್ ಮಾಡಿ ತಿಳಿದುಕೊಳ್ಳಿ ಎಂದಿರುವ ಧನ್ಯಾ, ಖುದ್ದು ತಾವೇ ಟ್ರೈನಿಂಗ್ ನೀಡೋದಾಗಿ ಹೇಳಿದ್ದಾರೆ. ಧನ್ಯಾ, ಪುಶ್ ಪ್ಯಾಲೆಟ್ ಹೆಸರಿನ ಸಲೂನ್ ನಡೆಸುತ್ತಿದ್ದು, ಅದು ನಾಗರಬಾವಿ ಬಳಿ ಇದೆ.
ವಾರದ ಹಿಂದೆ ಧನ್ಯಾ ದೀಪಿಕಾ ಹಾಗೂ ಚೈತ್ರಾ ಕುಂದಾಪುರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೇಕ್ ಓವರ್ ವಿಡಿಯೋ ಪೋಸ್ಟ್ ಮಾಡಿದ್ದರು. ಅದ್ರಲ್ಲಿ ಧನ್ಯಾ, ಚೈತ್ರಾ ಅವರಿಗೆ ಮೇಕಪ್ ಮಾಡೋದನ್ನು ನೋಡ್ಬಹುದು. ಈ ವಿಡಿಯೋ ನೋಡಿದ ಬಳಕೆದಾರರು, ಧನ್ಯಾ ಮೇಕಪ್ ಇಷ್ಟಪಟ್ಟಿದ್ದರು. ಅಲ್ಲದೆ ಚೈತ್ರಾ ಈ ಮೇಕಪ್ ಹಾಗೂ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣ್ತಾರೆ ಅಂತ ಕಮೆಂಟ್ ಮಾಡಿದ್ದರು.
ಸೀರಿಯಲ್ಗಳಿಗೆ ನಟಿಯಾಗೋ ಆಸೆ ಹೊತ್ತು ಹೋಗುವವರಿಗೆ ಸೀತಾರಾಮ
ಧನ್ಯಾರ ನಿಜವಾದ ಹೆಸರು ದೀಪಿಕಾ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕುಲವಧು ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಇವರು ಧನ್ಯಾ ಆಗಿ ಬದಲಾಗಿದ್ದಾರೆ. ಕುಲವಧುವಿನಲ್ಲಿ ಅಧ್ಬುತವಾಗಿ ನಟಿಸಿದ್ದ ದೀಪಿಕಾ, ಉದಯ ಚಾನೆಲ್ ನಲ್ಲಿ ಪ್ರಸಾರವಾಗ್ತಿರುವ ಸೇವಂತಿಯಲ್ಲಿ ಮಿಂಚುತ್ತಿದ್ದಾರೆ. ಇದಲ್ಲದೆ ದೀಪಿಕಾ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಸ್ಟಾರ್ ಸುವರ್ಣ ಸೀರಿಯಲ್ ನಲ್ಲೂ ದೀಪಿಕಾ ನಟಿಸಿದ್ದರು. ತೆಲಗು ಸೀರಿಯಲ್ ಗೂ ಹೀರೋಯಿನ್ ಆಗಿದ್ದ ದೀಪಿಕಾ, 2019ರಲ್ಲಿ ನಟ ಆಕರ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.