ಬಿಗ್ ಬಾಸ್ ಮನೆಯ ಕರ್ಮಕಾಂಡ ಬಿಚ್ಚಿಟ್ಟ ಕುಮಾರಿ; ಉಗಿರಿ ಮಕ್ಕೆ ಎಂದ ಹಳ್ಳಿ ಹುಡುಗಿ ಸಪೋರ್ಟರ್ಸ್

Published : Nov 15, 2026, 04:28 PM IST
Bigg Boss Kumari Dress Controversy Video

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 13ರ ರಿಯಾಲಿಟಿ ಶೋಗೆ ಕಾಮನ್ ಮ್ಯಾನ್ ಕೆಟಗರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹಳ್ಳಿ ಹುಡುಗಿ ಕುಮಾರಿ ಶಾಕಿಂಗ್ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸಿಂಪತಿ ಕಾರ್ಡ್, ಸಿಂಪತಿ ಗಿಟ್ಟಿಸಿಕೊಳ್ಳುತ್ತೀಯ ಎಂದು ಹೇಳಿದ್ದವರಿಗೆ, ಬಿಗ್ ಬಾಸ್ ತಂಡದವರು ಮಾಡಿದ್ದ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ವೇದಿಕೆಯಲ್ಲಿ ಸ್ಪರ್ಧಿಗಳು ಕಾಣಿಸಿಕೊಳ್ಳುವ ರೀತಿ ಹಾಗೂ ಅವರ ಜೀವನಶೈಲಿ ಸದಾ ಚರ್ಚೆಯ ಕೇಂದ್ರಬಿಂದುವಾಗಿರುತ್ತದೆ. ಈ ಬಾರಿ ಸೀಸನ್‌ನಲ್ಲಿ ಹಳ್ಳಿ ಹುಡುಗಿಯಾಗಿ ಪ್ರವೇಶ ಪಡೆದು ಎಲ್ಲರ ಗಮನ ಸೆಳೆದಿದ್ದ ಕುಮಾರಿ ಧರಿಸಿದ್ದ ಬಟ್ಟೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಬಿಗ್ ಬಾಸ್ ವೇದಿಕೆ ಮೇಲೆ ಅವರು ಧರಿಸಿದ್ದ ಸಾಮಾನ್ಯ ಬಟ್ಟೆ ಮತ್ತು ಸ್ವೆಟರ್ ನೋಡಿ, 'ಜನರಿಂದ ಸಿಂಪತಿ ಗಿಟ್ಟಿಸಿಕೊಳ್ಳಲು ಇಂತಹ ನಾಟಕವಾಡುತ್ತಿದ್ದಾರೆ' ಎಂದು ಅನೇಕರು ಕಟುವಾಗಿ ಟೀಕಿಸಿದ್ದರು. ಆದರೆ, ಇದೀಗ ಕುಮಾರಿ ತಮ್ಮ ಮೌನ ಮುರಿದಿದ್ದು, ಬಿಗ್ ಬಾಸ್ ಅಸಲಿ ಕರ್ಮಕಾಂಡವನ್ನು ಜನರ ಮುಂದಿಟ್ಟು ಕ್ಷಮೆಯಾಚಿಸಿದ್ದಾರೆ.

'ಸಿಂಪತಿ ಗಿಟ್ಟಿಸಿಕೊಳ್ಳಲು ನಾನು ಆ ಬಟ್ಟೆ ಹಾಕಿರಲಿಲ್ಲ'

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ವಿಡಿಯೋ ಅಥವಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ಕುಮಾರಿ, "ನಮಸ್ಕಾರ ಎಲ್ಲರಿಗೂ, ನಾನು ನಿಮ್ಮ ಪ್ರೀತಿಯ ಕುಮಾರಿ. ಇಷ್ಟು ದಿನ ಪರೀಕ್ಷೆ ಮತ್ತು ಇತರ ಕೆಲಸಗಳಿದ್ದ ಕಾರಣ ಈ ವಿಚಾರವನ್ನು ನಿಮ್ಮ ಮುಂದೆ ತರಲು ಸಾಧ್ಯವಾಗಿರಲಿಲ್ಲ. ನನ್ನ ಬಟ್ಟೆಯ ವಿಚಾರವಾಗಿ ಸಾಕಷ್ಟು ಜನ, 'ಅದೇ ಹಳೆಯ ಬಟ್ಟೆ ಹಾಕಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವ ನಾಟಕ ಮಾಡಿದ್ರಿ' ಎಂದು ಟೀಕಿಸಿದ್ದೀರಿ. ಆದರೆ ಜನರನ್ನು ನಂಬಿಸಿ, ಮೋಸ ಮಾಡಿ, ನಾಟಕವಾಡಿ ಸಂಪಾದಿಸಬೇಕು ಎಂಬ ಕೆಟ್ಟ ಆಲೋಚನೆ ನನ್ನ ಮನಸ್ಸಿನಲ್ಲಿ ಕನಸಿನಲ್ಲೂ ಇಲ್ಲ" ಎಂದು ಉತ್ತರಿಸಿದ್ದಾರೆ.

