
ಅನ್ ಸೀನ್ ಕತೆಗಳಲ್ಲಿ ಹೊರಹೊಮ್ಮುವ ವಿಚಾರಗಳು ತುಂವಾ ಸ್ವಾರಸ್ಯಕರವಾಗಿರುತ್ತವೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡ ಆರ್ ಜೆ ಪೃಥ್ವಿ ಮನೆಯವರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವಾಗಲೇ ಡೈಲಾಗ್ ಗಳ ಮೂಲಕ ಅಬ್ಬರ ತೋರಿಸಿದ್ದರು. ನಂತರ ಮನೆಯಳಗೆ ಹರೀಶ್ ರಾಜ್ ಅವರರ ದನಿಗೆ ಮರುಳಾಗಿ ಫ್ರಾಂಕ್ ಗೆ ಒಳಗಾಗಿದ್ದರು. ಸ್ವಿಮಿಂಗ್ ಪೂಲ್ ಗೆ ಸಹ ಜಂಪ್ ಮಾಡಿದ್ದರು.
ಇಂಥ ಆರ್ ಜೆ ಪೃಥ್ವಿ ತಮ್ಮ ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ನಾನು ಸದ್ಯ ಸಿಂಗಲ್, ಎರಡು ಮದುವೆಯಾಗಿದ್ದೆ .. ಎಲ್ಲವೂ ಶಾರ್ಟ್ ಜರ್ನಿ . ನಾನು ಈಗ ಒಂಟಿ ಕಪಲ್ ! ಎಂದು ಮಾತು ಮುಂದುವರಿಸಿದರು ಪೃಥ್ವಿ.
ಆರು ತಿಂಗಳಿನಿಂದ ಡಿಫರೆಂಟ್ ಆಗಿ ಮೀಸೆ ಬಿಟ್ಟಿದ್ದೇನೆ. ಮೇನ್ಸ್ ವೇರ್ ಧರಿಸುವುದೇ ನನಗೆ ಬೇಜಾರು. ಚಡ್ಡಿ-ಟೀ ಶರ್ಟ್-ಪ್ಯಾಂಟ್ ಇದನ್ನು ಮಾತ್ರ ಹಾಖುತ್ತೇನೆ. ನೀವು ನಂಬಲಿಕ್ಕೆ ಇಲ್ಲ.. ನನ್ನ ಬಳಿ ಒಂದೇ ಒಂದು ಜೀನ್ಸ್ ಇಲ್ಲ ಎಂದರು.
ಮೂರು ಅತ್ಯದ್ಭುತ ಸಿನಿಮಾ ಮಾಡಿದ್ದೇನೆ. ಮನಿ ಹನಿ ಶನಿ, ರೆಡ್ ಜತೆಗೆ ಅಡಲ್ಟ್ ಮೂವಿ ಬ್ಲ್ಯೂ ಐಸ್.. ಈ ಮೂವಿಯ ಟ್ರೈಲರ್ ಗೆ ಒಂದು ಮಿಲಿಯನ್ ವೀವ್ಸ್ ಬಂದಿದೆ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.