ಬದಲಾವಣೆ ಜಗದ ನಿಯಮ: ಗಟ್ಟಿಮೇಳಕ್ಕೆ ಮಂಗಳ ಹಾಡಲು ನಡೆಯುತ್ತಿದೆಯಾ ಸಕಲ ಸಿದ್ಧತೆ?

Published : Oct 28, 2023, 03:18 PM ISTUpdated : Oct 28, 2023, 04:08 PM IST
 ಬದಲಾವಣೆ ಜಗದ ನಿಯಮ: ಗಟ್ಟಿಮೇಳಕ್ಕೆ ಮಂಗಳ ಹಾಡಲು ನಡೆಯುತ್ತಿದೆಯಾ ಸಕಲ ಸಿದ್ಧತೆ?

ಸಾರಾಂಶ

ಗಟ್ಟಿಮೇಳ ಧಾರಾವಾಹಿಯ ನಾಯಕ ನಟ ರಕ್ಷಿತ್ ಗೌಡ ಈಗ ಸಿನಿಮಾವೊಂದಕ್ಕೆ ನಾಯಕರಾಗಿಯೂ ನಟಿಸುತ್ತಿದ್ದಾರೆ. ಸದ್ಯ ಸೀರಿಯಲ್ ಮುಕ್ತಾಯದ ಹಂತದಲ್ಲಿ ಇರುವುದರಿಂದ ರಕ್ಷಿತ್‌ಗೆ ಸಿನಿಮಾರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅನುಕೂಲ ಆಗಬಹುದೋನೋ!

ಜೀ ಕನ್ನಡದಲ್ಲಿ 4 ವರ್ಷಗಳಿಂದ (ಮಾರ್ಚ್ 11, 2019) ಗಟ್ಟಿಮೇಳ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಕೊನೆಗೊಳ್ಳಲಿದೆ. ಸದ್ಯ ಈ ಧಾರಾವಾಹಿ ರಾತ್ರಿ 8.00 ಗಂಟೆಗೆ ಪ್ರಸಾರವಾಗುತ್ತಿದೆ. ಈ ಸೀರಿಯಲ್ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಜೀ ಕುಟುಂಬ ಅವಾರ್ಡ್ಸ್ ಬಳಿಕ ಗಟ್ಟಿಮೇಳ ಧಾರಾವಾಹಿ ಅಂತ್ಯ ಕಾಣಲಿದೆ. ಬರೋಬ್ಬರಿ 4 ವರ್ಷಗಳಿಗೂ ಹೆಚ್ಚು ಕಾಲ ಟಿವಿ ವೀಕ್ಷಕರನ್ನು ರಂಜಿಸಿದ ಈ ಸೀರಿಯಲ್, ಇದೀಗ ಕೊನೆಗೊಳ್ಳುವುದು ಕನ್ಫರ್ಮ್ ಆಗಿದೆ. 

ರಕ್ಷಿತ್ ಗೌಡ-ನಿಶಾ ರವಿಕೃಷ್ಣನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಹಿರಿಯ ನಟಿ ಸುಧಾ ನರಸಿಂಹರಾಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ಹಲವು ವೀಕ್ಷಕರ ಅಚ್ಚುಮೆಚ್ಚಿನದಾಗಿದ್ದು, ಟಿಆರ್‌ಪಿ ರೇಸ್‌ನಲ್ಲಿ ಕೂಡ ಸಾಕಷ್ಟು ಮುಂದಿದೆ. ಹಲವು ಬಾರಿ ಟಿಆರ್‌ಪಿ ಲಿಸ್ಟ್‌ನಲ್ಲಿ ಈ ಸೀರಿಯಲ್ ಟಾಪ್ ಸ್ಥಾನವನ್ನೂ  ಅಲಂಕರಿಸಿತ್ತು. 

ಟ್ರೈಲರ್ ರಿಲೀಸ್, 'ಸಪ್ತ ಸಾಗರದಾಚೆ ಎಲ್ಲೋ B' ಸಿನಿಮಾ ಬಿಡುಗಡೆ ಕನ್ಫರ್ಮ್

ಗಟ್ಟಿಮೇಳ ಧಾರಾವಾಹಿಯ ನಾಯಕ ನಟ ರಕ್ಷಿತ್ ಗೌಡ ಈಗ ಸಿನಿಮಾವೊಂದಕ್ಕೆ ನಾಯಕರಾಗಿಯೂ ನಟಿಸುತ್ತಿದ್ದಾರೆ. ಸದ್ಯ ಸೀರಿಯಲ್ ಮುಕ್ತಾಯದ ಹಂತದಲ್ಲಿ ಇರುವುದರಿಂದ ರಕ್ಷಿತ್‌ಗೆ ಸಿನಿಮಾರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅನುಕೂಲ ಆಗಬಹುದೋನೋ! ಜೀ ಕುಟುಂಬ ಅವಾರ್ಡ್ ಬಳಿಕ ಗಟ್ಟಿಮೇಳ ಕೊನೆಗೊಳ್ಳಲಿದ್ದು, ಸದ್ಯ ಹಲವು ಬಹುಮಾನಗಳ ಮೇಲೆ ಕಣ್ಣಿಟ್ಟು ಕುಳಿತಿದೆ ಎನ್ನಬಹುದು. 

ಚೇತನ್ ಅಹಿಂಸಾ: ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ, ಅಲ್ವಾ ನಾರಾಯಣ ಮೂರ್ತಿಯವರೇ?

ಗಟ್ಟಿಮೇಳ ಮುಗಿದರೆ ಅದೇ ಜಾಗದಲ್ಲಿ ಇನ್ನೊಂದು ಸೀರಿಯಲ್ ಪ್ರತ್ಯಕ್ಷವಾಗುತ್ತದೆ. ಚಾನೆಲ್‌ನವರಿಗೆ ಅದರಿಂದ ಯಾವುದೇ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಆದರೆ, ಗಟ್ಟಿಮೇಳ ಅಭಿಮಾನಿಗಳು ಖಂಡಿತವಾಗಿಯೂ ಇದನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಜತೆಗೆ, ಈ ಸೀರಿಯಲ್‌ ನಟನಟಿಯರ ಅಭಿಮಾನಿ ಬಳಗ ಕೂಡ ಸೀರಿಯಲ್ ಸ್ಟಾಪ್ ಆಗುವ ಮೂಲಕ ಟಿವಿ ಪರದೆ ಮೇಲೆ ಅವರ ದರ್ಶನ ಪಡೆಯುವುದನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಆದರೆ, 'ಬದಲಾವಣೆ ಜಗದ ನಿಯಮ' ಎನ್ನುವ ಮಾತು ಗಟ್ಟಿಮೇಳಕ್ಕೂ ಅನ್ವಯಿಸುತ್ತದೆ ಅಲ್ಲವೇ? 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!