ನೀಟ್‌ ಪ್ರತಿಭಟನೆಯಿಂದ ಬಿಗ್‌ ಬಾಸ್‌ ವೇದಿಕೆಗೆ – ಸಲ್ಮಾನ್ ಮುಂದೆ ಜಗಳ ಆಡಿದ್ರೂ ಸಿಗ್ಲಿಲ್ಲ ಅವಕಾಶ

Published : Sep 07, 2026, 01:19 PM IST
rhiya ahir

ಸಾರಾಂಶ

ಬಿಗ್‌ ಬಾಸ್‌ ಹಿಂದಿ ಸೀಸನ್‌ 20 ಶುರುವಾಗಿದೆ. ಬಿಗ್‌ ಬಾಸ್‌ ಮನೆಗೆ ಯಾರೆಲ್ಲ ಹೋಗ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಮಧ್ಯೆ ಬಿಗ್‌ ಬಾಸ್‌ ವೇದಿಕೆ ಮೇಲೆ ನೀಟ್‌ ಹುಡುಗಿ ಗಮನ ಸೆಳೆದಿದ್ದಾಳೆ.

ಬಿಗ್ ಬಾಸ್ ಸೀಸನ್ 20 ಅದ್ಧೂರಿಯಾಗಿ ಆರಂಭಗೊಂಡಿದೆ. ಬಿಗ್‌ ಬಾಸ್‌ ಮನೆಗೆ ಯಾರೆಲ್ಲ ಬರ್ತಾರೆ ಎನ್ನುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗಿತ್ತು. ಈ ಬಾರಿ ಸ್ಪರ್ಧಿಗಳ ಆಯ್ಕೆಯನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಬಿಗ್‌ ಬಾಸ್‌ ಮನೆ ಒಳಗೆ ಹೋಗುವ ಮುನ್ನವೇ ನೀಟ್‌ ಹುಡುಗಿ ರಿಜೆಕ್ಟ್ ಆಗಿದ್ದಾರೆ.

ರಿಯಾ ಅಹಿರ್‌ ವರ್ಸಸ್‌ ವಲ್‌ ಗಿಲ್

ನೀಟ್ (NEET) ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸ್ ವ್ಯಾನ್ ಎದುರು ನಿಂತು ಗಮನ ಸೆಳೆದಿದ್ದ ಇನ್ಫ್ಲುಯೆನ್ಸರ್ ಹಾಗೂ ಮಾಡೆಲ್ ರಿಯಾ ಅಹಿರ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಬಂದಿದ್ದರು. ಆದ್ರೆ ಅವರ ಎಂಟ್ರಿಯನ್ನು ಈ ಬಾರಿ ಬಿಗ್ ಬಾಸ್ ತಂಡ ನೇರವಾಗಿ ನಿರ್ಧರಿಸಿರಲಿಲ್ಲ. ಬದಲಿಗೆ, ರಿಯಾ ಅಹಿರ್ ಮತ್ತು ಪಂಜಾಬಿ ನಟಿ ಹಾಗೂ ಇನ್ಫ್ಲುಯೆನ್ಸರ್ ಲವ್ ಗಿಲ್ ಅವರಲ್ಲಿ ಯಾರನ್ನು ಶೋಗೆ ಕಳುಹಿಸಬೇಕು ಎನ್ನುವುದನ್ನು ಜನರಿಗೆ ಬಿಡಲಾಗಿತ್ತು. ಜನರ ತೀರ್ಪು ರಿಯಾಗೆ ನಿರಾಸೆ ಮೂಡಿಸಿದೆ.

ನೀಟ್ ಪ್ರತಿಭಟನೆಯಿಂದ ರಿಯಾ ಅಹಿರ್ ಫೇಮಸ್

ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆದ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ರಿಯಾ ಅಹಿರ್ ಗಮನ ಸೆಳೆದಿದ್ದರು. ವಿದ್ಯಾರ್ಥಿಗಳಿದ್ದ ಪೊಲೀಸ್ ವ್ಯಾನ್ ಅನ್ನು ತಡೆಯಲು ಅವರು ಒಬ್ಬರೇ ವ್ಯಾನ್ನ ಮುಂದೆ ನಿಂತಿದ್ದರು. ಈ ಘಟನೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದಾದ ಬಳಿಕ ರಿಯಾ ಅವರ ಧೈರ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಪ್ರಸಿದ್ಧಿ ಬೆನ್ನಲ್ಲೆ ರಿಯಾ ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಡಲು ಬಂದಿದ್ದರು. ಆದ್ರೆ ಪಂಜಾಬಿ ನಟಿ ಮತ್ತು ಇನ್ಫ್ಲುಯೆನ್ಸರ್ ಲವ್ ಗಿಲ್ ಮುಂದೆ ಸೋಲಬೇಕಾಯ್ತು. ಇಬ್ಬರಲ್ಲಿ ಒಬ್ಬರ ಆಯ್ಕೆ ಬಂದಾಗ ಜನರು ಲವ್‌ ಗಿಲ್‌ ಆಯ್ಕೆ ಮಾಡ್ಕೊಂಡ್ರು.

