ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ ಕಿತ್ತೋದೋಳು, ಸ್ಪರ್ಧಿಗಳ ಮಾತು ಕೇಳಿ ಸುಸ್ತಾದ್ರಾ ವೀಕ್ಷಕರು!

Published : Nov 01, 2023, 12:33 PM ISTUpdated : Nov 01, 2023, 12:35 PM IST
ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ ಕಿತ್ತೋದೋಳು, ಸ್ಪರ್ಧಿಗಳ ಮಾತು ಕೇಳಿ ಸುಸ್ತಾದ್ರಾ ವೀಕ್ಷಕರು!

ಸಾರಾಂಶ

ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್‌, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್‌ ಶುರುವಾಗಿದೆಯೋ, ಒಲೆಯೊಳಗಿನ ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ. 

ಕಲರ್ಸ್ ಕನ್ನಡ ಬಿಗ ಬಾಸ್ ಸೀಸನ್ 10 ನಾಲ್ಕನೇ ವಾರದಲ್ಲಿ ಸಾಗುತ್ತಿದೆ. ಈ ವಾರದ ಸ್ಪೆಷಲ್ ಹಬ್ಬದ ವಾತಾವರಣ. ಆದರೆ, ಅದೇ ಹಬ್ಬದ ಮೂಡ್‌ನಲ್ಲಿ ಹೊತ್ತಿಕೊಂಡಿದೆ ಮನೆಯಲ್ಲಿ ಮಾತಿನ ಬೆಂಕಿ. ಹಳ್ಳಿಮನೆಯಲ್ಲಿ ಹೊತ್ಕೊಂಡಿದೆ ಮಾತಿನ ಬೆಂಕಿ!
ಅಲ್ಲಿ ನಡೆದ ಸಂಭಾಷಣೆ ನೋಡಿ, ಹೇಗಿದೆ ಅಂತ!

'ತಳ್ಳೋದು ಪಳ್ಳೋದು ಮಾಡಿದ್ರೆ ತೆಗ್ದು ಕಪಾಳಕ್ಕೇ ಬಾರಿಸ್ಬೇಕು, ಏ ಲೂಸರ್, ಬಾಯಿ ಮುಚ್ಕೊಂಡ್ ಆಡು, ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ?, ಕಿತ್ತೋದೋಳು, ನೀನ್ ಕಿತ್ತೋದೋಳು, ಮರ್ಯಾದೆ ಇಲ್ದಿರೋ ನಿನ್ನಂಥೋಳ ಹತ್ರ ಏನ್ ಮಾತು?' ಎಂಥ ಮಾತಿನ ಚಕಮಕಿ ನೋಡಿ ಹಳ್ಲಿ ಮನೆಯಲ್ಲಿ!

ಬಾರೋ, ಹೋಗಲೇ ಗಂಡಸಿನ ಥರ ಆಡು, ಬಳೆಗಳ ಹಾಕ್ಕೊಂಡು ಹೆಂಗಸರ ಥರ ಆಡೋದಲ್ಲ, -ಇವೆಲ್ಲ ಯಾವುದೋ ಬೀದಿ ಜಗಳದ ತುಣುಕುಗಳಲ್ಲ. ಬಿಗ್‌ಬಾಸ್‌ ಮನೆಯೊಳಗೇ ರೂಪುಗೊಂಡಿರುವ ಹಳ್ಳಿ ಟಾಸ್ಕ್‌ನಲ್ಲಿ ಕೇಳಿಬಂದ ಮಾತುಗಳು. ಈ ಚಕಮಕಿಯ ತುಣುಕುಗಳು 'JioCinema'ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಕಾಣಿಸಿಕೊಂಡಿವೆ.

ನವೆಂಬರ್‍ 1ರ ರಾಜ್ಯೋತ್ಸವದ ಸಂಭ್ರಮದಲ್ಲಿ ಬಿಗ್‌ಬಾಸ್‌, ಮನೆಯೊಳಗಿನ ಸ್ಪರ್ಧಿಗಳಿಗೆ ಒಂದು ವಿಶಿಷ್ಟವಾದ ಟಾಸ್ಕ್‌ ಕೊಟ್ಟಿದ್ದರು. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ವಿಭಾಗಗೊಂಡು ಹಳ್ಳಿ ಜೀವನವನ್ನು ನಡೆಸಬೇಕು. ಸಂಗೀತಾ ಮತ್ತು ವಿನಯ್ ಒಬ್ಬರೂ ಒಂದೊಂದು ಕುಟುಂಬದ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು. ಅದರ ಪ್ರಕಾರವೇ ಟಾಸ್ಕ್‌ ಆರಂಭಗೊಂಡಿತ್ತು. 

ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್‌, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್‌ ಶುರುವಾಗಿದೆಯೋ, ಒಲೆಯೊಳಗಿನ ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ. 

'ಡಿ ಬಾಸ್‌' ಪುತ್ರ ವಿನೀಶ್‌ಗೆ ಹುಟ್ಟುಹಬ್ಬದ ಸಂಭ್ರಮ: ಅವನ ಉತ್ಸಾಹವನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದ ವಿಜಯಲಕ್ಷ್ಮೀ!

ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ಎಂಬ ನಿಯಮವೇ ಈ ಚಕಮಕಿಗೆ ಕಾರಣವಾದಂತಿದೆ. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಂಗೀತಾ ಮತ್ತು ನಮ್ರತಾ ನಡುವಿನ ಗಲಾಟೆ ಮತ್ತು ವಿನಯ್‌ ಮತ್ತು ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗುವಂತಿದೆ. 

ಬಿಗ್ ಬಾಸ್ ಕನ್ನಡದ ಮೂಲಕ ಸ್ಟಾರ್ ಡಮ್ ಪಡೆದ ಸೆಲೆಬ್ರಿಟಿಗಳಿವರು…

ಹೀಗೆ ಜಗಳದ ಕಿಡಿ ಹೊತ್ತಿಕೊಂಡ ಸಂದರ್ಭ ಯಾವುದು? ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ನೋಡಲು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ನೇರಪ್ರಸಾರವನ್ನು ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?