BBK9; ಗೊಂಬೆಗಾಗಿ ಬಿಗ್ ಮನೆಯಲ್ಲಿ ತಾರಕಕ್ಕೇರಿದ ಜಗಳ: ಸ್ಪರ್ಧಿಗಳ ಕಿತ್ತಾಟದ ವಿಡಿಯೋ ವೈರಲ್

Published : Nov 15, 2022, 04:17 PM IST
BBK9; ಗೊಂಬೆಗಾಗಿ ಬಿಗ್ ಮನೆಯಲ್ಲಿ ತಾರಕಕ್ಕೇರಿದ ಜಗಳ: ಸ್ಪರ್ಧಿಗಳ ಕಿತ್ತಾಟದ ವಿಡಿಯೋ ವೈರಲ್

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಗೊಂಬೆಗಾಗಿ ಕಿತ್ತಾಡಿಕೊಂಡಿದ್ದಾರೆ. ಸ್ಪರ್ಧಿಗಲ ನಡುವಿನ ಜಗಳ ತಾರಕಕ್ಕೇರಿದ್ದು ವಿಡಿಯೋ ವೈರಲ್ ಆಗಿದೆ. 

ಬಿಗ್ ಬಾಸ್ ಸೀಸನ್ 9, 8ನೇ ವಾರ ನಡೆಯುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ, ಕೂಗಾಟ ಕೂಡ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ 7ನೇ ವಾರದ ಎಲಿಮಿನೇಷನ್ ಇರಲಿಲ್ಲ. ಹಾಗಾಗಿ 7ನೇ ವಾರ ಯಾರು ಕೂಡ ಮನೆಯಿಂದ ಹೊರಹೋಗಿಲ್ಲ. ಹಾಗಾಗಿ 8ನೇ ವಾರದಲ್ಲಿ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ. ಈ ನಡುವೆ ಸ್ಪರ್ಧಿಗಳು ಸಖತ್ ಆಕ್ಟೀವ್ ಆಗಿ ಟಾಸ್ಕ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊಂಬೆಗಳನ್ನು ಮಾಡುವ ಟಾಸ್ಕ್ ನೀಡಿದೆ. ಬಿಗ್ ಬಾಸ್ ಮನೆ ಗೊಂಬೆ ತಯಾರಿ ಮಾಡುವ ಫ್ಯಾಕ್ಟರಿಯಾಗಿ ಬದಲಾಗಿದೆ. 

ಗೊಂಬೆ ಮಾಡಲು ಬಿಗ್ ಬಾಸ್ ಎರಡು ತಂಡವಾಗಿ ರೂಪಿಸಿದೆ. ಗೊಂಬೆ ತಯಾರಿಸಲು ಬೇಕಾಗುವ ವಸ್ತುಗಳನ್ನು ಪಡೆಯಲು ಎರಡೂ ತಂಡಗಳು ಕಿತ್ತಾಡಿದ್ದಾರೆ. ಸ್ಪರ್ಧಿಗಳ ನಡುವೆ ಜಗಳ ಜೋರಾಗಿದೆ. ಪ್ರಶಾಂತ್ ಸಂಬರಗಿ, ರಾಕೇಶ್, ಅನುಪಮಾ ನಡುವೆ ಜಗಳ ಜೋರಾಗಿದೆ. ಕಿತ್ತಾಟದ ನಡುವೆಯೂ ಸ್ಪರ್ಧಿಗಳು ಟಾಸ್ಕ್ ಮುಗಿಸುತ್ತಾರಾ ಅಥವಾ ಕಿತ್ತಾಟದಲ್ಲೇ ಟಾಸ್ಕ್ ಮುಗಿಯುತ್ತಾ ಎನ್ನುವುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇಂದು (ನವೆಂಬರ್ 15) ರಿಲೀಸ್ ಆಗಿರುವ ಪ್ರೋಮೋದಲ್ಲಿ ಸ್ಪರ್ಧಿಗಳ ಕಿತ್ತಾಟ ರಿವೀಲ್ ಆಗಿದೆ. 

ಪ್ರೋಮೋಗೆ ಅಭಿಮಾನಿಗಳ ತರೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಯಾರು ಎಷ್ಟೇ ಜಗಳ ಆಡಿದರೂ ಸಹ ನೋಡಕ್ಕೆ ನಾವಿದ್ದೀವಿ. ಯಾರು ತಪ್ಪು, ಯಾರು ಸರಿ ಎಂದು ನೋಡೋದು ನಾವು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಅಸಲಿ ಆಟ, ನಕಲಿ ಆಟ ನೋಡೊಕೆ ನಾವಿದ್ದೀವಿ' ಎಂದು ಮತ್ತೋರ್ವ ಹೇಳಿದ್ದಾರೆ. 'ಅಲ್ಲಾ ರಾಕ್ಷಸ ಅನ್ನೋ ಪದ ಇವ್ರಿಗೆ ಇಷ್ಟೊಂದು ತೊಂದರೆ ಆಗಿದೆ ಅಂದ್ರೆ ಸಮಯ ಸಾಧಕಿ ಅನ್ನೋ ಪದ ಅವ್ಳಿಗೆ ಎಷ್ಟು ಹಿಮ್ಸೆ ಆಗಿರ್ಬೇಡ' ಎಂದು ಪ್ರಶ್ನಿಸಿದ್ದಾರೆ.

BBK9; ಚೀಪ್ ಮೆಂಟಾಲಿಟಿ ನನಗಿಲ್ಲ; ರೂಪೇಶ್‌ ಆರೋಪಕ್ಕೆ ದಿವ್ಯಾ ಉರುಡುಗ ಕಿಡಿ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9; ಆರ್ಯವರ್ಧನ್ ಪರ್ಸನಲ್ ಮ್ಯಾಟ್ರು ಕೆದಕಿದ ರೂಪೇಶ್: ಬಿಗ್ ಮನೆಯಲ್ಲಿ ತಾರಕಕ್ಕೇರಿದ ಜಗಳ

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಇದ್ದಾರೆ. 7ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?