
ಬಿಗ್ ಬಾಸ್ ಕನ್ನಡ ಸೀಸನ್ 10 ಮೂರನೆಯ ವಾರದ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇಂದು (28 ಅಕ್ಟೋಬರ್ 2023) ಮೂರನೆಯ ವಾರದ ಅಂತ್ಯದಲ್ಲಿ ನಡೆಯುವ (ವೀಕೆಂಡ್) 'ಕಿಚ್ಚನ ಪಂಚಾಯಿತಿ' ಸಂಚಿಕೆ ಪ್ರಸಾರವಾಗಲಿದೆ. ಇದರಲ್ಲಿ ನಟ ಕಿಚ್ಚ ಸುದೀಪ್ ವಾರದ ಟಾಸ್ಕ್‌ಗಳು ಹಾಗೂ ಬಿಗ್ ಬಾಸ್ ಮನೆಯಲ್ಲಿನ ಹಲವು ಸಂಗತಿಗಳ ಬಗ್ಗೆ ಸ್ಪರ್ಧಿಗಳ ಜತೆ ಮಾತನಾಡಲಿದ್ದಾರೆ. ಇಂದಿನ ಸಂಚಿಕೆಯ ಪ್ರೊಮೋ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಭಾರೀ ಕುತೂಹಲ ಸೃಷ್ಟಿಸುತ್ತಿದೆ.
ಇಂದಿನ ಪ್ರೊಮೋದಲ್ಲಿ, ಅಲ್ಲಿರುವ ಸ್ಪರ್ಧಿಗಳಿಗೆ ಅವರವರ ಅಭಿಮಾನಿಗಳು ಕಳಿಸಿಕೊಟ್ಟಿರುವ ಗಿಫ್ಟ್ ಬಾಕ್ಸ್ ಓಪನ್ ಮಾಡಲಾಗಿದೆ. ಅದರಲ್ಲಿ, ನಮ್ರತಾ ಗೌಡ, ವಿನಯ್, ತುಕಾಲಿ ಸಂತು ಅವರ ಬಗ್ಗೆ ವೀಕ್ಷಕರ ಅಭಿಪ್ರಾಯ ಏನು ಎಂಬುದನ್ನು ಸುದೀಪ್ ರಿವೀಲ್ ಮಾಡಿದ್ದಾರೆ. ಮಿಕ್ಕವರ ಬಗ್ಗೆ ಏನು ಎಂಬುದನ್ನು ಸಂಚಿಕೆ ನೋಡಿ ತಿಳಿದುಕೊಳ್ಳಬಹುದು.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ತಮ್ಮ ಬಗ್ಗೆ ಹೊರಗಡೆ ಇರುವ ಬಿಗ್ ಬಾಸ್ ಟಿವಿ ವೀಕ್ಷಕರಿಗೆ ಯಾವ ಅಭಿಪ್ರಾಯ ಮೂಡಿಸಿದ್ದಾರೆ ಎಂಬುದನ್ನು ಈ ಮೂಲಕ ಅರ್ಥೈಸಬಹುದು ಎಂದಿದ್ದಾರೆ ಕಿಚ್ಚ ಸುದೀಪ್. ಅವರ ಮಾತನ್ನು ಕೇಳಿದ ಬಳಿಕ ಸ್ಪರ್ಧಿಗಳು ಸ್ವಲ್ಪ ಸೀರಿಯಸ್ ಆಗಿದ್ದಾರೆ. ಅದಕ್ಕೂ ಮೊದಲು ಅದನ್ನೆಲ್ಲ ತಮಾಷೆ ಎಂಬಂತೆ ತೆಗೆದುಕೊಂಡಿದ್ದ ಕಂಟೆಸ್ಟಂಟ್ಸ್, ಸುದೀಪ್ ಮಾತಿನ ಅರ್ಥ ಅರಿತುಕೊಂಡು ವೀಕ್ಷಕರು ಕಳಿಸಿರುವ ಗಿಫ್ಟ್ ಗಳು ತಮ್ಮದೇ ಕನ್ನಡಿ ಎಂಬುದು ತಿಳಿದು ಕಂಗಾಲಾಗಿದ್ದಾರೆ.
ಬದಲಾವಣೆ ಜಗದ ನಿಯಮ: ಗಟ್ಟಿಮೇಳಕ್ಕೆ ಮಂಗಳ ಹಾಡಲು ನಡೆಯುತ್ತಿದೆಯಾ ಸಕಲ ಸಿದ್ಧತೆ?
ಎನೇ ಆಗಲಿ, ಇನ್ನೂ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಾರಗಳು ಇರಬಹುದು. ಅಷ್ಟರಲ್ಲಿ ವೀಕ್ಷಕರ ಮನದಲ್ಲಿ ತಮ್ಮ ಬಗೆಗಿನ ಅಭಿಪ್ರಾಯವನ್ನು ಬದಲಾಯಿಸಬಹುದು ಎಂಬುದನ್ನು ಅಲ್ಲಿರುವ ಸ್ಪರ್ಧಿಗಳು ಬೇಗ ಅರಿತುಕೊಂಡಷ್ಟೂ ಒಳ್ಳೆಯದು ಎನ್ನಬಹುದು. ಏಕೆಂದರೆ, ಯಾರಿಗೆ ಯಾವ ವಾರ ಕೊನೆಯಾಗುವುದು ಎಂಬುದನ್ನು ಊಹಿಸುವುದು ಕಷ್ಟ. ಹೀಗಿರುವಾಗ ಸುದೀಪ್ ಮಾತನ್ನು ಸರಿಯಾಗಿ ಅರ್ಥೈಸಿಕೊಂಡಿ ತಮ್ಮದೇನಾದರೂ ಸರಿ ಮಾಡಿಕೊಳ್ಳುವುದು ಇದ್ದರೆ ಸರಿ ಮಾಡಿಕೊಂಡರೆ ಮುಗಿಯಿತು. ಗೆಲುವಿಗೆ ಹಾದಿ ಸಾಕಷ್ಟು ಸುಲಭ ಆಗಲಿದೆ.
ರಣರಂಗವಾಯ್ತು ಬಿಗ್ ಬಾಸ್ ಮನೆ, ಡಾಮಿನೇಟ್ ಮಾಡೋಕೆ ಯಾವಳೋ ಅವ್ಳು ತನಿಶಾ ವಿರುದ್ಧ ಹರಿಹಾಯ್ದ ನಮ್ರತಾ!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.