ವಿಮಾನದ ಒಳಕ್ಕೆ ಬಂದ ಮಗುವಿಗೆ ಲಾಲಿ ಹಾಡಿದ ಸಂಗೀತಾ, ಬಿಗ್ ಬಾಸ್ ಮೊದಲ ದಿನವೇ ಟ್ವಿಸ್ಟ್

Published : Sep 07, 2026, 06:57 PM IST
bigg boss

ಸಾರಾಂಶ

ಬಿಗ್ ಬಾಸ್ 13ನೇ ಸೀಸನ್ ಆರಂಭದಲ್ಲೇ ಟ್ವಿಸ್ಟ್. ಪ್ರತಿ ಬಾರಿ ವೇದಿಕೆ ಮೇಲೆ ಬಂದ ಸ್ಪರ್ಧಿಗಳು ಮನೆಯೊಳಗೆ ಹೋದರೆ ಈ ಬಾರಿ ವಿಮಾನದಲ್ಲೇ ಉಳಿದಿದ್ದಾರೆ. ಇದರ ನಡುವೆ ವಿಮಾನ ಒಳಗೆ ಬಂದ ಪುಟ್ಟ ಕಂದನಿಗೆ ಸಂಗೀತಾ ಲಾಲಿ ಹಾಡಿದ್ದಾರೆ. ಮಗುವಿನ ನಗಿಸಿದ್ದು ಯಾರು?

ಬೆಂಗಳೂರು (ಸೆ.07) ಬಿಗ್ ಬಾಸ್ 13ನೇ ಆವೃತ್ತಿ ಅದ್ಧೂರಿಯಾಗಿ ಆರಂಭಗೊಂಡಿದೆ. ಗ್ರ್ಯಾಂಡ್ ಪ್ರೀಮಿಯರ್ ಮೂಲಕ 16 ಸ್ಪರ್ಧಿಗಳು ಕಣದಲ್ಲಿದ್ದಾರೆ. ವಿಶೇಷ ಅಂದರೆ ಈ ಬಾರಿ ವಿಮಾನ ಪರಿಕಲ್ಪನೆ ಮೂಲಕ ಹೊಸತನ ನೀಡಲಾಗಿದೆ. 16 ಸ್ಪರ್ಧಿಗಳು ವಿಮಾನದೊಳಗೆ ಉಳಿದುಕೊಂಡಿದ್ದಾರೆ. ಇನ್ನು ಮನೆ ಸೇರಿಲ್ಲ, ಇಷ್ಟೇ ಅಲ್ಲ ಆರಂಭದಲ್ಲೇ ಟ್ವಿಸ್ಟ್ ಕೊಟ್ಟು ವಿಮಾನದಲ್ಲೇ ಟಾಸ್ಕ್ ನೀಡಲಾಗಿದೆ. ವಿಮಾನದೊಳಕ್ಕೆ ಪುಟ್ಟ ಕಂದನ ಆಗಮನವಾಗಿದೆ. ಮಗುವನ್ನು ನಗಿಸಲು ಟಾಸ್ಕ್ ನೀಡಲಾಗಿದ್ದು, ಸಂಗೀತಾ ಲಾಲಿ ಹಾಡಿದ್ದಾರೆ. ಲಾಲಿ ಹಾಡಿ ಮುದ್ದು ಮಾಡಿದ ಸಂಗೀತಾ ಮಗುವನ್ನು ನೇರವಾಗಿ ಓಂ ಪ್ರಕಾಶ್ ಕೈಗೆ ನೀಡಿದ್ದಾರೆ. ಓಂ ಪ್ರಕಾಶ್ ಮ್ಯಾಜಿಕ್ ಮಾಡಿದ್ದಾರೆ.

ಮಗುವಿನ ಮುದ್ದು ಮಾಡಿದ ಸಂಗೀತಾ

ಪ್ರತಿ ಬಾರಿ ಕಿಚ್ಚು ಸುದೀಪ್ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡ ಬಳಿಕ ನೇರವಾಗಿ ಮನೆಯೊಳಗೆ ಪ್ರವೇಶ ಮಾಡುತ್ತಿದ್ದರು. ಆದರೆ ಈ ಬಾರಿ ಎಲ್ಲರು ವಿಮಾನದಲ್ಲೇ ಉಳಿಯಬೇಕಾಗಿದೆ. ವಿಮಾನದೊಳಗೆ ಬಂದ ಪುಟ್ಟ ಕಂದನ ಒಬ್ಬೊಬ್ಬೊರೆ ಎತ್ತಿಕೊಂಡು ಮುದ್ದಾಡಿದ್ದಾರೆ. ಆದರೆ ಮಗುವಿನ ಅಳು ನಿಲ್ಲಲಿಲ್ಲ. ಕೊನೆಗೆ ಸಂಗೀತಾ ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ಲಾಲಿ ಹಾಡಿದ್ದಾರೆ. ಸಂಗೀತಾ ಪ್ರೀತಿ, ಆರೈಕೆಗೆ ಮಗು ಅಳು ನಿಲ್ಲಿಸಿ ನಗಲು ಆರಂಭಿಸಿದೆ. ಅಲ್ಲಿಗೆ ಸ್ಪರ್ಧಿಗಳ ಪ್ರಯತ್ನ ಯಶಸ್ವಿಯಾಗಿದೆ.