ಸುದೀಪ್ ಅಣ್ಣನ ಮುಂದೆ ಅಮ್ಮನ ಸೀರೆ ಉಡಬೇಕೆಂಬ ಆಸೆಯಿತ್ತು!

ತಮ್ಮ ಅಸಲಿ ಕನಸನ್ನು ಬಿಚ್ಚಿಟ್ಟ ಅವರು, "ಟಿವಿಯಲ್ಲಿ ಕೋಟ್ಯಂತರ ಜನ ನೋಡುವಾಗ ನಾನೂ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ನನಗಿತ್ತು. ಅಂದು ಕಿಚ್ಚ ಸುದೀಪ್ ಅಣ್ಣನ ಮುಂದೆ ಹೋಗುವಾಗ ನಮ್ಮಮ್ಮನ ಸೀರೆ ಉಟ್ಟು, ಕೈತುಂಬಾ ಬಳೆ, ಜುಮುಕಿ, ಸರ ಧರಿಸಿ ಅಂದವಾಗಿ ವೇದಿಕೆ ಏರಬೇಕು ಎಂದು ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಂಡಿದ್ದೆ. ಆ ಸೀರೆ, ಬಳೆಗಳು ಇಂದಿಗೂ ನನ್ನ ಬಳಿಯೇ ಇವೆ" ಎಂದು ಭಾವುಕರಾಗಿ ನುಡಿದಿದ್ದಾರೆ.

ಬಿಗ್ ಬಾಸ್ ತಂಡದವರೇ ಮಾಡಿಸಿದ ಪ್ಲ್ಯಾನ್!

ಬಿಗ್ ಬಾಸ್ ವೇದಿಕೆ ಮೇಲೆ ನಡೆದ ಅಸಲಿ ಸತ್ಯವನ್ನು ಬಯಲು ಮಾಡಿದ ಕುಮಾರಿ, "ನಾನು ಚೆನ್ನಾಗಿ ರೆಡಿಯಾಗಬೇಕು ಎಂದುಕೊಂಡಿದ್ದರೂ ಅಲ್ಲಿ ನಡೆದಿದ್ದೇ ಬೇರೆ. ಬಿಗ್ ಬಾಸ್ ಮನೆಯ ತಂಡದವರೇ ನನ್ನ ಬಳಿ ಬಂದು, ಚೂಡಿದಾರದ ಮೇಲೆ ಒಂದು ಸ್ವೆಟರ್ ಹಾಕಿಕೊಂಡು ಹೋಗುವಂತೆ ಹೇಳಿದರು. ಅವರು ಹೇಳಿದ ಕಾರಣಕ್ಕಾಗಿಯೇ ನಾನು ಆ ಬಟ್ಟೆಯನ್ನು ಧರಿಸಿ ವೇದಿಕೆ ಏರಬೇಕಾಯಿತು. ಜನರನ್ನು ಮೋಸ ಮಾಡಿ ಗೆಲ್ಲಬೇಕೆಂಬ ಯಾವ ಸಿಂಪತಿ ಕಾರ್ಡ್ ಆಟವೂ ನನ್ನದಲ್ಲ. ಆ ಬಟ್ಟೆ ನಾನಾಗಿ ಹಾಕಿಕೊಂಡಿದ್ದಲ್ಲ, ಅವರೇ ಹಾಕಿಸಿದ್ದು" ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಬಾಸ್ ತಂಡಕ್ಕೆ ಕ್ಷಮೆಯಾಚನೆ ಹಾಗೂ ಸ್ಪಷ್ಟನೆ:

