Rakshita Shetty ಹುಟ್ಟು ಹೋರಾಟಗಾರ್ತಿಯೇ? ಇಲ್ಲಿದೆ ಈ ಟ್ರೆಂಡ್ ಕ್ರಿಯೇಟರ್ ಲೇಡಿ ಲೈಫ್ ಸ್ಟೋರಿ ಸೀಕ್ರೆಟ್!

Published : Nov 07, 2025, 11:49 AM IST
Rakshita Shetty

ಸಾರಾಂಶ

ಬಿಗ್ ಬಾಸ್ ಕನ್ನಡ ಶೋನಲ್ಲಿ ತಮ್ಮ ವಿಭಿನ್ನ ಕನ್ನಡ ಹಾಗೂ ಮಾತನಾಡುವ ಶೈಲಿಯಿಂದ ಕನ್ನಡ ಕಿರುತೆರೆ-ಬಿಗ್ ಬಾಸ್ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದ್ದಾರೆ, ಹಲವರ ಪೇವರೆಟ್ ಆಗಿದ್ದಾರೆ. ವಿನ್ನರ್ ಯಾರಾಗಬಹುದು ಎಂಬುದನ್ನು ಈಗಲೇ ಹೇಳೋದು ಕಷ್ಟ, ಆದರೆ ಅವರಿಗೆ ಕಬ್ಬಿಣದ ಕಡಲೆ ಆಗೋದ್ರಲ್ಲಿ ಸಂದೇಹ ಇಲ್ಲ

ಬಿಗ್ ಬಾಸ್ ರಕ್ಷಿತಾ ಶೆಟ್ಟಿಯ ಲೈಫ್ ಸೀಕ್ರೆಟ್!

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಸ್ಪರ್ಧಿಗಳಲ್ಲಿ ಅತ್ಯಂತ ಹೆಚ್ಚು ಗಮನಸೆಳೆದವರಲ್ಲಿ ರಕ್ಷಿತಾ ಶೆಟ್ಟಿಯೂ (Rakshita Shetty) ಒಬ್ಬರು. ಹುಟ್ಟಿದ್ದು ತನ್ನ ಅಮ್ಮನ ಊರಾದ ಕರ್ನಾಟಕದ ಪಡುಬಿದ್ರೆಯಲ್ಲಿ, ಬೆಳೆದಿದ್ದು ಮಹಾರಾಷ್ಟ್ರದಲ್ಲಿ. ಮುಂಬೈನಿಂದ 60 ಕೀಮಿ ದೂರದ ನಾಲಸೋಪಾರ ಎಂಬಲ್ಲಿ ರಕ್ಷಿತಾ ಶೆಟ್ಟಿ ಕುಟುಂಬ ವಾಸವಿದೆ ಎನ್ನಲಾಗಿದೆ. ಅಲ್ಲಿ ರಕ್ಷಿತಾ ಅಪ್ಪ ಎಲೆಎಡಿಕೆ ವ್ಯಾಪಾರದ ಅಂಗಡಿ ಇಟ್ಟುಕೊಂಡಿದ್ದು, ಮದ್ಯಮ ವರಮಾನದ ಕುಟುಂಬ ಇದು. ಆ ಕುಟುಂಬದ ಇಬ್ಬರು ಹೆಣ್ಣುಮಕ್ಕಳಲ್ಲಿ ರಕ್ಷಿತಾ ಶೆಟ್ಟಿ ಮೊದಲನೆಯವರು ಎಂಬ ಮಾಹಿತಿ ಇದೆ.

ಶಾಲಾದಿನಗಳಿಂದಲೂ ಓದು ಅಂದರೆ ಅಷ್ಟಕಷ್ಟೇ..!

ಶಾಲಾದಿನಗಳಿಂದಲೂ ರಕ್ಷಿತಾಗೆ ಓದು ಅಂದರೆ ಅಷ್ಟಕಷ್ಟೇ.. ಸ್ಪೋರ್ಟ್ಸ್, ಡಾನ್ಸ್ ಎಂದರೆ ಅಪಾರ ಪ್ರೀತಿ. ಆದರೆ, ಅವರ ಪೋಷಕರು ಜನಸಾಮಾನ್ಯರಂತೆ ಓದಿನ ಬಗ್ಗೆ ಹೆಚ್ಚು ಒಲವುಳ್ಳವರು. ಮನೆಯಲ್ಲಿ ಗೊತ್ತಿಲ್ಲದೇ ತಮ್ಮ ಕ್ರೀಡಾಚಟುವಟಿಕೆಗಳನ್ನು ಮುಂದುವರಿಸಲು ತಮ್ಮ ಸ್ನೇಹಿತೆಯ ಪೋಷಕರನ್ನು ತನ್ನ ಪೋಷಕರೆಂದು ಹೇಳಿಕೊಂಡು ಭಾಗವಹಿಸುತ್ತಿದ್ದರು ಎನ್ನಲಾಗಿದೆ. ಸಾಕಷ್ಟು ಆಟಗಳಲ್ಲಿ ಬಹುಮಾನ ಗೆದ್ದಿದ್ದು ಈಗ ರಕ್ಷಿತಾ ಬಳಿ ನೂರಾರು ಮೆಡಲ್‌ಗಳು ಇವೆಯಂತೆ.