ಸಂಗೀತಾ ಮಗುವಿನ ಅಳು ನಿಲ್ಲಿಸಿದ ನಗುವಂತೆ ಮಾಡಿದ್ದಾರೆ. ಇದೇ ವೇಳೆ ಸಂಗೀತಾ ಕೈಯಿಂದ ಮಗುವನ್ನು ಎತ್ತಿಕೊಂಡ ಓಂ ಪ್ರಕಾಶ್ ಹಣೆಗೆ ಮುತ್ತಿಕ್ಕಿದ್ದಾರೆ. ಓಂ ಪ್ರಕಾಶ್ ಕೈಗಳ ಸ್ಪರ್ಶಕ್ಕೆ ಮಗು ನಗಲು ಆರಂಭಿಸಿದೆ. ಇತ್ತ ಸಹ ಸ್ಪರ್ಧಿಗಳು ತಾತನ ಕೈಯಲ್ಲಿ ಮಗು ನಗುತ್ತಿದೆ ಎಂದು ಸಂಭ್ರಮಿಸಿದ್ದಾರೆ. ಆದರೆ ಈ ಟಾಸ್ಕ್ ಇಲ್ಲಿಗೆ ಮುಗಿದಿಲ್ಲ. ಈ ಟಾಸ್ಕ್‌ನಲ್ಲಿ ಕೆಲ ಟ್ವಿಸ್ಟ್ ನೀಡಲಾಗಿದೆ. ಈ ಕುತೂಹಲ ಇಂದು ರಾತ್ರಿ ತಣಿಯಲಿದೆ.

ಬಿಗ್ ಬಾಸ್ 13ರ ಸ್ಪರ್ಧಿಗಳು

ಬಿಗ್ ಬಾಸ್ 13ನೇ ಆವೃತ್ತಿ ಹಲವು ವಿಶೇಷತೆಗಳಿಂದ ಕೂಡಿದೆ. 16 ಸ್ಪರ್ಧಿಗಳು ಯಾರು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅದ್ದೂರಿ ಪ್ರೀಮಿಯರ್‌ನಲ್ಲಿ 16 ಸ್ಪರ್ಧಿಗಳು ವೇದಿಕೆ ಮೇಲೆ ಬಂದಿದ್ದಾರೆ.ಸೆಲೆಬ್ರೆಟಿಗಳಾದ ಜಗದೀಶ್ ಎಂಬಿ, ಸೌಂದರ್ಯ ಶೆಟ್ಟಿ, ಅವಿನಾಶ್ ಶತಮರ್ಶನ್, ಪ್ರಥಮ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ, ಕಾವ್ಯ ಗೌಡ, ಓಂ ಪ್ರಕಾಶ್ ರಾವ್, ಅಸಿಯಾ ಫಿರ್ಡೋಸ್, ತಾಂಡವ್ ರಾಮ್, ವೈಷ್ಣವಿ, ಯಶಸ್ ಕೃಷ್ಣ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಅಗ್ನಿಪರೀಕ್ಷೆ ಮೂಲಕ ಲಿಖಿತ್ ಗೊಂಡಿ, ಧನುಷ್, ಕೃಷ್ಣ ಶಾಸ್ತ್ರಿ ಹಾಗೂ ಮಂಜಾ ಬಿಗ್ ಬಾಸ್ 13ನೇ ಆವೃತ್ತಿಗೆ ಸೇರಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ​ ಮನೆಯಲ್ಲಿ ಮೊದಲ ದಿನವೇ ಹೊತ್ತಿಕೊಂಡ ಕಿಡಿ! ಗಗನ್​-ಮಂಜು ನಡುವೆ ಕಿತ್ತಾಟ, ಓಪನ್ ಚಾಲೆಂಜ್​
ಬಿಗ್‌ಬಾಸ್ ಮನೆಯೊಳಗೆ ಹಿಂಗ್ ಬಂದು, ಹಂಗೆ ಹೋದ ಅಮೂಲ್ಯಾ ಗೌಡ; ನಟ ವಿಷ್ಣುಕಾಂತ್ ಜೊತೆ ಎಂಟ್ರಿ