ಲವ್ ಗಿಲ್ ಯಾರು?

ರಿಯಾ ಎದುರಾಳಿ ಲವ್ ಗಿಲ್ ಪಂಜಾಬಿ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಇನ್ಫ್ಲುಯೆನ್ಸರ್. ಬಿಗ್ ಬಾಸ್ ವೇದಿಕೆಯಲ್ಲಿ ರಿಯಾ ಅವರೊಂದಿಗೆ ನೇರವಾಗಿ ಮುಖಾಮುಖಿಯಾಗಿದ್ದು, ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಹೀಗಾಗಿ ಜನರ ವೋಟಿಂಗ್ಗೂ ಮುನ್ನವೇ ಇವರಿಬ್ಬರ ಪೈಪೋಟಿ ಸಾಕಷ್ಟು ಗಮನ ಸೆಳೆಯಿತು. ಕೊನೆಗೆ ನಡೆದ ಪಬ್ಲಿಕ್ ವೋಟಿಂಗ್ನಲ್ಲಿ ಲವ್ ಗಿಲ್ ಹೆಚ್ಚು ವೋಟ್ ಪಡೆದುಕೊಂಡರು. ಹೀಗಾಗಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 20ಗೆ ಲವ್ ಗಿಲ್ ಎಂಟ್ರಿ ಪಡೆದಿದ್ದಾರೆ. ಇತ್ತ ರಿಯಾ ಅಹಿರ್ ಮನೆಗೆ ವಾಪಸ್‌ ಆಗಿದ್ದಾರೆ.

ವೇದಿಕೆಯಲ್ಲೇ ರಿಯಾ-ಲವ್ ಜಗಳ

ವೋಟಿಂಗ್ ಮುನ್ನ ರಿಯಾ ಮತ್ತು ಲವ್ ನಡುವೆ ವೇದಿಕೆಯಲ್ಲಿ ಮಾತಿನ ಚಕಮಕಿ ಶುರುವಾಗಿತ್ತು. ರಿಯಾ, ತಾನು ನಿಲ್ಲಿಸಿದ್ದು ಪೊಲೀಸ್ ವ್ಯಾನ್ ಎಂದು ಸ್ಪಷ್ಟಪಡಿಸಿ ಲವ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು. ಇದಕ್ಕೆ ಲವ್ ಕೂಡ ತಿರುಗೇಟು ನೀಡಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಪ್ರಶ್ನಿಸುವಂತಾಯಿತು. ರಿಯಾ ಮತ್ತು ಲವ್ ನಡುವೆ ಮಾತಿನ ಜಗಳ ನಡೆಯುತ್ತಿದ್ದರೂ ಸಲ್ಮಾನ್ ಖಾನ್ ಮಧ್ಯಪ್ರವೇಶ ಮಾಡಲಿಲ್ಲ.ಇಬ್ಬರ ಮಾತುಗಳನ್ನು ಅವರು ಸುಮ್ಮನೆ ಕೇಳುತ್ತಾ, ಯಾವುದೇ ಒಬ್ಬರ ಪರ ನಿಲ್ಲದೆ ತಟಸ್ಥವಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ ಬಾಸ್‌ ಕನ್ನಡ 13: ಯಾರು ಈ ‘ಯುಕೆ ಹುಲಿ’ ಕಿರಣ್ ಶಾಸ್ತ್ರಿ? ಜವಾರಿ ಮಾತಿನಿಂದಲೇ ಸದ್ದು, ಮೊದಲ ದಿನವೇ ಕಿರಿಕ್!
Bigg Boss ಎಲ್ಲಾ ಭಾಷೆಗಳ ನಿರೂಪಕರ ಸಂಭಾವನೆ ರಿವೀಲ್​: ಯಾರಿಗೆ ಹೆಚ್ಚು, ಕನ್ನಡಕ್ಕೆ ಇದೆಂಥ ಅನ್ಯಾಯ