ತಮ್ಮ ಮಾತುಗಳನ್ನು ಮುಗಿಸುತ್ತಾ, "ಬಿಗ್ ಬಾಸ್ ತಂಡದವರು ಯಾರಿದ್ದೀರಿ, ದಯವಿಟ್ಟು ಸಾಧ್ಯವಾದರೆ ನನ್ನನ್ನು ಕ್ಷಮಿಸಿ. ಆದರೆ ಈ ಸತ್ಯವನ್ನು ರಾಜ್ಯದ ಜನರಿಗೆ ಹೇಳದೆ ನನಗೆ ಇರಲು ಸಾಧ್ಯವಾಗಲಿಲ್ಲ. ನನ್ನ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದ ಜನರಿಗೆ ಇದೊಂದು ವಿಚಾರದಲ್ಲಿ ಸ್ಪಷ್ಟನೆ ಕೊಡಬೇಕಿತ್ತು, ಕೊಟ್ಟಿದ್ದೇನೆ" ಎಂದು ಹೇಳಿದ್ದಾರೆ.

ನಾನು ಮನೆಯಿಂದ ಹೊರಗೆ ಹೋಗುವಾಗ ಬಟ್ಟೆಗಳು ಬಂದವು

ಇನ್ನು ಮನೆಯೊಳಗೆ ನಾನು ಸರಿಯಾಗಿ ರೆಡಿ ಆಗ್ತಾ ಇರ್ಲಿಲ್ಲ. ಏಕೆಂದರೆ ನಮ್ ಮನೆ ಇಂದ ಬಂದಂತಹ ಎಲ್ಲಾ ಐಟಮ್ಸ್ ನಂಗೆ ಸಿಕ್ಕಿದ್ದು ನಾನು ಮನೆ ಇಂದ ಆಚೆ ಬರೋ ಹಿಂದಿನಾ ದಿನಾ. ವೀಡಿಯೋಸ್ ಮಾಡುವಾಗ ಮಾತ್ರ ನಾನು ನನ್ನ ಮಾತಾಡೋ ರೀತಿನಾ ತಿದ್ದಿಕೊಂಡು ಮಾತಾಡ್ತೀನಿ. ಯಾಕೆ ಅಂದ್ರೆ ನಾನ್ ಮಾತಾಡೋ ರೀತಿ ನಿಮ್ಗೆಲ್ಲಾ ಇರಿಟೇಶನ್ ಆದ್ರೆ ಅನ್ನೋ ಕಾರಣಕ್ಕೆ ಅಷ್ಟೇ. ಬಿಗ್ ಬಾಸ್ ಮನೇಲಿ ಯಾವ್ ರೀತಿ ಮಾತಾಡ್ತಾ ಇದ್ದೆ ಅದೇ ನನ್ನ ನಿಜವಾದ ಮಾತಿನ ಶೈಲಿ . ನನ್ನಿಂದ ಏನಾದ್ರು ತಪ್ಪಾಗಿದೇ ಅಂತ ಇನ್ನು ನಿಮ್ಗೆಲ್ಲ ಅನ್ಸಿದ್ರೆ 🙏 ಕ್ಷಮಿಸಿ" ಎಂದು ಹೇಳಿಕೊಂಡಿದ್ದಾರೆ.

ಕುಮಾರಿಯವರ ಈ ಸ್ಪೋಟಕ ಹೇಳಿಕೆ ಹೊರಬರುತ್ತಿದ್ದಂತೆಯೇ, ಅವರ ಬೆಂಬಲಿಗರು ಮತ್ತು ನೆಟ್ಟಿಗರು ಬಿಗ್ ಬಾಸ್ ವಾಹಿನಿ ಹಾಗೂ ರಿಯಾಲಿಟಿ ಶೋಗಳ ತಂಡದವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಸುದೀಪ್ ಅವರೇ ಈ ಬಗ್ಗೆ ಏನು ಹೇಳ್ತೀರಾ? ಬಿಗ್ ಬಾಸ್ ತಂಡದವರ ಮುಖಕ್ಕೆ ಉಗೀರಿ ಎಂದು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಿತ್ಯಾಳ ಕೊನೆ ದಿನದ ಶೂಟಿಂಗ್; ಕುಂಬಳಕಾಯಿ, ನಿಂಬೆಯಿಂದ ದೃಷ್ಟಿ ತೆಗೆದು ಚಿತ್ರೀಕರಣ
"ಅವಾಗ ಮನೆ ಗೋಡೆಗೆ ಮಾತ್ರ ಕೇಳಿಸ್ತಿತ್ತು, ಇವಾಗ ಕಮೆಂಟ್ ಹಾಕ್ತಾರೆ": ಟ್ರೋಲ್ಸ್‌ಗೆ ನಟಿ ಮೇಘನಾ ರಾಜ್ ಕೂಲ್ ಉತ್ತರ!