ಫಸ್ಟ್‌ ಟೈಮ್‌ನಿಂದಲೂ ಪೀರಿಯಡ್ಸ್‌ ರೆಗ್ಯೂಲರ್ ಇಲ್ಲ, ಸೊಸೈಟಿಯಲ್ಲಿ ಪಾಠ ಮಾಡೋರಿಲ್ಲ: ಬಿಗ್ ಬಾಸ್ ಸಂಗೀತಾ ಶೃಂಗೇರಿ

ಇದ್ದಕ್ಕಿದ್ದಂತೆ ಸಣ್ಣಗಾದ ಸಂಗೀತಾ ಶೃಂಗೇರಿ. ಆರೋಗ್ಯ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಿಕ್ಕ ಉತ್ತರವಿದು...


777 ಚಾರ್ಲಿ ಚಿತ್ರದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ ಸಂಗೀತಾ ಶೃಂಗೇರಿ ಈಗ ಬಿಗ್ ಬಾಸ್ ಮನೆಯಲ್ಲಿ ಬೋಲ್ಡ್‌ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ಸಿನಿಮಾ ಮತ್ತು ಬಿಗ್ ಬಾಸ್ ಎಂಟ್ರಿ ನಡುವೆ ಇದ್ದಕ್ಕಿದ್ದಂತೆ ಸಣ್ಣಗಾಗಿ 6 ಪ್ಯಾಕ್ ಮಾಡುವ ಮಟ್ಟಕ್ಕೆ ಸಂಗೀತಾ ಬದಲಾಗಿ ಬಿಟ್ಟರು. ಇದಕ್ಕೆ ಕಾರಣ ಏನೆಂದು ನೆಟ್ಟಿಗರು ಆಗಾಗ ಪ್ರಶ್ನೆ ಮಾಡುತ್ತಿದ್ದರು. ಆರೋಗ್ಯ ಸಮಸ್ಯೆ ಬಗ್ಗೆ ಸಂಗೀತಾ ಮಾತುಗಳಿದು.....

'ನಾನು ಸಂಪೂರ್ಣವಾಗಿ ಟ್ರಾನ್ಸ್‌ಫಾರ್ಮೇಶನ್ ಮಾಡಿಕೊಂಡಿದ ಕಾರಣ ನನಗೆ PCOD ಇತ್ತು. ಈ ವಿಚಾರ ನನಗೆ ಗೊತ್ತಿರಲಿಲ್ಲ. ಈ ರೀತಿ ಸಮಸ್ಯೆ ಇತ್ತು ಎಂದು ಜನರು ಹೇಳಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಪಿಸಿಓಡಿ ಅನ್ನೋದು 80% ಮಹಿಳೆಯರಿಗೆ ಇದೆ. ಯಾರೂ ಹೇಳಿಕೊಳ್ಳಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ. ಪಿಸಿಓಡಿ ಅನ್ನೋದು ಕಾಯಿಲೆ ಅಲ್ಲ. ನಮ್ಮ ಲೈಫ್‌ ಸ್ಟೈಲ್‌ನಿಂದ ಆಗಿರುವುದು. ಈಗ ಸಿಗುತ್ತಿರುವ ಆಹಾರಗಳಿಂದ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು. ಈಗ ಸಿಗುವ ಅಹಾರಗಳಲ್ಲಿ ನಿಜವಾದ ಸತ್ವಗಳು ಇರುವುದಿಲ್ಲ. ಸಸ್ಯಹಾರಿಗಳಿಗೆ ಜಾಸ್ತಿ ಸಮಸ್ಯೆ ಆಗುತ್ತಿರುವುದು. ನಾನು ಭೇಟಿ ಮಾಡುತ್ತಿರುವ ಪ್ರತಿಯೊಬ್ಬರಿಗೂ ಈ ಸಮಸ್ಯೆ ಇದೆ' ಎಂದು ಸಂಗೀತಾ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Latest Videos

ನನಗೇನು ಬೇಕೋ ಹಾಕೋತ್ತೀನಿ; ಬಿಕಿನಿ ಬಗ್ಗೆ ಕಾಮೆಂಟ್ ಮಾಡಿದವರಿಗೆ ತಿರುಗೇಟು ಕೊಟ್ಟ ಸಂಗೀತಾ!

'ಮೊದಲ ಸಲ ಪೀರಿಯಡ್ಸ್‌ ಆದ ಸಮಯದಿಂದಲೂ ನನಗೆ ರೆಗ್ಯೂಲರ್ ಆಗಿ ಇರಲಿಲ್ಲ ಅದರ ಬಗ್ಗೆ ನಾನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ನಮ್ಮ ಸೊಸೈಟಿಯಲ್ಲಿ ಹೆಣ್ಣು ಮಕ್ಕಳಿಗೆ ಪೀರಿಯಡ್ಸ್‌ ಬಗ್ಗೆ ಎಜುಕೇಷನ್‌ ಇಲ್ಲ. ಈ ವಿಚಾರ ನನಗೆ ಗೊತ್ತಾಗಿದ್ದು ನನ್ನ ಜಿಮ್ ಕೋಜ್ ಹೇಳಿದ ಮೇಲೆ. ಹೀಗಾಗಿ 2021 ನಾನು ಸಂಪೂರ್ಣಳಾಗಿ ಗುಣಮುಖಳಾದೆ. ಪಿಸಿಓಡಿ ಫುಲ್ ಕ್ಲಿಯರ್ ಆಯ್ತು. ಯಾವ ಔಷಧಿನೂ ತೆಗೆದುಕೊಂಡಿಲ್ಲ. ನಾಯಕಿ ಆದ ಮೇಲೆ ನನ್ನ ಮೇಲೆ ಜವಾಬ್ದಾರಿಗಳು ಜಾಸ್ತಿ ಇರುತ್ತದೆ ಏಕೆಂದರೆ ಲಕ್ಷ ಜನರು ಅಲ್ಲದೆ ಇದ್ದರೂ ಸ್ವಲ್ಪ ಜನರು ನನ್ನನ್ನು ನೋಡಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರೆ ಅನ್ನೋ ಖುಷಿ ಇದೆ' ಎಂದು ಸಂಗೀತಾ ಹೇಳಿದ್ದಾರೆ. 

ಸ್ಕೂಲ್ ಡೇಗೆ ಹೀಗೆ ರೆಡಿ ಮಾಡ್ತಿದ್ರು; ಜಾತ್ರೆ ಎಂದು ಸಂಗೀತಾ ಕಾಲೆಳೆದ ನೆಟ್ಟಿಗರು

ಹೀಗಾಗಿ ಬಿಗ್ ಬಾಸ್ ಮನೆಯಲ್ಲಿದ್ದರೂ ಪ್ರತಿ ದಿನ ಸಂಗೀತಾ ತಪ್ಪದೆ ವರ್ಕೌಟ್ ಮಾಡುತ್ತಾರೆ. ಅಲ್ಲದೆ ಇನ್ನಿತ್ತರ ಸ್ಪರ್ಧಿಗಳು ಸೇರಿಸಿಕೊಂಡು ವರ್ಕೌಟ್ ಮಾಡುತ್ತಾರೆ.

click me!