ಹೀಗಾಗಿ ಮಗಳು ಓದಿನಲ್ಲಿ ಹಿಂದೆ ಇರೋದನ್ನು ಸಹಿಸದೇ ಡಾನ್ಸ್ ಕ್ಲಾಸ್‌ ಬೇಡ ಎಂದು ಬಿಡಿಸಿದ್ದಾರಂತೆ. ಆದರೆ, ತಮ್ಮ ಪೋಷಕರಿಗೆ ಗೊತ್ತಿಲ್ಲದಂತೆ ರಕ್ಷಿತಾ ತಮ್ಮ ಕ್ರೀಡಾಚಟುವಟಿಕೆಗಳನ್ನು ಸ್ಕೂಲು-ಕಾಲೇಜಿನಲ್ಲಿ ಮುಂದುವರಿಸಿದ್ದರು. ಬಿಕಾಂಗೆ ಸೇರಿಕೊಂಡ ಬಳಿಕ ಅದ್ಯಾಕೋ ಬೇಡ ಎನ್ನಿಸಿ, ಜರ್ನಾಲಿಸಂ ಕೋರ್ಸ್ ತೆಗೆದುಕೊಂಡು ಇದೀಗ ಬಿಗ್ ಬಾಸ್ ಹಂತದವರೆಗೆ ಬಂದಿದ್ದಾರೆ.

ವಿಭಿನ್ನ ಕನ್ನಡ ಮಾತನಾಡುವ ಶೈಲಿ!

ಇಲ್ಲಿ ಬಿಗ್ ಬಾಸ್ ಕನ್ನಡ ಶೋನಲ್ಲಿ ತಮ್ಮ ವಿಭಿನ್ನ ಕನ್ನಡ ಹಾಗೂ ಮಾತನಾಡುವ ಶೈಲಿಯಿಂದ ಕನ್ನಡ ಕಿರುತೆರೆ-ಬಿಗ್ ಬಾಸ್ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಬಿಗ್ ಬಾಸ್ ಕನ್ನಡ ಶೋದಲ್ಲಿ ರಕ್ಷಿತಾ ಅವರು ಹಲವರ ಪೇವರೆಟ್ ಆಗಿದ್ದಾರೆ. ವಿನ್ನರ್ ಯಾರಾಗಬಹುದು ಎಂಬುದನ್ನು ಈಗಲೇ ಹೇಳೋದು ಕಷ್ಟ ಎನ್ನಬಹುದು. ಆದರೆ, ವಿನ್ನರ್‌ ಸ್ಪರ್ಧಿ ಯಾರೇ ಆದರೂ ಈ ರಕ್ಷಿತಾ ಅವರಿಗೆ ಕಬ್ಬಿಣದ ಕಡಲೆ ಆಗೋದ್ರಲ್ಲಿ ಯಾವುದೇ ಸಂದೇಹ ಇಲ್ಲ ಎನ್ನಬಹುದು.

ಒಟ್ಟಿನಲ್ಲಿ, ತನ್ನ ಸಾಧನೆಗೆ, ಗುರಿ ಮುಟ್ಟೋದಕ್ಕೆ ಚಿಕ್ಕಂದಿನಿಂದಲೇ ಧೈರ್ಯದಿಂದ ಮುನ್ನುಗ್ಗುವ ಛಲ ಹೊಂದಿರುವ ರಕ್ಷಿತಾ, ಸದ್ಯ ಬಿಗ್ ಬಾಸ್ ಮನೆಯಲ್ಲೂ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅವರಿಗೆ ದೊಡ್ಮನೆಯಲ್ಲಿ ಹಲವರ ಸಹಕಾರ ಹಾಗೂ ಕೆಲವರ ವಿರೋಧ ಕೂಡ ಇದೆ. ಬಿಗ್ ಬಾಸ್ ವಿನ್ನರ್ ಆಗಬೇಕು ಎಂಬ ಗುರಿಗೆ ಸಹಜವಾಗಿಯೇ ರಕ್ಷಿತಾ ಶೆಟ್ಟಿ ಕೂಡ ಹೊರತಲ್ಲ. ಸದ್ಯಕ್ಕೆ ತಮಗಿರುವ ಎಲ್ಲಾ ಅಡೆತಡೆಗಳನ್ನು ದಾಟಿ, ರಕ್ಷಿತಾ ಬಿಗ್ ಬಾಸ್ ವಿನ್ನರ್ ಆಗಬಹುದೇ? ಮುಂದಿನ ದಿನಗಳಲ್ಲಿ ಕಾದು ನೋಡಬೇಕಷ್ಟೇ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ
Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?