ಬಿಗ್‌ಬಾಸ್‌ ಮನೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ; ನವೆಂಬರ್ 14 ಎಂದು ಕಿರುಚಿದ ಅವಿನಾಶ್ ಶೆಟ್ಟಿಗೆ ಮುಖಭಂಗ!

By Shriram Bhat  |  First Published Nov 29, 2023, 11:26 AM IST

ತುಕಾಲಿ ಸಂತೋಷ್ ಮತ್ತು ಮೈಕಲ್ ಇಬ್ಬರೂ ಕೇಕ್‌ ಅನ್ನು ತಿನ್ನುತ್ತಿದ್ದಾರೆ. ಯಾರು ಮೊದಲು ತಿಂದು ತಮ್ಮ ತಲೆಮೇಲೆ ಕಟ್ಟಿಕೊಂಡಿರುವ ಗಂಟೆಯನ್ನು ಬಾರಿಸುತ್ತಾರೋ ಅವರಿಗೆ ಮಾತ್ರ ಪ್ರಶ್ನೆಯನ್ನು ಕೇಳುವ ಅಧಿಕಾರ ಸಿಗುತ್ತದೆ. ಈ ಆಟದಲ್ಲಿ ಮೈಕಲ್ ಮೊದಲು ತಿಂದು ತಲೆಮೇಲಿನ ಗಂಟೆ ಬಾರಿಸಿದ್ದಾರೆ. 


ಬಿಗ್‌ಬಾಸ್ ಮನೆಗೆ ಪವಿ ಮತ್ತುಅವಿನಾಶ್‌ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದ ಹೊಸದೊಂದು ಗಾಳಿ ಬೀಸುತ್ತಿದೆ. ಹೊಸ ಸ್ಪರ್ಧಿಗಳ ಜೊತೆಗಿನ ಒಡನಾಟ, ಮನೆಯೊಳಗಿನ ಗುಂಪುಗಳ ಸಮತೋಲವನ್ನು ತಪ್ಪಿಸುತ್ತಿದೆ. ಟಾಸ್ಕ್‌ಗಳನ್ನು ದಿಕ್ಕು ದೆಸೆಗಳನ್ನು ಬದಲಿಸುತ್ತಿದೆ. ಅಷ್ಟೇ ಅಲ್ಲ, ಟಫ್‌ ಟಾಸ್ಕ್‌ಗಳಲ್ಲಿ ದಣಿದಿದ್ದ ಮನೆಯವರಿಗೆ ಮಜವಾದ ಟಾಸ್ಕ್‌ಗಳು ಎದುರಾಗುತ್ತಿವೆ. ಇಂಥದೊಂದು ಟಾಸ್ಕ್‌ನ ಝಲಕ್ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಸಿಕ್ಕಿದೆ.

ತುಕಾಲಿ ಸಂತೋಷ್ ಮತ್ತು ಮೈಕಲ್ ಇಬ್ಬರೂ ಕೇಕ್‌ ಅನ್ನು ತಿನ್ನುತ್ತಿದ್ದಾರೆ. ಯಾರು ಮೊದಲು ತಿಂದು ತಮ್ಮ ತಲೆಮೇಲೆ ಕಟ್ಟಿಕೊಂಡಿರುವ ಗಂಟೆಯನ್ನು ಬಾರಿಸುತ್ತಾರೋ ಅವರಿಗೆ ಮಾತ್ರ ಪ್ರಶ್ನೆಯನ್ನು ಕೇಳುವ ಅಧಿಕಾರ ಸಿಗುತ್ತದೆ. ಈ ಆಟದಲ್ಲಿ ಮೈಕಲ್ ಮೊದಲು ತಿಂದು ತಲೆಮೇಲಿನ ಗಂಟೆ ಬಾರಿಸಿದ್ದಾರೆ. ಅವರ ಮೊದಲ ಪ್ರಶ್ನೆ ಹೀಗಿತ್ತು: ‘ಯಾರ ಜನ್ಮದಿನವನ್ನು ಮಕ್ಕಳ ಜನ್ಮದಿನಾಚರಣೆಯನ್ನಾಗಿ ಆಚರಿಸುತ್ತಾರೆ?

Tap to resize

Latest Videos

ತಾಳಿ ಬಿಗಿಯಾಗಿ ಕಟ್ಟಪ್ಪ, ಹೊಸ ಗ್ಲಾಸು ಅಷ್ಟೊಂದ್ ಬಿಗಿಯಾಗಿ ಕಟ್ಬೇಡ; ಏನಿದು ಲಕ್ಷ್ಮೀ ನಿವಾಸ ಕಥೆ!

ಇಷ್ಟು ಸುಲಭದ ಪ್ರಶ್ನೆಗೆ ಅಷ್ಟೇ ಉತ್ಸಾಹದಿಂದ ಎದ್ದುನಿಂತ ಅವಿನಾಶ್‌ ಶೆಟ್ಟಿ, ‘ನವೆಂಬರ್ 14’ ಎಂದು ಕಿರುಚಿದ್ದಾರೆ! ಪ್ರಶ್ನೆಯನ್ನೇ ಅರ್ಥಮಾಡಿಕೊಳ್ಳುವ ವ್ಯವಧಾನ ಇಲ್ಲದವರು ಸರಿಯಾದ ಉತ್ತರ ಕೊಡಲು ಹೇಗೆ ಸಾಧ್ಯ? ಎರಡನೇ ಪ್ರಶ್ನೆ ಇನ್ನೂ ಸುಲಭವಾಗಿತ್ತು… ‘ಕನ್ನಡ ವರ್ಣಮಾಲೆಯಲ್ಲಿ ಒಟ್ಟೂ ಎಷ್ಟು ಅಕ್ಷರಗಳಿವೆ?’
ಈ ಪ್ರಶ್ನೆಗೆ ಯಾರಾದರೂ ಉತ್ತರಿಸಿದರಾ? ಆ ಉತ್ತರ ಸರಿಯಾಗಿತ್ತಾ?

ನನಗೆ ಪ್ರೀತಿ ಬೇಕಿತ್ತು ಅನುಕಂಪವಲ್ಲ, ಬಿಗ್ ಬಾಸ್ ಮನೆ ಅದನ್ನು ಕೊಟ್ಟಿದೆ; ನೀತು ವನಜಾಕ್ಷಿ

ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರತ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು. 

 

click me!