ಮನೆ ಮಂದಿಯಲ್ಲಾ ಜೊತೆ ಜೊತೆಯಾಗಿ ನೋಡಿ ಮೆಚ್ಚಿಕೊಂಡಿರುವ ಸಾಲ್ಟ್ ಆ್ಯಂಡ್ ಪೆಪ್ಪರ್ ಹೀರೋ ಅರ್ಯವರ್ಧನ್ ಅಲಿಯಾಸ್ ಅನಿರುದ್ಧ ರಿಯಲ್ ಲೈಫ್ ಪೋಷಕರ ಬಗ್ಗೆ ತಮ್ಮ ಫೇಸ್‌ಬುಕ್ ಪೋಸ್ಟ್‌ವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಓದಿ....
ಪ್ರಸಾರವಾಗುತ್ತಿರುವ ದಿನದಿಂದಲೇ ಮೊದಲ ಸ್ಥಾನದಲ್ಲಿದ್ದು, ಕನ್ನಡ ಕಿರುತೆರೆಯಲ್ಲಿಯೇ ಇತಿಹಾಸ ಸೃಷ್ಟಿಸುವ 'ಜೊತೆ ಜೊತೆಯಲಿ' ಧಾರಾವಾಹಿ ವಿಶೇಷ ಕಥೆ ಹಾಗೂ ವಿಶಿಷ್ಟ ಕಲಾವಿದರಿಂದ ಪ್ರೇಕ್ಷಕರನ್ನು ಸೆಳೆದಿಡುವಲ್ಲಿ ಯಶಸ್ವಿಯಾಗಿದೆ.
'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?
ನವಿರಾದ ಪ್ರೇಮ ಕಥೆಯೊಂದಿಗೆ, ಪ್ರಬುದ್ಧ ನಟನೆ ಈ ಸೀರಿಯಲ್ ಪ್ಲಸ್ ಪಾಯಿಂಟ್ ಆಗಿದ್ದು, ನಟರು ಜನರ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. 45 ವರ್ಷದವನೊಂದಿಗೆ 20ರ ಹರೆಯದ ಚೆಲುವೆ ಮನ ಸೋಲುವ ಈ ಕಥೆಯಿಂದ ಹೀರೋ ಅನಿರುದ್ಧರಿಗೆ ದಿನೆ ದಿನೇ ಹುಡುಗಿಯರ ಕಾಟವೂ ಹೆಚ್ಚುತ್ತಿದೆಯಂತೆ!
‘ಜೊತೆ ಜೊತೆಯಲಿ’ ಅನಿರುದ್ಧ್ ಒಂದು ದಿನದ ಸಂಭಾವನೆ ಇಷ್ಟೊಂದಾ!?
ಒಮ್ಮೆ ನೋಡಿದರೆ ಸಾಕು ಈತನನ್ನು ಮತ್ತೆ ಮತ್ತೆ ನೋಡಬೇಕು ಎಂದನಿಸುವ ವ್ಯಕ್ತಿತ್ವವುಳ್ಳ ಅರ್ಯವರ್ಧನ್ ಪಾತ್ರವನ್ನು ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ ನಿರ್ವಹಿಸುತ್ತಿದ್ದಾರೆ. ಇವರ ಮ್ಯಾನರಿಸಂಗೆ ಎಲ್ಲರೂ ಫುಲ್ ಫಿದಾ ಆಗಿದ್ದಾರೆ. ತನ್ನದೆೇ ಆದ ಗಾಂಭೀರ್ಯ ಹೊಂದಿರುವ ಅರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಇದೀಗ ಹುಡುಗಿಯರ ಡ್ರೀಮ್ ಬಾಯ್. ತಮಾಷೆ ಮಾಡಿಕೊಂಡು ತುಂಟ ಹುಡುಗಿಯಂತೆ ಆಫೀನಲ್ಲಿ ಓಡಾಡುವ ಅನು ಈಗಾಗಲೇ ಪ್ರೇಕ್ಷಕರ ಮನ ಮಗಳಂತಾಗಿದ್ದಾಳೆ. ಅರ್ಯವರ್ಧನ್ ಜೀವನದ ಫ್ಲ್ಯಾಶ್ ಬ್ಯಾಕ್ ತೋರಿಸುವ ಗೋಜಿಗೆ ಹೋಗದ ನಿರ್ದೇಶಕರಿನ್ನೂ ಆತನ ಪೋಷಕರನ್ನು ತೋರಿಸುವ ಮನಸ್ಸು ಮಾಡಿಲ್ಲ. ಅಥವಾ ಕಥೆ ಹೇಗೆ ತಿರುವುದು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
‘ಜೊತೆ ಜೊತೆಯಲಿ’ಗೂ ತಟ್ಟಿದ ಕಳಂಕ: ಜೀ ಟಿವಿ ಸ್ಪಷ್ಟನೆ ಇದು
ಸರಿ ಬಿಡಿ. ಸೀರಿಯಲ್ ನೋಡಿ ಎಲ್ಲವೂ ಗೊತ್ತಾಗುತ್ತೆ. ಆದರೆ, ನಾವಿಲ್ಲಿ ಹೇಳ ಹೊರಟಿರುವುದು ಅನಿರುದ್ಧ ಅವರ ರಿಯಲ್ ಲೈಫ್ ಬಗ್ಗೆ. ಇತ್ತೀಚೆಗೆ ಅತ್ತೆ ಭಾರತಿ ವಿಷ್ಣುವರ್ಧನ್, ಮಗಳು ಹಾಗೂ ತಾಯಿ-ತಂದೆ, ಪತ್ನಿಯೊಂದಿಗಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, 'ನಾಲ್ವರು ಅಮ್ಮಂದಿರ ಜೊತೆಯಲಿ...' ಎಂದು ಬರೆದುಕೊಂಡಿದ್ದಾರೆ. ತಾಯಿ ಹಾಗೂ ಅತ್ತೆಯೊಂದಿಗೆ ಜೀವನ ಸಂಗಾತಿ ಪತ್ನಿ ಕೀರ್ತಿ ಹಾಗೂ ಮಗಳನ್ನೂ ಅನಿರುದ್ಧ ಅಮ್ಮನೆಂದೇ ಪರಗಣಿಸಿರುವುದು ಈ ಪೋಸ್ಟ್‌ನಿಂದ ಗೊತ್ತಾಗುತ್ತದೆ.
ಸ್ಯಾಂಡಲ್‌ವುಡ್ ಖ್ಯಾತ ನಟ ಡಾ.ವಿಷ್ಣುವರ್ಧನ್ ಹಾಗೂ ನಟಿ ಭಾರತಿಯ ಹಿರಿಯ ಅಳಿಯ ಅನಿರುದ್ಧ್ ತಂದೆ ಹೆಸರು ಶ್ರೀ ಹರ್ಷವರ್ಧನ್ ಹಾಗೂ ತಾಯಿ ಉಜ್ವಲಾ. ಪತ್ನಿ ಕರ್ತೀ ಹಾಗೂ ಒಂದು ಗಂಡು ಹಾಗೂ ಹೆಣ್ಣು ಮಕ್ಕಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇದ್ದಾರೆ ಇವರು.
Marital Status ತುಂಬುವಾಗ ಆರ್ಯವರ್ಧನ್ ಬೇಸರಿಸಿಕೊಳ್ಳೋದ್ಯಾಕೆ?